ಪುಟ:ಶಕ್ತಿಮಾಯಿ.djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೦ ಸ, ಚಂದ್ರಿಕ. ಟಿಕೆಯಲ್ಲಿ ವಿಶ್ರಮಿಸಿದ್ದ ಕುಮಾರಗಣೇಶದೇವನಿಗೆ ಅಸ್ಪಷ್ಟವಾಗಿ ಕೇಳಬರುತ್ತಿತ್ತು. ಶಕ್ತಿಯ ಬಗ್ಗೆ ಇವರು ಏನೇನೋ ಆಡಿಕೊಳ್ಳು ತಿರುವರೆಂಬದು ಅವನಿಗೆ ತಿಳಿಯಿತು. ಆಗ ಅವನು ಶಕ್ತಿಮಯಿಯ ಹಾಗು ತನ್ನ ಪೂರ್ವ ವಯಸ್ಸಿನೊಳಗಿನ ಆಟನೋಟಗಳನ್ನು ಮನ ನಸ್ಸಿನಲ್ಲಿ ತಂದು ಶಕ್ತಿಯ ಅಖಂಡ ಪ್ರೇಮದ ಬಗ್ಗೆ ಯೋಚಿಸುತ್ತಿ ರಲು ಎಷ್ಟೋ ಹೊತ್ತಿನವರೆಗೆ ಬಾಹ್ಯ ಸೃಷ್ಟಿಯು ಅವನಿಗೆ ಶೂನ್ಯ ಮಯವಾಗಿ ತೋರಿತು. ಸಂಧ್ಯಾ ಕಾಲವೊದಗಿತು, ನಿಶಾಕಾಲದ ಭೀಷಣ ಸ್ವರೂಪವು ಸಂದಿಗೊಂದಿಗಳಲ್ಲಿ ಪ್ರಕಟವಾಗಹತ್ತಿತು. ಆದರೂ ಅದು ಶುಕ್ಲ ಪಕ್ಷವಾಗಿದ್ದು ಅಂದು ಪೂರ್ಣಮೆಯಾದ ರಿಂದ ತುಸ ಹೊತ್ತಿನಲ್ಲಿ ಪೂರ್ವ ದಿಕ್ಕಿನಲ್ಲಿ ದೊಡ್ಡ ಬಂಡಿ ಗಾಲಿಯ ಆಕಾರದ ಕೆಂಪನ್ನ ಚಂದ್ರ ಬಿಂಬವು ಪ್ರಕಾಶಿಸಹತ್ತಿತು. ಚಂದ್ರನು ತನ್ನ ಮೈ ಮೇಲಿನ ಕೆಂಪು ಆವರಣವನ್ನು ಬಿಸುಟಿ ಶುಭ್ರ ವಸ್ತ್ರ ವನ್ನು ಧರಿಸಲು ಅಲ್ಲಲ್ಲಿ ತಲೆಹಾಕುತ್ತಿದ್ದ ಕತ್ತಲೆಯು ನಾಚಿಕೊಂಡು ಮಾಯವಾಗಹತ್ತಿತು. ಹೀಗೆ ಸುಮಾರು ಎರಡು ತಾಸು ರಾತ್ರಿ ಯಾದರೂ ಶಕ್ತಿಮಯಿಯ ಧ್ಯಾನದಲ್ಲಿ ಏಕಾಗ್ರಚಿತ್ತನಾದ ಕುಮಾ ರನು ಸಮಾಧಿಯನ್ನು ಇಳಿಸಿದ್ದಿಲ್ಲ. ನಿರೂಪಮೆಯು-ಕುಮಾರನ ಪಟ್ಟ ದರಸಿಯು, ಸಂಧ್ಯಾ ಕಾಲದಲ್ಲಿಯೇ ತನ್ನ ಗೆಳತಿಯರೊಡನೆ ಬಿಡಾ ರಕ್ಕೆ ಹೋಗಿದ್ದಳು. ಆದರೆ ಎರಡು ತಾಸು ರಾತ್ರಿಯಾದರೂ ಕುಮಾ ರನು ಬಿಡಾರಕ್ಕೆ ಬಾರದಿರಲು, ಆಕೆಯು ಅವನಲ್ಲಿರುವನೆಂದು ಪರಿಚಾ ರಕರನ್ನು ವಿಚಾರಿಸಿದಳು. ಕುಮಾರನು ಸಾಯಂಕಾಲಕ್ಕೆ ಉಪವನ ದಲ್ಲಿ ವಿಹರಿಸಲಿಕ್ಕೆಂದು ಹೋದವನು ಇನ್ನೂ ಬಂದಿಲ್ಲವೆಂದು ಹೇಳಿದ ಸೇವಕರ ಮಾತನ್ನು ಕೇಳಿ, ಬಿಡಾರದಿಂದ ತೀರ ಸಮೀಪದಲ್ಲಿರುವ ಆ ಉಪವನಕ್ಕೆ ತಾನೊಬ್ಬಳೇ ಹೊರಟಳು, ನಿರೂಪಮೆಯು ಬಹು ಗಂ ಭೀರ ಸ್ವಭಾವದವಳು. ಆಕೆಯ ಮನಸಿನಲ್ಲಿ ಕುಕಲ್ಪನೆಗಳೇ ಬರುತ್ತಿ