ಪುಟ:ಶಕ್ತಿಮಾಯಿ.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* ಚಂದಿಕೆ,

=

  • *
  • *
  • *

ಇದನ್ನು ಕೇಳಿ ಶಕ್ತಿಯು ಸಾಯಂಕಾಲದಂತೆ ಪುನಃ ದೇಹ ಭಾನವನ್ನು ಮರೆತಳು. ಆಗ ಅವಳು ಕಡುಕೋಪದಿಂದ ನೀನು ಸನ್ಯಾಸಿಯೋ ಪಿಶಾಚಿಯೊ? ಎಂದು ಅನ್ನುವಷ್ಟರಲ್ಲಿ ದೇವಿ ಯ ಮೂರ್ತಿಯ ಹಿಂಬದಿಯಿಂದ ಮತ್ತೊಂದು ವ್ಯಕ್ತಿಯು ಕಾಣ ತೊಡಗಿತು. ಅದು ಕೂಡಲೆ ಪಾಪ, ಆ ಸನ್ಯಾಸಿಯ ಮೇಲೇಕೆ ಸಿಟ್ಟಾಗುವೆ? ಕುಮಾರ ಗಣೇಶದೇವನ ದಾಸಿಯಾಗುವದಕ್ಕಿಂತ ನನ್ನ ಪ್ರಾಣೇಶರಿಯಾಗಬಾರದೆ:" . ಒ೦ದು ನುಡಿಯಿತು. ಈ ವ್ಯಕ್ತಿಯೇ ವಂಗೇಶ್ವರ ಸುಲ್ತಾನಪುತ್ರನಾದ ಗಾಯಸುದ್ದೀನನು, ರಾತ್ರಿಯ ಭಯಾನಕವು ಅಡಗಿತು; ಅರುಣೋದಯದ ನಸು ಗೆಂಪಿನ ಪ್ರಭೆಯು ಆ ದಾಳುಗುಡಿಯಲ್ಲಿ ನಿಂತಿದ್ದ ಶಕ್ತಿ ಹಾಗೂ ಸುಲ್ತಾನಪುತ್ರನಾದಗಾಯಸುದ್ದೀನಇದರಮೇಲೆ ಬೆಳಗಿತು. ಸುಲ್ತಾನ ಪುತ್ರನು ಅಡಗಿದಪ್ಪಳದಿಂದ ಎದ್ದು ಬಂದು, ಶಕ್ತಿಯ ಕೈಹಿಡಿದು.... ಸುಂದರೀ, ನೀನು ನಂಗೇರಿಯಾಗುವೆಯೋ ಇಲ್ಲವೋ? ಹೇಳು. ನೀನು ವಶಳಾಗದಿದ್ದರೆ ನನ್ನ ರಾಜ್ಯ, ಸಂಪತ್ತು, ಅಧಿಕಾರ ಹಾಗೂ ಈ ದೇಹವೂ ಕೂಡ ವೃರ್ಧವೇ ಸರಿ' ಎಂದು ನುಡಿದನು, ಕ್ಷಣಹೊತ್ತು ಶಿಲಾಪ್ರತಿಮೆಯಂತೆ ಶಕ್ತಿಯು ಸ್ವಚ್ಛವಾ ವಾಗಿ ನಿಂತುಬಿಟ್ಟಳು. ಒತ್ತಟ್ಟಿಗೆ ರಾಜ್ಯ ಸಂಪತ್ತುಗಳು ಪ್ರೇಮಸನ್ಮಾನಗಳೂ, ಮತ್ತೊತ್ತಟ್ಟಿಗೆ ಅಖಂಡ ದಾರಿದ್ರ ಹಾಗೂ ಆಪ ಮಾನ-ತಿರಸ್ಕಾರಗಳೂ; ಒಬ್ಬನು ತನಗಾಗಿ ಸರ್ವಸ್ವವನ್ನು ಅರ್ಪಿಸಿ ದಾಸನಾಗುವಂತೆಯೂ ಮತ್ತೊಬ್ಬನ ಸಲುವಾಗಿ ತನ್ನ ಜೀವಿತವನ್ನು ಕೂಡ ಅಪಿ೯ಸಿದರೂ ಅವನು ಹೊಂದಲಾರನು, ಹೊಂದುವ ಆಶೆಯ ಇಲ್ಲ. ಈ ಪ್ರಸಂಗದಲ್ಲಿ ತನ್ನ ಭಾಗ್ಯವನ್ನು ಹೆಚ್ಚಿಸಿಕೊಳ್ಳುವಬಗ್ಗೆ ಶಕ್ತಿಗೆ ಬಹಳ ಹೊತ್ತು ವಿಚಾರಮಾಡುತ್ತ ಕೂಡಬೇಕಾಗಲಿಲ್ಲ.