ಪುಟ:ಶಕ್ತಿಮಾಯಿ.djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ, ಚಂದ್ರಿಕೆ ಕನ್ನಡಿಯ ಮಹಾಲು; ನಾಲ್ಕೂ ದಿಕ್ಕಿನ ಗೋಡೆಗಳಲ್ಲಿ ನಿಲು ವಗನ್ನಡಿಗಳು ಪರಿಶೋಭಿಸುತ್ತಲಿವೆ. ತೀರ ಸಮೀಪದಲ್ಲಿ ಗಿಡಬಳ್ಳಿಗೆ ಳಿಂದಲೂ, ಹೂಮಾಲೆಗಳಿಂದಲೂ ಪರಿವೇಷ್ಟಿತವಾದ ಅತ್ಯಂತ ಕೋ ಮಲ ಕಯ್ಯಾಸನವಿದೆ. ಮಂದಿರದಲ್ಲೆಲ್ಲ ಹೂಗಳಿಂದ ಶೃಂಗರಿಸಲ್ಪಟ್ಟ ಬೆಳ್ಳಗೆ ಶೋಭಿಸುವ ಕಾರಂಜಿಗಳಿದ್ದು, ಆ ಕಾರಂಜಿಗಳೊಳಗಿಂದ ಸು ಗಂಧ ಪೂರಿತ ಪನ್ನೀರು ಚಿಮ್ಮುತ್ತಲಿದೆ. ಆ ಪನ್ನೀರಿನ ಸುಗಂಧವ ತರತರದ ಪುಷ್ಪಗಳ ಸುಗಂಧದೊಡನೆ ಕಲೆತು ಇಡಿ ಮಂದಿರವನ್ನೆಲ್ಲ ಸುಗಂಧದ ಆಗರವನ್ನೇ ಮಾಡಿಬಿಟ್ಟಿತ್ತು. ಬಹುಮಲ್ಯ ವಸ್ಸಾ ಲಂಕಾರಗಳಿಂದ ಸುಶೋಭಿತವಾದ ನವತರುಣ ಸುಂದರ ಸಖೀಗಣವು ಸೇವೆಯನ್ನು ಮಾಡುವದಕ್ಕೆ ನಾಮುಂದೆ ಮುಂದೆ ಎಂದು ಹಾತೊರೆಯುತ್ತಲಿದೆ. ಇದೆಲ್ಲ ಸಿದ್ಧತೆಯನ್ನು ಕಂಡ ಆ ಬಡ ಶಕ್ತಿ ಮಯಿಯು ತಾನು ಇಂದ್ರನ ನಂದನವನದಲ್ಲಿರುವೆನೋ ಏನೋ ಎಂ ಬದನ್ನು ತಿಳಿಯದಾದಳು. ಶಕ್ತಿಯು ಪುನಃ ನಾಲ್ಕೂ ದಿಕ್ಕಿಗೆ ದಿಟ್ಟಿಸಿ ನೋಡಹತ್ತಿದಳು. ಆಕೆಗೆ ಆ ಎದುರಿಗಿನ ನಿಲುವಗನ್ನಡಿ ಗಳಲ್ಲಿ ಆನಂದನವನದೊಳಗೆ ಸಾಲಂಕೃತರಾಗಿ ಸಿದ್ಧರಾದ ಆಪ್ಪರಾಂ ಗನೆಯರ ಮಧ್ಯದಲ್ಲಿ ಒಬ್ಬ ದೀನವೇಷದ ರಮಣಿಯು ಮುಖ್ಯ ಪೀ ಠದಲ್ಲಿ ವಿರಾಜಮಾನಳಾಗಿದ್ದಂತೆ ಕಂಡಿತು. ಆಗ ಅವಳು ಮುಗ್ಧ ಳಂತೆ ಸುಮ್ಮನಾಗಿ ಬಿಟ್ಟಳು. ಕೆಲಹೊತ್ತಿನವರೆಗೆ ಆಕೆಯು ಮನ ದಲ್ಲಿಯೇ ಈ ಪ್ರಕಾರ ವಿಚಾರ ಮಾಡಹತ್ತಿದಳು-'ಇದು ಮಾಯೆಯ ಆಟವು, ಕಣ್ಣಿನಿಂದ ನೋಡಲು ಅಸಾಧ್ಯವಾದ ಚಿತ್ರವಿದು. ಈ ದೀನ ಛ ಮನಸ್ತ್ರಪ್ತಿಗಾಗಿ ಇಷ್ಟು ಜನ ದಾಸದಾಸಿಯರ ಈ ಅಸಾ ಮಾನ್ಯ ಯೋಜನೆಯೇ? ಸಾವಿರಾರು ಜನರ ಒಡತಿಗೂ ಮೀರಿದ ಈ ಆದರವೇ?