ಪುಟ:ಶಕ್ತಿಮಾಯಿ.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

49 ಸ.ಚಂದ್ರಿಕೆ ಧರ್ಮಪತ್ನಿಯೆಂದಾಗುವಳೋ, ಆ ದಿನ ಪ್ರತಾಪರಾಯದೇವನಪವಿತ್ರ ವಂಶವು ಚಂಡಾಲವಂಶಕ್ಕಿಂತಲೂ ಅಧಮವಾಗುವದು. ವನೋಹಾರೀ ಲಾಲನ ತಂಗಿಯು ಕುಲಕಲಂಕಿನಿಯು, ಆ ಲಜ್ಜೆಗಾಗಿಯೇ ಅವರೆಲ್ಲರು ದೇಶತ್ಯಾಗವನ್ನು ಮಾಡಿರುವರು. ಅವರ ಕನ್ನೆಯು ನನ್ನ ಸೊಸೆಯೇ? ದಿನಾಜವುರದ ಅರಸನ ರಾಣಿಯೇ? ಇದು ನಾನು ಜೀವ ದಿಂದಿರುವವರೆಗೆ ಆಗತಕ್ಕ ಮಾತಲ್ಲ. ನಿನ್ನ ಇಚ್ಚೆಯಿದ್ದರೆ ನೀನು ಈಕೆಯನ್ನು ಉಪಪತ್ನಿ ಯೆಂದು ಮಾತ್ರ ಇಟ್ಟು ಕೊಳ್ಳಬಹುದು,” ಶಕ್ತಿಯ ದೇಹವು ಸಿಟ್ಟು, ತಿರಸ್ಕಾರ, ಅಪಮಾನವುಗಳಿಂದ ಉರಿಯ ಹತ್ತಿತು. ಆಗ ಅವಳು-'ಮಹಾರಾಣೀ, ತಮ್ಮ ಮಹದ್ವc ಶಕ್ಕೆ ಯೋಗ್ಯವಾದ ಮಾತನ್ನೆ ಮಾಡಿದಿರಿ. ಆದರೆ ಪರಮೇಶ್ವ ದನು ದರಿದ್ರರಿಗೆಂದು ಒಂದು ಸ್ವತಂತ್ರಸಿಯಮವನ್ನು ಮಾಡಿಲ್ಲ. ಪರ ಮೇಶ್ವರನ ಅಸ್ತಿತ್ವವು ನಿಜವಿದ್ದರೆ, ಹಾಗು ನಾನು ನಿಮ್ಮ ಮಗನನ್ನು ಒಮ್ಮನಸಿನಿಂದ ಪ್ರೀತಿಸುತ್ತಿದ್ದರೆ, ಎಂದಾದರೂ ಒಂದು ದಿನ ಇದರ ವಿ ಚಾರವನ್ನು ಆ ಈಶ್ವರನು ಮಾಡೇ ಮಾಡುವನು. ತಾಯಿ, ಈ ದಿವಸ ತಿರಸ್ಕಾರದಿಂದ ಯಾರನ್ನು ನೀಡಪದಕ್ಕೆ ಮುಟ್ಟಿಸಿರುವೆಯೋ, ಒಂದಿ ಬ್ಲೊಂದುದಿನ ನಿಮ್ಮ ಈ ಶ್ರೇಷ ವಂಶದವರು ಆ ಹೀನ ವನೋಹಾರಿ ಲಾಲನ ವಂಶದವರ ಕಾಲಕೆಳಗೆ ಬಿದ್ದು ಗೌರವವನ್ನು ಯಾಚಿಸಬೇಕಾ ದೀತು. ಹೀಗಾಗದಿದ್ದರೆ ಆ ಪರಮೇಶ್ವರನೇ ಇಲ್ಲೆಂದು ನಾನು ಖಂಡಿತವಾಗಿ ತಿಳಿಯುವೆನು. ಶಕ್ತಿಯು ಹೀಗೆ ಅಭಿರವನ್ನು ಕೊಟ್ಟು ದೃತಪದದಿಂದ ಅಲ್ಲಿಂದ ಹೊರಟುಹೋಗಿ ಯಾವದೊಂದು ನೆಳಲಿನಂತೆ ಆ ಅರಣ್ಯದಲ್ಲಿ ಕಾಣದಾದಳು. ರಾಜಕುವರನ ಹಾಗು ಅವನ ತಾಯಿಯ ಕಿವಿಯ ಲ್ಲಿ ಅವಳ ಆ ಅಭಿಶಾಪವು ಭಯ೦ಕರ ಪ್ರತಿಧ್ವನಿಮಾಡಹತ್ತಿತು.