ಪುಟ:ಶಕ್ತಿಮಾಯಿ.djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಕ್ತಿಮಯಿ ಸಿದರು. ಕೂಡಲೆ ನವಾಬನ ಆಜ್ಞೆಯಂತೆ ಆಸವಾರರು ತಮ್ಮ ಕುದು ರೆಗಳೊಡನೆ ಅಲ್ಲಿಯೇ ಸಮೀಪದಲ್ಲಿ ಅಡಗಿಕೊಂಡು ಕುಳಿತರು; ಹಾಗು ಕುತುಬನು ಶಾಸ್ತ್ರ ಸನ್ಯಾಸಿಯ ವೇಷವನ್ನು ಹಾಕಿಕೊಂಡು ಕಾಲಿಯ ಮೂರ್ತಿಯ ಹಿಂಬದಿಗೆ ನಿಂತನು. ನವಾಬನೂ ಅವನ ಹಿಂದಿನಿಂದ ಹೋಗಿ ಅಲ್ಲಿಯೇ ಅಡಗಿಕೊಂಡನು. ಬಳಿಕ ಅವರು ಹಿಂದೆ ಏಳನೇ ಪ್ರಕರಣದಲ್ಲಿ ಹೇಳಿದಂತೆ ಶಕ್ತಿಯ ಮನವೊಲಿಸಿದರು. ಹಾಗು ಅವ ಳನ್ನು ನವಾಬನು ತನ್ನೊಡನೆ ಕರಕೊಂಡು ಹೋದದ್ದನ್ನು ಸುತ್ತಾ ನನ ಸವಾರರು ನೋಡಿ ಆ ಸುದ್ದಿಯನ್ನು ಬಾದಶಹನಿಗೆ ತಿಳಿಸಲು ಆ ಪಿತಾ-ಪುತ್ರರಲ್ಲಿ ಯುದ್ಧಕ್ಕೆ ಪ್ರಾರಂಭವಾಯಿತು, ನವಾಬನು ಈ ಮೊದಲೇ ತನ್ನ ಸೇನಾಧ್ಯಕ್ಷನಿಗೆ ಹೇಳಿಕಳಿ ಸಿದ ಪ್ರಕಾರ ಆ ಸೇನಾಪತಿಯು-ಹುಸೇನಖಾನನು-ಪಾಂಡುಯಾ ರಾಜಧಾನಿಯ ಬಹಿಭಾಗದಲ್ಲಿರುವ ಬಾದಶಹನ ಮುಖ್ಯ ಮಂತ್ರಿ ಯ ಉಪವನದ ರಕ್ಷಕನನ್ನು ಹ್ಯಾಗೋ ಒಲಿಸಿಕೊಂಡು, ಆ ಉಪ ವನಮಧ್ಯದಲ್ಲಿರುವ ವಿಶಾಲವಾದ ಮಂದಿರದಲ್ಲಿ ನಬಾಬಶಹನ ವಿವಾ ಹದ ಸಿದ್ಧತೆಯನ್ನು ಮಾಡಿಟ್ಟಿದ್ದನು. ಸೂಚನೆಯ ಮೇರೆಗೆ ನಬಾ ಬನು ಶಕ್ತಿಯೊಡನೆ ಅಲ್ಲಿಗೆ ಬಂದನು. ಅಲ್ಲಿಯ ಆ ಐಶ್ವರ್ಯದ ಸೊಬಗಿನಿಂದ ಶಕ್ತಿಯ ಕಣ್ಣುಗಳು ಕುಕ್ಕಿದವು. ಅವಳಿಗೆ ಬಹಳ ಅಭಿಮಾನವೆನಿಸಿತು. ಆದರೆ ಆ ಆಶ್ಚರ್ಯ-ಸ್ಥಿತಿಯು ಅವಳಲ್ಲಿ ಬಹಳ ಹೊತ್ತಿನವರೆಗೆ ತಡೆದು ನಿಲ್ಲಲಿಲ್ಲ. ಕಣ್ಣು ಮುಚ್ಚಿ ಕಣ್ಣು ತೆರೆಯು ವಷ್ಟರಲ್ಲಿ ಅವಳ ಆ ಅಭಿಮಾನವು ನಾಮಶೇಷವಾಗಿ ಅವಳಲ್ಲಿ ಕಡು ಖೇದವು ಪ್ರಾದುರ್ಭವಿಸಿತು. ಜ್ಯೋತಿಧಳೆ ದರ ಜ್ಯೋತಿಷದ ಪ್ರಕಾರ ಅವಳು ಮಹಾರಾಣಿಯಾಗುವದಕ್ಕಾಗಿಯೇ ಜನಿಸಿದ್ದಳು. ಮತ್ತು ಆ ಪ್ರಕಾರ ಈಗ ಅವಳು ಪ್ರತ್ಯಕ್ಷ ಮಹಾರಾಷ್ಠೆಯೂ ಆಗಿದ್ದ ಳು. ಆದರೆ ಆಕೆಗೆ ಅದರಿಂದ ನಿಜವಾದ ಸೌಖ್ಯವಾಗದೆ ಖೇದವೆನಿಸಿ ದ್ದರ ಕಾರಣವೇನಿರಬಹುದು?