ಪುಟ:ಶಕ್ತಿಮಾಯಿ.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* • •rma - - - - - - ... • 2 - tampu – ಸ, ಚಂದಿಕೆ ಗಳನ್ನು ಹೇಳಿ ತನ್ನ ಮನಸ್ಸನ್ನು ಸಮಾಧಾನಪಡಿಸುತ್ತಿರಬಹುದೆಂದು ತಿಳಿದೇ ಆಕೆಯು ಅವನ ಭಾಷಣದಲ್ಲಿ ಅಷ್ಟು ದುರ್ಲಕ್ಷ ಮಾಡಿದ್ದಳು. ಆದರೆ ಯವನನ ಈ ಕಡೆಯವಾರದಿಂದ ಅವಳಲ್ಲಿ ವಿಸ್ಮಯವುಂಟಾ ಗಲಿಲ್ಲ. ತಾನು ವಿಪುಲಸಂಪತ್ತಿನ ಮಾಲಿಕಳೂ, ವಂಗದೇಶದ ಸಾ ರ್ವಭೌಮ ಪತ್ನಿ ಯ ಆಗುವದರಿಂದ, ನದೀನನಾದ ರಾಜಕುಮಾ ರ ಗಣೇಶದೇವನ ಹಾಗೂ ಅವನ ತಾಯಿಯ ಗರ್ವವನ್ನು ಕ್ಷಣದಲ್ಲಿ ತೊಲಗಿಸಿಬಿಡಬಹುದೆಂದು ಅವಳು ಮನಸ್ಸಿನಲ್ಲಿ ಭಾವಿಸಿದಳು. ಹೀಗೆ ಮನೋಗತವಾದ ಭಾವನೆಯನ್ನೂರ್ತಿಯಿಂದ ಅವಳ ಮುಖದಲ್ಲಿ ಬಿದ ಅತ್ಯಂತ ಗರ್ವಯುಕ್ತ ಹಾಗು ಆಹ್ಲಾದದ ಕಳೆಯು ಆಕೆಯು ಪ್ರತ ಕ್ಷ ವಂಗೇಶ್ವರಿಯದಾಗಾದರೂ ತೋರುವುದೋ-ಇಲ್ಲೊ ಎಂದು ತಿಳಿಯದಾಯಿತು. - ಶಕ್ತಿಯು ಬಾಲ್ಯದಿಂದಲೂ ಎರಡು ಸಂಗತಿಗಳ ಬಗ್ಗೆ ಒಳ್ಳೆ ಧೃಡವಾಗಿ ಪ್ರಯತ್ನಿಸುತ್ತಿದ್ದಳು, ರಾಜಕುದೂರನಲ್ಲಿ ಅಚಲವಾದ ಪ್ರೇಮದಿಂದ ನಡೆಯುವದು ಮೊದಲನೇದು, ತಾನು ಸರ್ವ ಶ್ರೇಷ್ಠಳಾಗಬೇಕೆಂಬ ವಾಸನೆಯು ಎರಡನೇದು, ಶಕ್ತಿಯು ಈ ಎರಡೂ ತಮ್ಮ ಬಯಕೆಗಳನ್ನು ಈ ವರೆಗೆ ತನ್ನ ಹೃದಯದಲ್ಲಿರಿಸಿ ಹಿಂದು ಒಳ್ಳೆ ಆನ್ನೈಯಿಂದ ಅವನ್ನು ಪೋಷಿಸುತ್ತ ಬಂದಿದ್ದಳು. ಒಂದು ಕ್ಷಣದ ಹಿಂದೆ ಆಕೆಯ ಆಶೆಯು ಅಂದರೆ ರಾಜಕುವರನಲ್ಲಿ ಯು ಆಕೆಯ ಅಸ್ತ ಲಿತ ಪ್ರೇಮವು ಭಂಗವಾಯಿತು. ಆದರೆ ಉತ್ತರ ಕ್ಷಣದಲ್ಲಿ ವಿಪುಲವಾದ ಐಶ್ವರ್ಯವು ಆಕೆಗೆ ಕೈಗೊಡಲು, ಆಕೆ ಯಿಂದ ಆ ಸಂಪತ್ತಿನ ಕೈ ಬಿಡುವದಾದೀತೇ? ಶಕ್ತಿಯು ಕೆಲವು ನಿಮಿಷಗಳನ್ನು ಏನೂ ಮಾತಾಡದೆ ಕಳೆದಳು. ಆ ಮೇಲೆ ಅವಳು ಆದರೆ ಸುಲ್ಯಾನಮುತ್ರನು ಮುಸಲ್ಮಾನನು; ನಾನು ಹಿಂದುವು.