ಪುಟ:ಶಕ್ತಿಮಾಯಿ.djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ, ಚಂದ್ರಕ. ಸೈನಿಕರು ಬಾದಶಹನ ಹುಳುವನ್ನೂ , ಯೋಗಿನಿಯ ವರನ ವನ್ನೂ ಸಾದ್ಯಂತವಾಗಿ ಕುಮಾರನಿಗೆ ತಿಳಿಸಿ-ಮೆಹರಬಾನ, ಬಾದ ಶಹರವರ ಅಪ್ಪಣೆಯ ಮೇರೆಗೆ ನಾವು ಇವಳನ್ನು ಬಂಧಿಸಿಕೊಂಡು ನಡೆದಿದ್ದೇವೆ, ಎಂದರು. ಆಗ ಯೋಗಿನಿಯು ನಡುವೇಬಾಯಿ ಹಾಕಿಒಬ್ಬರು ಕಳವು ಮೂಡಬೇಕು. ಇನ್ನೊಬ್ಬರಿಗೆ ಗಲ್ಲು ವಿಧಿಸಬೇಕು. ಇದೇ ಅಲ್ಲವೇ ನಿಮ್ಮ ಸುವಿಚಾರದ ನ್ಯಾಯವು? ಎಂದಳು. ಯೋಗಿನಿಯನ್ನು ನಿಷ್ಕಾರಣವಾಗಿ ಬಂಧಿಸಿದ್ದನ್ನು ನೋಡಿ ಸಹಿಸಲಾರದ ಆ ವೀರ ಧೀರನಾದ ಕುವರನು, ತನ್ನ ಟೊಂಕದ ಖಡ್ಗವನ್ನು ಬಿಚ್ಚಿ ಕೈಯಲ್ಲಿ ಹಿಡಿದು ವೇಗದಿಂದ ಝಳಪಿಸುತ್ತ ಸೈನಿ ಕರನ್ನು ಬದಿಗೆಮಾಡುತ್ತ ಯೋಗಿನಿಯ ತೀರ ಸನಿಯಕ್ಕೆ ಹೋಗಹತ್ತಿ ದನು. ಈ ಕೃತಿಯಿಂದ ಸೈನಿಕರಿಗೆ ಅವನ ಉದ್ದೇಶವು ತಿಳಿಯಲು, ಅವರು ಕುಮರನನ್ನು ಕುರಿತು ದೈನವಾಣಿಯಿಂದ-ಧರ್ಮರಾಜ ಮಹಾರಾಜ, ಈಕೆಯನ್ನು ಹೀಗೆ ಬಿಡಿಸಿಕೊಂಡು ಹೋಗಿ ನೀವು 'ಶರ ಣಾಗತ ರಕ್ಷಕ'ರಾಗಿ ಧರ್ಮಕಾಯ್ದಂತಾಗುವದು ಸತ್ಯವ; ಆದರೆ ಹೀಗೆ ಮಾಡುವದರಿಂದ ಬಡಪಾಣಿಗಳಾದ ನಮ್ಮ ಮೇಲೆ ಮಾತ್ರ ನೀವು ಭಯಂಕರ ಸಂಕಟ ವನ್ನು ತರುವಿರಿ, ಈಕೆಯನ್ನು ಬಿಟ್ಟು ಕೊ ಟ್ಟರೆ ಫೌಜದಾರ ಸಾಹೇಬರು ನಮ್ಮ ಮೇಲೆ ವಿಷಕಾರುವರು' ಎಂದು ನುಡಿಯುತ್ತ ಕುಮಾರನ ಕೈಯ ಹದನಾದ ಶುಭ್ರ ಖಡ್ಗದ ಪೆಟ್ಟು ಗಳು ತಾಕದಂತೆ ಹಿಂದೆ ಹಿಂದೆ ಸರಿಯಹತ್ತಿದರು. ಹೀಗೆ ಸೈನಿಕರೆ ೪ರ ಸನ್ಯಾಸಿನಿಯಿಂದ ದೂರ ಸರಿದು ನಿಂತರು. ಆಗ ಕುಮಾರನು ಅವಳ ಬಳಿಗೆ ಹೋಗಿ ಅವಳ ರಟ್ಟೆಗೆ ಹಚ್ಚಿರುವ ಹಗ್ಗಗಳನ್ನು ತುಂಡ ರಿಸಿ ಅವಳನ್ನು ಬಂಧ ಮುಕ್ತವಾಗಿ ಮೂಡಿ ನುಡಿದನೇನಂದರೆ;-ದಂ ಡಾಳುಗಳೇ ನನ್ನ ಈ ಕೃತ್ಯಕ್ಕಾಗಿ ನೀವುಅಂಜುವ ಕಾರಣವಿಲ್ಲ: ಈ ವಿಷ ಯದಲ್ಲಿ ನಿಮ್ಮ ದೇನೂ ತಪ್ಪಿಲ್ಲೆಂದು ನಾನು ಸೇನಾಪತಿಗೆ ತಿಳಿಸುವೆನು.