ಪ್ರಚುರಂ ಪತ್ತೊಳಗಾಗೆ ರಂಧ್ರದೊಳಗಿಲ್ಲಾದೆಂಟನೀಗೇಳಬಿ-
ಟ್ಟುಚಿತಂ ತಾನೆನಿಪಾರ ಕಟ್ಟುತಯಿದಕ್ಕೀಡಾಗದೇ ನಾಲ್ವರಂ
ರಚನಂಗೆಯ್ಯದೆ ಮೂರ ನಂಬದೆರಡಂ ಬಿಟ್ಟೊಂದರೊಳ್ ನಿಲ್ಲದಾ
ವಚನಬ್ರಹ್ಮದೇ ಮುಕ್ತಿಯೇ ಹರಹರಾ ಶ್ರೀ ಚೆನ್ನಸೋಮೇಶ್ವರಾ‖ ೧೦೫
‖
ಮತಿಯಂ ಬುದ್ದಿಯ ಜಾಣ್ಮೆಯಂ ಗಮಕಮಂ ಗಾಂಭೀರ್ಯಮಂ ನೀತಿಯಾ-
ಯತಮಂ ನಿಶ್ಚಲಚಿತ್ತಮಂ ನೃಪವರಾಸ್ಥಾನೋಚಿತಾರ್ಥಂಗಳಂ
ಅತಿಮಾಧುರ್ಯಸುಭಾಷಿತಂಗಳ ಮಹಾಸತ್ಕೀರ್ತಿಯಂ ವಾರ್ತೆಯಂ
ಶತಕಾರ್ಥಂ ಕೊಡದಿರ್ಪುದೇ ಹರಹರಾ ಶ್ರೀ ಚೆನ್ನಸೋಮೇಶ್ವರಾ ‖ ೧೦೬ ‖
ಸ್ವಾಮೀ ನನ್ನಿಂದ ನೀನಿಂತೊರೆಯಿಸಿದೆ ಕೃಪಾದೃಷ್ಟಿಯಂ ಬೀರಿ ಲೋಕ
ಪ್ರೇಮಂ ತಾಳ್ದಿಂತು ನೀತಿ ಪ್ರಕಟನೆ ಪಡೆ ನಾಲ್ಲಾಸಿರಂ ನಾಲ್ಕುನೂರುಂ
ಈ ಮಾಯಾಪೂರ್ಣ ಕಲ್ಯಬ್ದದೆ ಗತಿಸಿ ವಿಕಾರ್ಯಬ್ದದಲ್ಲೀಶ್ವರಾ ನಿ-
ನ್ನಾ ಮಾಹಾತ್ಮ್ಯಾಂಘ್ರಿಗಿತ್ತೆಂ ಪುಲಿಗೆರೆ ನಗರೀ ಶಾಸನಾಂಕಾ ಮಹೇಶಾ‖ ೧೦೭ ‖
* *
*
ನಿಜಲಿಂಗಶತಕ
"ನಿತ್ಯ ನಿರುಪಮ ವಿಶ್ವಮೂರ್ತಿ ನಿಜಲಿಂಗೇಶ
ನುತ್ತಮೋತ್ತಮವೆನಿಪ ಶತಕವನು ಬಲ್ಲಂತೆ
ಬಿತ್ತರಿಪೆ ವಾರ್ಧಿಕ೧[ದ]೧ ಷಟ್ಪದಿಗಳಿಂದೆ ಮನವಿತ್ತು ಸುಜನರು ಕೇಳ್ವುದು‖ಪಲ್ಲ‖