ಪುಟ:ಶಕ್ತಿಮಾಯಿ.djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬ - - - - - - - - - ಸ, ಚಂದ್ರ, ಕಂಡಕಂಡು ಪ್ರತಿಬಂಧಿಸದೆ ಇದ್ದದರಿಂದ ನೀನೇನು ಸಾಮಾನ್ಯ ಅಪರಾಧಿಯೆ? ಸೇನಾಪತಿಯು ತುಸ ಸಂಕೋಚದಿಂದ-ಜಹಾಪನಾ, ಸೇ ವಕನ ತಪ್ಪಾಗಿರುವದರಲ್ಲಿ ಸಂದೇಹವಿಲ್ಲ. ಆದರೆ ಈ ಕಾಲಕ್ಕೆ ವಿಶ್ವಾ ಸಘಾತಕನಾದನಬಾಬಗಾಯಸುದ್ದೀನನ ಕೂಡ ಯುದ್ಧವೆಸಗಬೇಕಾ ಗಿರುವದರಿಂದ ಗಣೇಶದೇವನನ್ನು ನಾವು ಈಗ ಪ್ರತಿಬಂಧಿಸಹೊದರೆ, ಅವನ ಕೂಡ ಸಹ ಯುದ್ದ ಮಾಡಬೇಕಾಗುವದು, ಅವನೊಡನೆ ಯ ದ್ದ ಮಾಡದೆ ಅವನನ್ನು ಪ್ರತಿಬಂಧಿಸಿ ತರುವದು ಶಕ್ಯವಿಲ್ಲ. ಹೀಗೆ ಇತ್ತಂಡಗಳಲ್ಲಿ ನಮ್ಮ ಬಲಕ್ಷಯಮಾಡುವದರಿಂದ ನಮ್ಮ ನಾಶ ಕೈ ನಾವು ಗುರಿಯಾಗಬೇಕಾದೀತು. ಅದಕ್ಕೋಸ್ಕರ ಈಗ ಸದ್ಯ ಕ್ಕೆ ನಾವು ಗಣೇಶದೇವನಿಂದ ಸಹಾಯಹೊಂದಿ ನವಾಬನ ಪಾರು ಪತ್ಯ ಮಾಡುವದೇ ಲೇಸು. (ಬದ್ಮಾಷ! ಇಲ್ಲದ ಯುಕ್ತಿಗಳನ್ನು ನನಗೆ ಕಲಿಸಬರು ತೀಯೇನು? ಎಂದು ಬಾದಶಹನು ಸಿಟ್ಟಿನಿಂದ ಕೂಗಿ-ಆಜೀಮ ಖಾನ, ಗಣೇಶದೇವನಿಲ್ಲದಿದ್ದರೆ ನಿನ್ನಿಂದ ಶತ್ರುವಿನ ದಮನ ಮಾಡಲಿ ಕಾಗಲಿಕ್ಕಿಲ್ಲೆಂದೇ ನೀನು ಆ ರಾಜದ್ರೋಹಿಯನ್ನು ಬೇಕಂತ ಪ್ರತಿ ಬಂಧಿಸಿ ತರಲಿಲ್ಲೇನು? ಅ೦ತೇ ನೀನು ಈ ಒಣಡೌಲಿನ ಮಾತುಹೇಳು ತೀಯಾ? ಸೇನಾಪತಿ-ಜಹಾಪನಾ, ತಾವು ಹಾಗೆ ತಿಳಿಯಬಾರದು, ಕುಮಾರನನ್ನು ಹಿಡತರಬೇಕೆಂದು ತಮ್ಮ ಆಜ್ಞೆಯಿದ್ದಿಲ್ಲ, ಅದಕ್ಕಾ ಗಿ ಅದನ್ನು ದೊರಕಿಸುವ ಸಲುವಾಗಿಯೇ ಈಗ ನಾನು ತಮ್ಮೆಡೆಗೆ ಬಂದಿದ್ದೇನೆ. ಬಾದಶಹ-ಸೇನಾಪತೀ, ಎಂಥ ಮೂರ್ಖನು ನೀನು? ಇಂಥ ಪ್ರಸಂಗದಲ್ಲಿ ಇಂಥ ಪ್ರತ್ಯಕ್ಷಾಪರಾಧಿಯ ಪ್ರತಿಬಂಧದ ವಿಷಯಕ್ಕೆ