ಪುಟ:ಶಕ್ತಿಮಾಯಿ.djvu/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೪ ಸ, ಚಂದ್ರಿಕೆ. ಸಿರಲು, ಆವನು ನಿರೂಪಮೆಯು ಕುಳಿತುಕೊಂಡಳೋ ಇಲ್ಲವೋ ಎಂಬದನ್ನು ಕಂಡುಕೊಳ್ಳಲು ಸಮರ್ಥನಾಗಲಿಲ್ಲ. ಕೆಲವು ನಿಮಿ ಷಗಳನ್ನು ಅವರಿಬ್ಬರೂ ಮೌನದಿಂದ ಕಳೆದರು. ಬಳಿಕ ತನ್ನ ಮಾ ತಿನಂತೆ ನಿರೂಪಮೆಯು ಕತ್ರದೆ ಇನ್ನೂ ನಿಂತೇ ಇರುವಳೆಂಬದು ಕುಮಾರನ ನಿದರ್ಶನಕ್ಕೆ ಬರಲು, ಅವನು ತನ್ನ ದುಃಖವನ್ನು ಸಂಪೂ ರ್ಣವಾಗಿ ನುಂಗಿಕೊಂಡನು; ಹಾಗು ನಿ ಸಮೆಯ ದುಃಖವನ್ನು ಶಾಂತಗೊಳಿಸುವದಕ್ಕಾಗಿ ತನ್ನ ಬಾಹುಗಳಿಂದ ಅವಳನ್ನು ಅಪ್ಪಿ ಕೊಂಡು ಒಳ್ಳೆ ಸ್ನೇಹದಿಂದ ಅರಳಿಗೆ ಕುಮಾರ-ನಿರೂಪಮೇ, ನಿನಗೇನಾಯಿತು? ಹೀಗೇಕೆ ದುಃಖ ಪಡುವೆ? ಹೇಳಬಾರದೇ, ಎಂದನು. ಆದರೂ ನಿರೂಪಮೆಯು ಒಂದು ಮಾತಾಡಲಿಲ್ಲ. ಆಗ ಕುಮಾರನು ಆಕೆಯನ್ನು ಹಲವು ಬಗೆಯಿಂದ ರಮಿಸಿದನು. ತರ ತರದ ವಿನೋದಸರ ಭಾಷಣ ಮಾಡಿದನು. ಕೆಲಹೊತ್ತಿನ ಮೇಲೆ ಅವಳು ತನ್ನ ಅಶ್ರುಪೂರ್ಣದೃಷ್ಟಿಯಿಂದ ಅವನನ್ನು ನೋಡುತ್ತ ಕುಮಾರ, ನೀನು ನನ್ನನ್ನು ಮನಃಪೂರ್ವಕವಾಗಿ ಪ್ರೀತಿಸುತ್ತೀಯೇನು? ಎಂದು ಕೇಳಿದಳು. ನಿರೂಪಮೆಯ ಈ ಪ್ರಶ್ನೆ ಯಿಂದ ಕುಮಾರನ ಅಂತಃಕರಣಕ್ಕೆ ಬರೆಕೊಟ್ಟಂತಾಯಿತು. ಆದರೂ ಅವನು ನಿರೂಪಮೆಯ ಮುಂಗು ರುಳುಗಳನ್ನು ತೀಡುತ್ತ-ಈಗೇಕೆ ಈ ಪ್ರಶ್ನೆಯನ್ನು ಕೇಳುವ ಪ್ರಸಂಗಬಂತು? ಎಂದನು. ನಿರೂಪಮೆಯು ನಡುಗುವ ದನಿಯಿಂದ-ನೀನು ಯಾವಾ ಗ...ನೀನು ಯಾವಾಗ, .... ಕುಮಾರನಿಂದ ಸ್ವಚ್ಚವಾಗಿ ನಿಂತು ಅವಳ ಮುಂದಿನ ಮಾತನ್ನು ಕೇಳುವದಾಗಲಿಲ್ಲ, ಕೂಡಲೆ ಅವನು ಅವಳ ಕ೦ಪಿತ ಓಷ್ಟ್ರಗಳನ್ನು