ಪುಟ:ಶಕ್ತಿಮಾಯಿ.djvu/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಕ್ತಿಮಯಿ. ೬೭ ಣಿಯ ಕಿವಿಗಳು ಚೆನ್ನಾಗಿ ಕೇಳುತ್ತವೆ. ಆದರೆ ಆ ಮುದುಕ ಗಂಡನ ಸಹವಾಸದಿಂದ ಅವಳಲ್ಲಿ ಎಡ್ಡತನವು ಮಾತ್ರ ಪೂರಾ ಮೈ ಯುಂಡು ಹೋಗಿದೆ. ಸಂಸಾರದಲ್ಲಿ ಎರಡನೇ-ಮರನೆ ಹೆಂಡಿರೇ ತಮ್ಮ ಗಂಡಂದಿರ ಮಾತು ಕೇಳುವದರಲ್ಲಿ ಎಚ್ಚರಾಗಿ ಮೈಯುಳಿಸಿ ಕೊಳ್ಳುತ್ತಿರಲು, ನಮ್ಮ ರಂಗಿಣೀ ಬಾಯಿಯಂತೂ ಐದನೆಯ ಹೆಂಡತಿಯಾಗಿರುವದರಿಂದ ಈಕೆಯು ಇಷ್ಟು ಎಳಾಗುವದೇ ನಾಶ್ಚರ್ಯವು? ಕುಸುಮ-ಕಮಲಿನೀ, ನಮ್ಮ ರಂಗೂಬಾಯಿಯು ಹಾಗೇ ನೂ ಇಲ್ಲ; ಆದರೆ ಆಕೆಯ ಪತಿಯು ರಾಜಾಶ್ರಯದಲ್ಲಿ ಪ್ರಸಿದ್ದ ಗಾಯಕನಿರುವದರಿಂದ ಅವನು ಕಂಡ ಕಂಡಲ್ಲಿ ಹಾಡುವನೇ? ಅದ ರಂತೆ ಅವನ ಹೆಂಡತಿಯಾದ ನಮ್ಮ ರ೦ಗಿಣೀಬಾಯಿಯಾದರೂ ರಾ ಜೈಯ ಪ್ರಿಯ ಸಖಿಯಾದ ಗಾಯಿಕೆಯಾದ್ದರಿಂದ ನೀವು ಹಾಡು ಹಾಡಂದಲ್ಲಿ ಅವಳು ಹಾಡುವಳೇ? ಕಾಮಿನಿ-ಹಾಗಲ್ಲ, ಸಬಿಯರೇ ಹಾಗಲ್ಲ. ರಂಗಿಣೀಬಾ ಯಿಯ ವೃದ್ದ ಪತಿಯು ರಾಜಾಜ್ಞೆಯಂತೆ ನಡೆಯುವದರಲ್ಲಿ ತತ್ಪರ ನಾಗಿರುವಂತೆ, ನಮ್ಮ ತರುಣ ರಂಗಿಣೀಬಾಯಿಯಾದರೂ ರಾಜ್ಞೆಯ ಆಜ್ಞೆಯಂತೆ ತಪ್ಪದೇ ನಡೆಯುವಳು. ಆದ್ದರಿಂದ ನೀವು ಆಕೆಯಿಂದ ಗೀತವನ್ನ ನಿಸಿಕೊಳ್ಳಬೇಕಾದರೆ ನಿರೂಪಮಾ ರಾಣಿಗೆ ವಿನಂತಿ ಮಾಡಿ ಕೊಳ್ಳಿರಿ, ಅಂದರೆ ಅಕ್ಕಸಾಲಿಗನು ಮುರುವು ಚುಚ್ಚಿದಂತಾಗುವದು. ಬಳಿಕ ಆ ಎಲ್ಲ ಗೆಳತಿಯರು ಅಲ್ಲಿಯೇ ಒತ್ತಟ್ಟಿಗೆ ಹೂಮಾ ಲೆಯನ್ನು ಕಟ್ಟುತ್ತ ಕುಳಿತಿದ್ದ ನಿರೂಪಮೆಗೆ ತಮ್ಮ ಆಶಯವನ್ನು ತಿಳಿಸಿದರು. ಕೂಡಲೆ ನಿರೂಪಮೆ ಯು ರಂಗಿಣಿಗೆ ಕಣ್ಣ ಸನ್ನೆ ಮಾಡಿ ಹಾಡಹೇಳಲು ಸೂಚಿದಳು. ಆಗ ರಂಗಿಣಿಯು ತನ್ನ ಸಾರಂಗಿಯನ್ನು ಬಾರಿಸುತ್ತ ಹಾಡ ತೊಡಗಿದಳು.