ಪುಟ:ಶಕ್ತಿಮಾಯಿ.djvu/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೮ ಸ, ಚಂದ್ರಿಕ ಬಿಟ್ಟಿದ್ದು, ಈಗ ಪ್ರಾತಃಕಾಲವಾದ್ದರಿಂದ ಸೈನಿಕರೆಲ್ಲರೂ ಎದ್ದು ಶಸ್ತ್ರಾಸ್ತ್ರಗಳಿಂದ ಸಜ್ಜಾಗಿ ಶಿಬಿರದ ಬಳಿಯಲ್ಲಿ ಕೂಡಹತ್ತಿದ್ದರು. ಆಗ ಯೋಗಿನಿಯು ಸ್ವಾರನನ್ನು ಕುರಿತು-ಈ ಸೈನ್ಯವು ಯಾರದು? ಎಂದು ಕೇಳಿದನು. “ತಮ್ಮ ಮಂದಿರದಲ್ಲಿ ಅತ್ಯಂತ ಲಾವಣ್ಯವತಿಯಾದ ಯುವ ತಿಯೊಬ್ಬಳು ಇರುವಳಷ್ಟೆ? ಅವಳೊಡನೆ ಲಗ್ನ ಮಾಡಿಕೊಳ್ಳುವದ ಕಾಗಿ ಬಾದಶಹನು ಅವಳನ್ನು ಕರಕೊಂಡು ಹೋಗುವದಕ್ಕೆಂದು ತನ್ನ ದಂಡಿನೊಡನೆ ಬಂದಿರುತ್ತಾನೆ ಎಂದು ಆ ಸ್ವಾರನು ನುಡಿದನು. ಸದಾಶಾಂತವಾದ ಯೋಗಿನಿಯ ಮುಖಮುದ್ರೆಯು ಕೂಡ ಈ ಮಾತನ್ನು ಕೇಳಿ ತುಸ ವಿಕೃತವಾಯಿತು. ಆಗ ಅವಳು ರೋಷ ದಿಂದ-ಆಕೆಯು ಹಿಂದೂ ಕನೈಯೆಂಬದು ಬಾದಶಹನಿಗೇಕೆ ತಿಳಿ ಯದು? ಆಕೆಯ ಕಡ ಅವನ ವಿವಾಹವಾಗುವದುಂಟೆ? ಸ್ವಾರ-ಮುಸಲ್ಮಾನರಿಗೆ ಹಿಂದೂ ಕನೈಯೊಡನೆ ವಿವಾಹ ಬೆಳಿಸಲಿಕ್ಕೆ ಬಾಧಕವಿಲ್ಲ. ಮುಸಲ್ಮಾನೀ ಧರ್ಮವು ಅತ್ಯಂತ ಉದಾರ ಧರ್ಮವು; ಜಗತ್ತಿನ ಧರ್ಮಗಳಲ್ಲಿ ಶ್ರೇಷ್ಠವಾದದ್ದು, ಯಾವನು ಈ ಧರ್ಮದಂತೆ ನಡೆಯುವನೋ ಅವನು ಜಗತ್ತನ್ನೇ ತನ್ನ ಧರ್ಮ ಕೈ ಎಳೆದುಕೊಳ್ಳಲು ಶಕ್ತನಾಗುತ್ತಾನೆ. ನಾನು ಆ ಯುವತಿ ಯನ್ನು ಇಲ್ಲಿಂದ ಹೊರಡಿಸಿಕೊಂಡು ಹೋಗಲಿಕ್ಕೆ ನಿಮ್ಮೆಡೆಗೆ ಬಂಡಿ ರುತ್ತೇನೆ. ಆಗ ನಿಶ್ಚಯಾತ್ಮಕ ಸ್ವರದಿಂದ ಯೋಗಿನಿಯು--ಆಗದು, ಅದು ನಿನ್ನಿಂದಾಗದು. ಆಕೆಯ ತಂದೆಯು ಅವಳನ್ನು ನನಗೊಪ್ಪಿಸಿ ಬೇರೂರಿಗೆ ಹೋಗಿರುವದರಿಂದ, ಅವನು ಮರಳಿ ಬರುವವರೆಗೆ ನಾನು ಆಕೆಯನ್ನು ನಿಮಗೊಪ್ಪಿಸಲಾರೆನು,