ಪುಟ:ಶಕ್ತಿಮಾಯಿ.djvu/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

LL ಕೆ. ಚಂದ್ರ, ಸಿನಿಯ ಈ ಅನುಮಾನವೇ ನಿಜವಾಯಿತೆಂಬದು ವಾಹ ಕರಿಗೆ ಮುಂದೆ ತಿಳಿಯಬಹುದು. ಎಂಟನೆಯ ಪ್ರಕರಣ. ವಿರಹತಾಪ , GS, ವಸಂತಕಾಲದ ಅಬ್ಬರವು ಮುಗಿದು ವಷ೯ ಕಾಲವು ತಲೆ ಹಾಕಹತ್ತಿದೆ. ಸಾಯಂಕಾಲದ ಸಮಯ ವು; ಹಸರು ಚಿಗರುಗ ಳಿಂದ ಸುಶೋಭಿತವಾದ ಕಾನನದಲ್ಲಿ ಪ್ರಫುಲ್ಲ ಮುಖಿಯರಾದ ರಮ ಣಿಯರು ಆನಂದದಿಂದ ವಿಹಾರ ಮಾಡುತ್ತಲಿದ್ದಾರೆ; ಸೂಜಿ ಮಲ್ಲಿಗೆ, ಚಂಪಕ, ಸುರಿಗೆ ಮೊದಲಾದ ಸುಗಂಧಪೂರಿತ ಹೂಗಳ ಮಾಲೆಗೆ ಳನ್ನು ಕಟ್ಟುವದರಲ್ಲಿ ಅವರು ತಲ್ಲೀನರಾಗಿದ್ದಾರೆ. ರಂಗಿಣಿಯ ಕಂಠವು ಬಹು ಇ೦ಪಾದ್ದರಿಂದಲೂ, ಆಕಯು ಗೀತಗಳನ್ನು ಬಹು ಸರಸ ವಾಗಿ ಅನ್ನುತ್ತಿದ್ದದರಿಂದಲೂ ಗೆಳತಿಯರೆಲ್ಲರೂ ಆಕೆಗೆ ಒಂದು ಹಾಡನ್ನು ಅನ್ನಲಿಕ್ಕೆ ಆಗ್ರಹದಿಂದ ಹೇಳುತ್ತಿದ್ದಾರೆ, ಆದರೂ ರಂಗಿಣಿಯು ಅವರ ಮಾತಿನ ಕಡೆಗೆ ತನ್ನ ಲಕ್ಷವಿಲ್ಲದಂತೆ ನಟಿಸುತ್ತ ತನ್ನ ಮಾಲೆಯನ್ನು ಒತ್ತರದಿಂದ ಕಟ್ಟುತ್ತಿದ್ದಳು. ಆಗ ಕುಸು ಮಾವತಿಯು ಅವಳನ್ನು ಕುರಿತು ಕುಸುಮ-ರಂಗಿಣಿ, ನಿನ್ನ ಕಿವಿಗಳು ಕೇಳುವದಿಲ್ಲೇನು? ಗೆಳತಿಯರಲ್ಲಿ ಇನ್ನೊಬ್ಬಳು-ಕಾಮಿನಿಯು;-ಅದೇಕೆ? ವೃದ್ಧ ಪತಿಯನ್ನು ವರಿಸಿದಂದಿನಿಂದ ನಮ್ಮ ರಂಗ ತಾಯಿಯ ಕಿವಿ ಗಳಾದರೂ ಗಂಡನಂತೆಯೇ ತುಸ ಮಂದ ಆಗಿರಬಹುದೇನು? | ಮತ್ತೊಬ್ಬಳು-ಕಮಲಿನಿಯ-ಹಾಗಲ್ಲರೇ ತಾಯಿ, ರಂಗಿ