ಪುಟ:ಶಕ್ತಿಮಾಯಿ.djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಕ್ತಿಮಯಿ ೫೭ ಕೂಡಲೆ ಅವಳು ಮೃದುನುಡಿಯಿಂದ_ಜಹಾಂಪನಾಹ, ನಾನು ನಿಮ್ಮ ವಳಾಗುವೆನು. ” ಎಂದು ಹೇಳಿದಳು, ತತ್‌ಕ್ಷಣದಲ್ಲಿ ಸುಲ್ತಾನಪುತ್ರನು ತನ್ನ ಕೊರಳೊಳಗಿನ ಅಮೂಲ್ಯವಾದ ರತ್ನದ ಹಾರವನ್ನು ತೆಗೆದು ಶಕ್ತಿಯ ಕಂಠದಲ್ಲಿ ಹಾಕಿದನು, ಆ ಕೂಡಲೆ ಆಕೆಯ ಮೊಗವು ಸ್ವರ್ಣವರ್ಣದ ಕಾಂತಿಯಿಂದ ಹೊಳೆಯಹತ್ತಿತು; ಮುಚ್ಚಲ್ಪಟ್ಟ ಓಪ್ಲಾಧರಗಳೂ ಕಮಲದಳಗಳಂತೆ ಕಂಪಿತವಾಗ ತೊಡಗಿದವು!! ಹಿಂದಿನ ಪ್ರಕರಣದಲ್ಲಿ ಹೇಳಿದಂತೆ ಅತ್ತ ಯೋಗಿನಿಯು ತನ್ನ ಆತ್ಮ ವೃತ್ತವನ್ನು ಹೇಳುತ್ತಲೇ ಇದ್ದಳು....... ..ಪಾಪದಿಂದ ಪಾಸ ಕ್ಷಯವೂ , ಅನ್ಯಾಯದಿಂದ ನ್ಯಾಯಸಾಧನವೂ ಎಂದೂ ಆಗಲಾರವು. ಹೀಗೆ ಮಾಡುವದರಿಂದ ಪಾಪದ ಭಾರವೂ, ಅನ್ಯಾ ಯದ ಭಾರವೂ ಹೆಚ್ಚು ಮಾತ್ರ ಹೋಗುವವು. ಪುಣ್ಯದಿಂದ ಪುಣ್ಯವೂ ಪಾಪದಿಂದ ಪಾಪವೂ ಬೆಳೆಯುವವೆಂಬ ಪ್ರಾಚೀನರ ಉಕ್ಕಿ ಯು ಸುಳ್ಳಲ್ಲ.........” ಈ ಪ್ರಕಾರ ಯೋಗಿನಿಯು ಮನದಲ್ಲಿ ಆಲೋಚಿಸುತ್ತಿರಲು, ಆಕೆಯ ಕಿವಿಗೆ ದೂರದಿಂದ ವೇಗವಾಗಿ ಬರುತ್ತಿರುವ ಕುದುರೆಗಳ ಖುರಪುಟಗಳ ಸಪ್ಪಳವು ಕೇಳಿಸಿತು. ಇಷ್ಟರಲ್ಲಿ ಅರುಣೋದಯದ ನಸುಗೆಂಪು ಒಡೆಯಿತು. ಆಗ ಅವಳು ಮಂದಿರದ ಹೊರಕ್ಕೆ ಬಂದು ನೋಡುವಷ್ಟರಲ್ಲಿ ಒಬ್ಬ ಮುಸಲ್ಮಾನ ಸ್ವಾರನು ಆಕೆಯ ಸನ್ನಿಧಿಗೆ ಬಂದು- 'ಅವ್ವನವರೇ, ತುಸ ಹೊರಗೆ ಬನ್ನಿರಿ, ಬಾದಶಹರವರ ಅಪ್ಪಣೆಯನ್ನು ಕೇಳಿಕೊಳ್ಳಿರಿ ಎಂದನು. ಆದರೆ ಯೋಗಿನಿಯು ಹೊರಗೆ ಬರಲಿಲ್ಲ, ಅವಳು ಬಾಗಿ ಲಲ್ಲೇ ನಿಂತು ಎದುರಿಗೆ ದೂರದವರೆಗೆ ನೋಡಹತ್ತಿದಳು. ಹತ್ತರ ದಲ್ಲಿಯೇ ಒಂದು ಆಲದ ಮರದ ಕೆಳಗೆ ಒಂದು ಸೈನ್ಯವು ಬೀಡು