ಪುಟ:ಶಕ್ತಿಮಾಯಿ.djvu/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

L'

  • ಚಂದ್ರಿಕೆ

c) ವಾಸದಲ್ಲಿರುವದು ಶುದ್ಧ ತಪ್ಪು. ಶಕ್ತಿ-ಅವನು ನನ್ನ ವಿವಾಹಿತ ಪತಿಯು. ಆಶ್ಚರ್ಯ ಚಕಿತಳಾದ ಯೋಗಿನಿಯು ಲಗ್ನದ ಗಂಡನೇ? ನಿನ್ನ ತಂದೆಯಿಂದ ಈ ಸಂಗತಿಯನ್ನು ನಾನು ಈ ವರೆಗೂ ಕೇಳಿರುವದಿ ಲ್ಲವಲ್ಲಾ!! ಶಕ್ತಿ-ಅವನು ಇದನ್ನರಿಯನು. ನಮ್ಮಿಬ್ಬರಲ್ಲಿ ಗಾಂಧರ್ವ ವಿವಾಹವಾಗಿದೆ. ಬಳಿಕ ಶಕ್ತಿಯು ತಮ್ಮ ಆಟದೊಳಗಿನ ವಿವಾಹ ದ ಸಂಗತಿಯನ್ನು ನಿವೇದಿಸಿದಳು. ಅದನ್ನು ಕೇಳಿ ಯೋಗಿನಿಯು ತುಸು ಕರುಣಾದ್ಯೋತಕನಗೆ ನಕ್ಕು-ತಂಗೀ, ಇದರಲ್ಲಿ ನಿನ್ನ ತಪ್ಪು ಇಲ್ಲ. ಈ ಸಂಸಾರವೇ ಆಟವು; ಸ್ವತಃ ಭಗವಂತನೇ ಆಟದ ಪುರಸ್ಯ ರ್ತನಾ ಗಿರಲು, ನೀನಂತೂ ಕೇವಲ ಅನನುಭವಿಕ ಹುಡಿಗಿ, ನೀನು ಅಟಿ ವನ್ನೇ ಸತ್ಯವೆಂದು ತಿಳಿದದ್ದರಲ್ಲಿ ಆಶ್ಚರ್ಯವೇನಿದೆ? ಆದರೆ ಕುಮಾ ರನಾದರೂ ಹಾಗೆಯೇ ಭಾವಿಸುವನೇನು? ಮತ್ತು ಅವನು ಆಟದೊ ಳಗಿನ ಆ ವಧುವನ್ನು ಈಗ ಪ್ರತ್ಯಕ್ಷ ಮುಸಲಿಕ್ಕೆ ಸಿದ್ದನಿರುವನೇನು? - ಯೋಗಿಯಾದರೂ ಶಕ್ತಿಯಲ್ಲಿ ಉಂಟಾದ ಸಂದೇಹವನ್ನೇ ಆಡಿ ತೋರಿಸಿದಳು. ಯಾರಿಂದಲೂ ಶಕ್ತಿಗೆ ಸಮಾಧಾನವಾಗುವಂಥ ವಚನಗಳೇ ಹೊರಡಲೊಲ್ಲವು. ಎಲ್ಲರಲ್ಲಿಯೂ ಅದೇ ಸಂದೇಹವು. ಎಲ್ಲರೂ_ಹೊಂದಲಾರೆ, ಅವನನ್ನು ಹೊಂದಲಾರೆ ಎಂದೇ ನುಡಿ ಯುತ್ತಿದ್ದರು. ಈ ಶಬ್ದವನ್ನು ಕೇಳಿ ಕೇಳಿ ಶಕ್ತಿಗೆ ಹುಚ್ಚು ಹಿಡಿದಂತಾ ಯಿತು. ನಿರಾಶೆಯಕಡುವೇಗ-ಪ್ರಬಲವಾಯುವು ಬೀಸಿ ಬೀಸಿ ಆಕೆಯ ಹೃದಯ ಕೋಮಲಕರುಣಾಭಾವವನ್ನು ಕಠೋರವಾಗಿ ಮಾಡಿ ಬಿಟ್ಟಿತು. ಆಗ ಅವಳು ಸಿಟ್ಟಿನಿಂದ ನುಡಿದಳೇನಂದರೆ-ಹಾಗೆ ಅವನು ನಡೆಯಲಿಕ್ಕೆ ಒಪ್ಪದಿದ್ದರೆ, ನಾನು ಅವನ ನಾಶವನ್ನು ಮಾಡ