ಪುಟ:ಶಕ್ತಿಮಾಯಿ.djvu/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೭ ಶಕ್ತಿಮಯಿ. ಆ ಬಳಿಕ ಶಕ್ತಿಯು ಅಲ್ಲಿಂದ ಮುಚ್ಚನಾಗರಕ್ಕೆ ಒಯ್ಯಲ್ಪಟ್ಟ ಳು, ನಾಲ್ಕು ಜನ ಧಾಸಿಯರು ಬೇರೆ ಬೇರೆ ಬಣ್ಣದ ರತ್ನ ಖಚಿತ ಗಳಾದ ಪೀತಾಂಬರಗಳನ್ನು ಅವಳೆದುರಿಗಿಟ್ಟು- ಬೇಗಮಸಾಹೇ ಬ ಇವುಗಳಲ್ಲಿ ಯಾವ ಪೀತಾಂಬರವು ಸ್ನಾನಾನಂತರ ಧರಿಸಲಿಕ್ಕೆ ತಮಗೆ ಬೇಕಾದೀತು?” ಎಂದು ವಿಜ್ಞಾಪಿಸಿಕೊಂಡರು. ಆಗ ಶಕ್ತಿಯು ಒಂದೊಂದಾಗಿ ಅವುಗಳನ್ನೆಲ್ಲ ತಿರುತಿರುವಿ ನೋಡಿ ಕಟ್ಟಿ ಕಡೆಗೆ_ಇವೇನು ಅಷ್ಟೊಂದು ಅಂದವಾಗಿಲ್ಲ; ಬೇರೆ ವಸ್ತ್ರಗಳಿ ಲ್ಲವೇ?” ಎನಲು, ದಾಸಿಯರೆಲ್ಲರೂ ಅದನ್ನು ಕೇಳಿ ಅತ್ಯಂತ ವಿಸ್ಮ ಯಗೊಂಡರು. ಅವರ ಬಾಯಿಂದ ಕೆಲಹೊತ್ತಿನವರೆಗೆ ಮಾತುಗಳೇ ಹೊರಡಲಿಲ್ಲ. ಬಳಿಕ ಅವರಲ್ಲಿ ಒಬ್ಬ ದಾಸಿಯು ಶಕ್ತಿಮಯಿಯ ನ್ನು ಕುರಿತು_ಇವು ಹೊಲಸಾಗಿವೆಯೋ? ಈ ಇಂಥ ಅತ್ಯು ಶ್ರಮ ವಸ್ತ್ರಗಳು ತಮಗೆ ಲಭಿಸಬೇಕೆಂದು ಮವರು ಬೇಗಮ್ಮರು ಬಲು ಸಾಹಸ ಪಟ್ಟಿದ್ದರು. ಆದರೆ ಅವರ ದುರ್ದೈವವು ಅವರಿಗೆ ಅವನ್ನು ಲಭಿಸಗೊಡಲಿಲ್ಲ ಎಂದಳು. ಮತ್ತೊಬ್ಬ ದಾಸಿಯು“ನಜಾಬಸಾಹೇಬರವರ ತಾಯಿಯವರಾದ ಸುಲ್ತಾನಸಾಹೇಬರು ಉಟ್ಟುಕೊಂಡ ಪೀತಾಂಬರಗಳಿವು. ಅವರು ಗತಿಸಿದಬಳಿಕ ಎಷ್ಟೋ ಸುಲ್ತಾನಿಯರು ಇವುಗಳ ಮೇಲೆ ಕಣ್ಣಿಟ್ಟಿದ್ದರು. ಆದರೆ ನಬಾಬ ಸಾಹೇಬರು ತಮ್ಮ ತಾಯಿಯ ಸ್ಮರಣವೆಂದು ಇವನ್ನು ಯಾರಿಗೂ ಕೊಡದೆ ಇಟ್ಟು ಕೊಂಡಿದ್ದರು. ಅಂಧ ಉತ್ತಮ ವಸ್ತ್ರಗಳಿವು ಇವು ಹೊಲಸೆ? ಎಂದಳು. ಆದರೆ ಶಕ್ತಿಯು ಅವರ ಮಾತಿಗೆ ವಿಸ್ಮಯ ಪಡದೆ ತುಸನಕ್ಕು- ಇವು ನನಗೆ ಅವಶ್ಯವಿಲ್ಲ. ನೂತನ ಬೇಗಮ್ಮರ ಕಾಣಿಕೆಯೆಂದು ಈ ವಸ್ತ್ರಗಳಲ್ಲಿ ಒಂದೊಂದನ್ನು ಇವನ್ನು ಅಪೇಕ್ಷಿಸಿದ್ದ ಆ ಪೂರ್ವದ ಬೇಗಮ್ಮರಿಗೆ ಕೊಟ್ಟು ಬಿಡಿ ರಿ, ಎಂದು ತಿಳಿಸಲು ದಾಸಿಯರುಬೇಹುಕು, ಎಂದು