ಪುಟ:ಶಕ್ತಿಮಾಯಿ.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೫ ಮ , ಅಪಮಾನದಿಂದ ಮುಚ್ಚಲ್ಪಟ್ಟ ತುಟಿಗಳು ನಿರಾಶೆಯ ವೇದನೆಯಿಂದ ನಡುಗಹತ್ತಿದವು. ಆಗ ಶಕ್ತಿಯು ಆ ಮಣ್ಣು ಪಾಲಾದ ಹೂವಿನ ಕಣಗಳಮೇಲೆ ಬಿದ್ದು ಹೊರಳಾಡಿ ಬಿಕ್ಕಿ ಬಿಕ್ಕಿ ಅಳುತ್ತ-ಕು ಮಾರ, ಕುಮಾರ ಇದು ನಿನ್ನ ಪ್ರೇಮದ ಸ್ಮತಿಯು, ಎಂದು ನುಡಿದಳು, ಅರಕ್ಷಣದಲ್ಲಿ ಸಿಟ್ಟಿನ ಆದೇಶವು ಉಂtಾಗತ, ಮತ್ತೆ ಅವಳ ಕರುಣಾದುಃಖಗಳು ಅಡಗತೊಡಗಿದವು. ಆಕೆಯು ಕೈಮು ಷ್ಟಿಯಿಂದ ತನ್ನ ಎದೆಗೆ ಗುಬ್ಬಿಕೊಂಡು ತೀವ್ರಸ್ವರದಿಂದ-'ಎಲ್ಲಿ ಯ ನೆನಪು? ಎಲ್ಲಿಯ ಸ್ಮೃತಿಯು? ಸೃತಿಯೇ ಈಗ ಸೇಡಾಗಿ ಪರಿ ಣಮಿಸುವದು, ಭಗವಾನ್ ಸೇಡು-ಸೇಡು!!” ಎಂದು ಒದರಿದಳು. ತನ್ನ ಶಬ್ಯಾಘಾತದಿಂದ ತನಗೇ ಅಂಜಿಕೆ ಬರಲು, ಶಕ್ತಿಯು ನಿರ್ವಾಕ್ ನಿರ್ಜಿವ, ನಿತ್ರಾಣಳಾಗಿಬಿಟ್ಟಳು. ನಿಸ್ತಬ್ಬವಾದ ರಾತ್ರಿಯಲ್ಲಿ ಆ ಕುಸ್ವರವು "ಸೇಡು! ಸೇಡು!! ಸೇಡು!!! ಎಂದು ಅರಣ್ಯದಲ್ಲಿ ಪ್ರತಿಧ್ವನಿಗೊಡಹತ್ತಿತು. ಹೀಗೆ ಕಂಪಿತಹೃದಯದ ಶಕ್ತಿಯು ಆ ಅರಣ್ಯದಲ್ಲಿ ಒಂದು ಗಿಡದ ಕೆಳಗೆ ನೆಲದಮೇಲೆ ಬಿದ್ದುಕೊಂಡಿರಲು, ಯವನೋ ಒಬ್ಬನು ಒಂದು ಆಕೆಯ ಹಸ್ತ ಸ್ಪರ್ಶ ಮಾಡಿದ ಹಾಗಾಯಿತು. ಆಗ ಅವಳು ಆಶ್ಚರ್ಯಗೊಂಡು, ಮೋರೆಯನ್ನೆತ್ತಿ ಕ್ರುದ್ದ ಸ್ವರದಿಂದ-“ನೀನು ಯಾರು?' ಎಂದು ಪ್ರಶ್ನೆ ಮಾಡಿದಳು. ಕೂಡಲೆ “ನಾನು ಮುಸಲ್ಮಾನನು” ಎಂಬ ಉತ್ತರವು ಪ್ರಾಪ್ತವಾಯಿತು. ಮತ್ತೊಬ್ಬ ಸ್ತ್ರೀಯಾಗಿದ್ದರೆ ಈ ಸ್ಥಿತಿಯಲ್ಲಿ ಅಂಜಿಕೊಂಡು ನೆತ್ತಿಯಿಂದಲೇ ಪ್ರಾಣಬಿಡುತ್ತಿದ್ದಳು. ಆದರೆ ಶಕ್ತಿಯು ಸ್ವಾಭಾ ವಿಕವಾಗಿ ಸಾಹಸಿಯಾಗಿದ್ದಳಲ್ಲದೆ, ಸಂಕಟಪರಂಪರೆಗಳೊಳಗೆ ವಿದ್ಯಾ ಗಿನಿಂದ ಆಕೆಯ ಅಂಜಿಕೆಯೆಲ್ಲ ನಷ್ಟವಾಗಿ ಹೋಗಿತ್ತು. ಆದ್ದರಿಂದ