ಪುಟ:ಶಕ್ತಿಮಾಯಿ.djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦ ಶಕ್ತಿಮಯಿ ೭೩ ಕುಮಾರನು ನಿರೂಪಮೆಯ ದನಿಯನ್ನು ಕೇಳಿ ಸಮಾಧಿಭ್ರ ಪೈನಾದನು. ಎದುರಿಗೆ ಪೂರ್ಣಕಲೆಗಳಿಂದ ಸುಶೋಭಿತವಾದ ಚಂದ್ರಮಂಡಲವು ತೋರಿತು. ತತ್ ಕ್ಷಣದಲ್ಲಿಯೇ ನವಯೌವನದ ಸಂಪೂರ್ಣ ಸೌಂದರ್ಯದ ಪುತ್ಥಳಿಯಾದ ನಿರೂಪಮೆಯ ಕಂಡಳು. ಆದರೆ ಪೂರ್ಣ ಚಂದ್ರನಲ್ಲಿಯ ಹರಿಶಾಂಕದಿಂದ ತುಸ ವಿದೂ ಪತೆಯು ದಿಟ್ಟಿಸಿ ನೋಡುವವರಿಗೆ ಕಾಣುವಂತೆ ನಮ್ಮ ಆ ನಿರೂಪಮೆ ಯಲ್ಲಿಯ ಕೊಧದ ಸುಳುವು ಕುಮಾರನಿಗೆ ತೋರಿತು. ಇದ ರಿಂದ ಕುಮಾರನಲ್ಲಿ ಹೆಚ್ಚು ಅಸ್ವಸ್ಥತೆಯುಂಟಾಯಿತು. ಶಕ್ತಿಯ ವಿಷಯದ ಚಿಂತೆ, ನಿರೂಪಮೆಗೆ ಮೈಮರವಿನಿಂದ ಶಕ್ತಿಯೆಂದು ಭಾವಿಸಿ ಕರೆದ ಚಿಂತೆ ಇವುಗಳಿಂದ ಅವನು ಮನಸ್ಸಿನಲ್ಲಿ ಬಹಳವಾಗಿ ನೊಂದುಕೊಂಡನು. ಆದರೂ ಅದನ್ನು ಸರಳಸ್ವಭಾವದ ಆ ತನ್ನ ರಾಣಿಗೆ ತಿಳಿಸಲು ಧೈರ್ಯಸಾಲದ್ದರಿಂದ ಅವನು ತನ್ನ ಮನೋದು ಖವನ್ನು ನುಂಗಿಕೊಳ್ಳುತ್ತ-ನಿರೂಪಮೇ ಬಾ, ಕುಳಿತುಕೊ; ಎಂದು ಔಪಚಾರಿಕವಾಗಿ ನುಡಿದನು. ಆದರೆ ನಿರೂಪಮೆಗೆ ಗಂಡನ ಈ ವರ್ತನದಿಂದ ಸಮಾಧಾನ ವೆನಿಸಲಿಲ್ಲ. ಆಕೆಗೆ ಮತ್ತಿಷ್ಟು ದುಃಖವಾಯಿತು, ಅದರಿಂದ ಅವಳ ಕಪೋಲಗಳು ಅಶ್ರುಬಿಂದುಗಳ ಪ್ರವಾಹದಿಂದ ಹೊಳೆಯ ಹತ್ತಿದವು. ಆಕೆಯು ಕುಮಾರನ ಬಳಿಯಲ್ಲಿ ಕೂಡ್ರಲಿಲ್ಲ; ನಿಂತ ಲ್ಲಿಯೇ ಸ್ತಬ್ಧವಾಗಿ ನಿಂತುಬಿಟ್ಟಳು. ನಿರೂಪಮೆಯು ಈಗ ಹದಿನಾ ರು ವರ್ಷದ ತರುಣಿಯು. ಆದರೆ ಸಂಸಾರದ ಕುಟಿಲಾಚರಣೆಗಳೊಂ ದನ್ನೂ ಅರಿಯದ ಸರಳ ಸ್ವಭಾವದ ಆಕೆಯ ಮುಖವು ಇಂಥ ಈ ನಿಗ್ಗರದ ಸಮಯದಲ್ಲಿ ಕೂಡ ಕೇವಲ ಬಾಲಿಕೆಯಂತೆ ನೋಡುವವ ರಿಗೆ ಕಾಣಿಸದೆ ಇರುತ್ತಿದ್ದಿಲ್ಲ! ಇತ್ತ ಕುಮಾರನ ಮನಸ್ಸಾದರೂ ಕಡು ಖೇದದಿಂದ ಆವರಿ