ಪುಟ:ಶಕ್ತಿಮಾಯಿ.djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ, ಚಂದ್ರಿಕ. ಗಣಗಳು ದೇವಿಗೆ ಆ ಕಾರ್ಯಕ್ಕಾಗಿ ಸಹಾಯಮಾಡುತ್ತಿರುವವೆಂ ದೂ ಶಕ್ತಿಯು ಮನಸಿನಲ್ಲಿ ಕಲ್ಪಿಸಿದಳು. ಹೀಗೆ ವಿಕೃತ ಚಿತ್ರದ ಅವಳು ದೇವಿಯನ್ನು ಹೆಚ್ಚಾಗಿ ದಿಟ್ಟಿಸಿನೋಡಹತ್ತಲು, ಅ ದೇವಿಯ ಬಾಯಿಯಿ೦ದ-ಸೇಡು! ಸೇಡು!! ಎ೦ಬಶಬ್ಬಗಳು ಹೊರಟು ಆ ಮುರಕಗುಡಿಯನ್ನು ನಡುಗಿಸಿ ಬಿಟ್ಟವು; ಹಾಗು ಆ ಗುಡಿಯ ಕಳಭಾಗದಲ್ಲಿ ಪಿಶಾಚಿಗಳು ತಾಂಡವನೃತ್ಯ ಮಾಡುತ್ತಿರುವಂತೆ ಆಕೆಯ ದೃಷ್ಟಿಗೆ ಗೋಚರವಾಯಿತು. ಅದರಿಂದ ಶಕ್ತಿಯು ಮೈ ಮರೆತಳು, ಸೇಡು, ಸೇಡು ಎಂಬ ಶಬ್ದದ ಪ್ರತಿಧ್ವನಿಯಿಂದ ಆಕೆಯ ಹೃದಯವು ಅತ್ಯಂತ ಉತ್ತೇಜಿತವಾಯಿತು. ಆಗ ಅವಳೂ-ಸೇಡು, ಸೇಡು; ಹೌದು ನಾನು ಸೇಡನ್ನೇ ಬಯಸುತ್ತೆ ನೆ ಎಂದು ಒದರಿದಳು, ಶಕ್ತಿಯ ದನಿಯು ಅಡಗುವಷ್ಟರಲ್ಲಿ "ತಥಾಸ್ತು; ನಿನ್ನ ಪೇ ಕ್ಷೆಯು ಈಡೇರುವದು. ನೀನು ಪ್ರಯತ್ನ ಮಾಡಿದರೆ ಅವನ ಸಂಹಾ ರವುಕೂಡ ಆಗಬಹುದು ಎಂದು ಮೃದು-ಗಂಭೀರವಾದ ದೇವವಾಣಿ ಯಾಯಿತು. ಶಕ್ತಿಯ ದೇಹವು ಪುಳುಕಿತವಾಯಿತು. ಆಗ ಅವಳು ಎನ್ನ ಯಚಕಿತ ದೃಷ್ಟಿಯಿಂದ ಆ ದೇವಾಲಯದ ಎಲ್ಲ ಭಾಗವನ್ನು ನೋ ರತೊಡಗಿದಳು. ಎಲ್ಲಿಯ ಏನೂ ಕಾಣಲೊಲ್ಲದು. ನಿರ್ವಾಕ್ ಹಾಗು ವಿಸ್ತಬ್ಧವಾದ ದೇವಿಯ ಪಾಷಾಣಮೂರ್ತಿಯೊಂದು ಎದು ರಿಗೆ ನಿಂತಿತ್ತು. ದೇವಿಯ ಆರಕ್ತವಾದ ನಾಲಿಗೆಯು ಈಗಲೂ ಹಾಗೆ ಯೇ ಕಾಣುತ್ತಿದ್ದು, ದೇವಿಯು ಕೋಪಾವೇಷ್ಟಿತಳಾಗಿರುವಹಾಗೆ ಶಕ್ತಿಗೆ ಭಾಸವಾಯಿತು. ಆಗ ಅವಳು-ದೇವೀ, ನಾನು ಸೇಡನ್ನು ಬಯಸುವನು; ಆದರೆ ರಕ್ತಪಾತವನ್ನು ಮಾತ್ರ ಇಚ್ಚಿಸುವದಿಲ್ಲ. ನಾನು ಕುಮುರನನ್ನೇ ಇಚ್ಚಿಸುವೆನು, ಅವನು ನನಗೆ ವಶವಾಗುವಂತೆ ವರ