ಪುಟ:ಶಕ್ತಿಮಾಯಿ.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿ pher b <re ಸ, ಚಂದ್ರಿಕಾ ಅವನಾದರೂ ನನ್ನನ್ನು ಈಗ ಕೆಲವು ತಾಸುಗಳ ಪೂರ್ವದವರೆಗೆ ಹಾಗೆಯೇ ಪ್ರೀತಿಸುತ್ತಿದ್ದನು. ಆದರೆ ಈ ದಿವಸ ಸಾಯಂಕಾಲ ದಲ್ಲಿ ಆ ಹೇಡಿಯ, ನೀಚನೂ, ವಿಶ್ವಾಸಘಾತಕನೂ ಆದ ರಾಜಕು ಮಾರನು ತನ್ನ ತಾಯಿಯ ಭಯದಿಂದ ನನ್ನನ್ನು ಹೀಯಾಳಿಸಿಬಿಟ್ಟನು. ಇಷ್ಟೇ ಅಲ್ಲ; ಅ ಕುಟಿಲಹೃದಯದ ತಾಯಿ ಮಕ್ಕಳು ನನ್ನ ಸೋದ ರತ್ತೆಯೊಬ್ಬಳು ಕುಲಕಲಂಕಿನಿಯಾಗಿರುವಳೆಂಬ ಸುಳ್ಳು ಅಪವಾದವ ನ್ನು ಹೊರಿಸಿ ನನ್ನ ಕುಲಕ್ಕೆ ಕಲಂಕವನ್ನಿಟ್ಟು ಜರೆದಿರುವರು. ತಾಯಿ, ಯೋಗಿನಿ, ಭಗವಂತನು ಈ ಲೋಕದಲ್ಲಿದ್ದದ್ದೇ ಸತ್ಯವಾ ದರೆ, ಆ ಕುಮಾರ ಗಣೇಶದೇವನ ವಂಶದವರು ಒಂದಿಲ್ಲೊಂದುದಿನ ನನ್ನ ವಂಶದವರ ಕಾಲಿನಿಂದ ತುಳಿಯಲ್ಪಡಲೇ ಬೇಕು. ಹೀಗಾಗ ದಿದ್ದರೆ ಆ ಭಗವಂತನಲ್ಲಿ ನ್ಯಾಯನಿಷ್ಟುರತೆಯು ಎಲ್ಲಿಉಳೆಯುವದು? ಈ ಪ್ರಕಾರ ಮಾತಾಡಿ ಶಕ್ತಿಯು ಒಂದು ದೀರ್ಘ ನಿಶ್ವಾ ಸವನ್ನು ಬಿಟ್ಟು ಸ್ವಲ್ಪ ಹೊತ್ತು ಸುಮ್ಮನೆ ಕುಳಿತಳು; ಯೋಗಿನಿ ಯ ಬಾಯಿಂದಲೂ ಕೆಲವು ನಿಮಿಷಗಳ ವರೆಗೆ ಮಾತುಹೊರಡದಿರ ಲು, ಆ ಅರಣ್ಯ ಮಧ್ಯದೊಳಗಿನ ಗುಡಿಯೊಳಗೆ ಆ ನಡುರಾತ್ರಿಯಲ್ಲಿ ಮೃಗಶಾಪದಗಳ ಭಯಂಕರ ಕೋಲಾಹಲವು ಪ್ರತಿಧ್ವನಿಗೂಡಹತ್ತಿ ತು. ಬಳಿಕ ಯೋಗಿನಿಯು ಮಾತಾಡಲಾರಂಭಿಸಿದಳು:-ತಂಗೀ, ನಮ್ಮ ಕರ್ಮಾನುಸಾರವಾಗಿ ನಮಗೆ ಸುಖದುಃಖಗಳುಂಟಾಗುತ್ತವೆ; ಮತ್ತು ಹಾಗೆ ಆಗುವದು ಭಗವಂತನ ನ್ಯಾಯಶಾಸನಕ್ಕೆ ತಕ್ಕದ್ದಿರು ಇದೆ. ಅದರಂತೆ ರಾಜಕುಮಾರನಾದರೂ ನಿನ್ನೊಡನೆ ವಿಶೇಷವಾಗಿ ಪ್ರೀತಿಯಿಂದ ನಡೆಯುತ್ತಿದ್ದರೂ, ನಿನ್ನಲ್ಲಿಯ ಒಂದು ವಿಶೇಷ ಅನ ಗುಣದ ಸಲುವಾಗಿ ಅವನು ನಿನ್ನನ್ನು ತಿರಸ್ಕಾರಮಾಡಿ ಬಿಟ್ಟಿದ್ದೇ ನ್ಯಾಯವಾಗಿದೆ. ಹೀಗೆ ಮಾಡುವದರಲ್ಲಿ ಅವನ ಜೀವಕ್ಕೆ ಸಮಾಧಾ ನವಾಗಿರುವದೆಂತಲ್ಲ; ಆದರೆ ಅದನ್ನು ಅವನು ಕೇವಲ ಕರ್ತವ್ಯಕ್ಕಾಗಿ