ಪುಟ:ಶಕ್ತಿಮಾಯಿ.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತಮಯಿ. ದ್ರೋಹಿಯಾಗಿರುವನು' ಎಂದು ಡಂಗುರದವನ ಉತ್ತರವನ್ನು ಕೇಳಿ ಆ ವ್ಯಕ್ತಿಯು ಪಾಷಾಣಮೂರ್ತಿಯಂತೆ ಸೃಂಭಿತವಾಯಿತು. ಶಕ್ತಿ ಮಯಿಯನ್ನು ಗಾಯಸುದ್ದೀನನು ವರಿಸಿದರೂ ಅಷ್ಟೇ, ಬಾದಶಹನು ವರಿಸಿದರೂ ಅಷ್ಟೇ; ಆ ಆಗಂತುಕ ವ್ಯಕ್ತಿಯು ಆ ಸುದ್ದಿಯಿಂದ ಇಷ್ಟೇಕೆ ಎದೆಯೊಡಕೊಳ್ಳಬೇಕು? ಆದರೆ ಸಂಬಂಧವಿಲ್ಲದೆ ಯಾರು ಯಾರ ವಿಷಯಕ್ಕೂ ಮರಗುವದಿಲ್ಲ, ಚಿಂತೆಮಡುವದಿಲ್ಲ. ಆದ್ದರಿಂದ ಶಕ್ತಿಯ ವಿಷಯದ ಆ ಸುದ್ದಿಯನ್ನು ಕೇಳಿ ಅತ್ಯಂತ ಅಸಮಾಧಾ ನತಾಳಿದ ಆ ವ್ಯಕ್ತಿಯು ಬೇರೆ ಯಾರೂ ಆಗಿರದೆ, ದಿನಾಜ ಪುರದ ರಾಜಪುತ್ರನಾದ ನಮ್ಮ ಗಣೇಶದೇವನೇ ಆಗಿದ್ದನೆಂಬದನ್ನು ವಾಚ ಕರು ಊಹಿಸಿರಬಹುದು, ಇರಲಿ, ಕುಮಾರ ಗಣೇಶದೇವನು ಡಂಗುರದವನು ಸಾರಿದ ಸಂಗತಿ ಯನ್ನು ಕೇಳಿ ವಿಸ್ಮಿತನಾಗಿ ನಿಂತಿರಲು, ಅವನಲ್ಲಿ ಅದಕ್ಕೂ ಹೆಚ್ಚು ವಿಸ್ಮಯವುಂಟಾಗುವ ಮತ್ತೊಂದು ಪ್ರಸಂಗವು ಒದಗಿತು. ನನ್ನ ದುರಿಗಿರುವ ವ್ಯಕ್ತಿಯಾಗದಿದು? ಮಹಾರಾಜ ಗಣೇಶದೇವನಲ್ಲವೆ? ನಿನ್ನ ಸಮಕ್ಷಮದಲ್ಲಿ ಈ ಅವಿಚಾರವೇ? ಸ್ತ್ರೀಯರಿಗೆ ಈ ಪ್ರಕಾರದ ಅಪಮಾನವೇ? ಹೀಗೆ ಅವಹೇಲನೆಯು ನಡೆದಿದ್ದರೂ ನೀನು ಪ್ರಸ್ತರ ಮೂರ್ತಿಯಂತೆ ನಿಂತಿರುವೆಯಲ್ಲ! ಕುಮಾರ, ಥ ನಿನ; ನಿನ್ನ ಬಾಳಿಗೆ ಎಷ್ಟು ಛೀ ಹಾಕಿದರೂ ಕಡಿಮೆಯೇ. ನೀನೇಯೇನು ವಂಗಮಾತೆಯ ಕುಲದೀಪಕ ರಾಜಕುಮಾರನು? ಎಲೆ ಅಭಾಗಿನಿಯಾದ ಜನ್ಮಭೂಮಿ ಯೇ, ನಿನ್ನ ದೆಂಥ ದುರ್ದೆಸೆಯಿದು? ” ಎಂಬ ಉದ್ಘಾರಗಳು ಬಹು ಕರುಣಾಯುಕ್ತ ಧ್ವನಿಯಿಂದ ಕುಮಾರನಿಗೆ ಕೇಳಿಸಿದವು. ಕುಮ ರನು ಅತ್ತ ಕಡೆಗೆ ಹೊರಳಿ ನೋಡಲು, ಸಮೀಪದಲ್ಲಿಯೇ ಒಬ್ಬ ತೇಜಃಪುಂಜಳಾದ ಯೋಗಿನಿಯು ಆ ಸೈನಿಕರ ಪ್ರತಿಬಂಧದಲ್ಲಿದ್ದದ್ದು ಕಂಡಿತು, ಕೂಡಲೆ ಅವನು ಸೈನಿಕರಿಗೆ_“ಇದೇನು? ಈಕೆಯನ್ನು ಪ್ರತಿಬಂಧಿಸಿರುವದೇಕೆ? ಎಂದು ವಿಸ್ಮಯಾಶ್ಚರ್ಯದಿಂದ ಕೇಳಿದನು,