ಪುಟ:ಶಕ್ತಿಮಾಯಿ.djvu/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

fo ಸ, ಚಂದ್ರ, ತ್ರಿನ ಮೇಲೆ ಅವಳ ಹೃದಯವು ಅನಂತ ವಿರುದ್ದ ಎಂಕಾರಗಳಿಂದ ಘಾ ಸಿಯಾಗಲು ಅವಳ ಕಣ್ಣುಗಳೊಳಗಿಂದ ದುಃಖಾಶ್ರುಗಳು ಧಾರೆಗಟ್ಟಿ ಸುದದ್ದರಲ್ಲಿ ಸೋಜಿಗವೇನು? ಆಗ ಶಕ್ತಿಯ ಸ್ವಾಭಾವಿಕವಾದ ಉಗ್ರ-ಕಠೋರ ವೃತ್ತಿಯು ಮಾಯವಾಗಿ ಹೋಯಿತು. ಪ್ರೇಮ ವಿರಹದ ಅನುತಾಪದಿಂದ ಅವಳ ವೃತ್ತಿಯು ಅತ್ಯಂತ ಲೀನವಾಯಿತು. ಈತ ಶಕ್ತಿಯು ಆ ಕನ್ನಡಿ ಮಹಾಲಿನ ತಲೆಬಾಗಿಲ ಬಳಿಯಿಂದ ಹಿಂದೆ ಒಂದಕ್ಕೆ ಸುದು ಅಲ್ಲಿಂದ ಹೊರಬಿದ್ದು ಸವಿದದ ಬೇರೊಂದು ಗ್ಯಕ್ಕೆ ನಡೆದಳು. ಅವಳು ಅಲ್ಲಿ ಯು ಒಬ್ಬ ದಾಸಿಯನ್ನು ಕರೆದು ತನ್ನ ಮೊದಲನ (೨೧) ಒಟ್ಟಿಗಳನ್ನು ತರಹೇಳಿದಳು. ಆಗ ದಾಸಿಯು ----ದೇಗುನಾ, ನವಾಬಸಾಹೇ ರು ಕರೆಯುತ್ತಿರುವರು, ಬೇಗನೆ ಗಾಗಮವಾಗಬೇಕು, ಎಂದು ಪ್ರಾ ರ್ಥಿಸಿಳು, « ಈಗಳೆ ಬರುವೆನೆ ೦ದು ಹೇಳ; ಹಾಗು ನೀನು ಆ ವಸ್ತ್ರ ಗಳನ್ನು ಬೇಗನೆ ತಕೊಂಡು ಬಾ ಎಂದು ಹೇಳುತ್ತ ಶಕ್ತಿಯು ತನ್ನ ಮೈ ಮೇಲೆ ಒಂದು ಗಳಿಗೆಯ ಪೂರ್ವದಲ್ಲಿ ಇಟ್ಟಿದ ಎಲ್ಲ ವಸ್ತ್ರ ಒಡವೆಗೆ ಳನ್ನು ತೆಗೆತೆಗೆದು ನೆಲದ ಮೇಲೆ ಇಡುತ್ತಿದಳು. ದಾನಿಯು ಹಳೇ ಬ ಟ್ಟಿಯನ್ನು ತಂದಳು. ಕೂಡಲೆ ಶಕ್ತಿಯು ಆದನ್ನು ಉಟ್ಟುಕೊಂಡು ಆ ಹೊಸ ವಸ್ತ್ರವನ್ನು ಕೂಡ ಬಿಚ್ಚಿಟ್ಟಳು. ಹೀಗೆ ಶಕ್ತಿಯು ತನ್ನ ಸಾಮಾ ನ ವೇಷವನ್ನು ಧರಿಸಿಕೊಂಡು ನವಾಬ ಗಾಯಸುದ್ದೀನಸಿದ್ದ ಕನ್ನಡಿ ಯ ಮಹಾಂಗೆ ಪನಃ ಬಂದಳು. ತನ್ನ ಪ್ರತಿಬಿಂಬವನ್ನು ನೋಡಿ ಅದ ಆಗೆ ಈಗ ಬಹು ಸಮಾಧಾನವೆನಿಸಿತು. ಆದರೆ ಗಾಯಸುದ್ವೀನನು ಶ ಕ್ರಿಯ ಆ ವೇಷ ಭೂಷಣಗಳನ್ನು ನೋಡಿ ಬೆರಗಾಗಿ ಶಕ್ತಿಮಯಿ, ಈ ದರಿದ್ರ ವೇಷವು ವಂಗೇಶ್ವರಿಗೆ ತಕ್ಕಷ್ಟೇ? ಎಂದು ಕೇಳಿದನು. ಶಕ್ತಿ-ಇನ್ನೂ ನಾನು ನಂಗೇಶ್ವರಿಯಾಗಿರುವದಿಲ್ಲ. ಪ್ರಸ್ತುತದ ಯುದ್ಧವು ಪೂರೈಸುವವರೆಗೆ ನಾನು ಈ ವೇಷದಿಂದಲೇ ಇರತಕ್ಕವಳು,