ಪುಟ:ಶತಕ ಸಂಪುಟ.pdf/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೬೨

ಶತಕ ಸಂಪುಟ


ಗೋಪ ಗೋಪತಿನಮಿತ ಗೋಕರ್ಣಲಂಕಾರ
ಗೋಪುತ್ರಿಯರ್ಧಾಂಗ ಗೋಜಾತಶತ್ರುಧರ
ಗೋಪವಾಹನಮಿತ್ರ ಗೋತನಯಶಿರಪಾತ್ರ ಗೋವಸನಪಂಚಾನನ
ಗೋಪುತ್ರ ಸಂಹನನ ಗೋರಹಿತ ಖಳಶಿಕ್ಷ
ಗೋಪ್ರೀಯ ಶಿಶುಧರನೆ ಗೋತ್ರಿತಯ ಘನಮಹಿಮ
ಗೋಪಂಚಧರನಾಶ ನಿಜಲಿಂಗ ಭವಭಂಗ ಶರಣಜನವರದ ಜಯತು ‖ ೧


ಹರಿಗರ್ಭಶಿರಪಾಣಿ ಹರಿತನುಜವಪುದಹನ
ಹರಿಮುಖ್ಯಸುರವಿನುತ ಹರಿಕೋಟಿಹರಿರೂಪ
ಹರಿಮಿತ್ರ ಹರಿಗಾತ್ರ ಹರಿಭೂಷ ಹರಿನಾಶ ಹರಿಣಾಂಕಧರ ಶಂಕರ
ಹರಿಯಾಪ್ತ ಹರಿಜನಕ ಹರಿನೇತ್ರ ದಯಭರಿತ
ಹರಿಮೌಳಿ ಹರಿವಸನ ಹರಿಗಮನಸಖ ಕರುಣ
ಹರಿಕಾರಿ ಹರಿಧರನೆ ನಿಜಲಿಂಗ ಭವಭಂಗ ಶರಣಜನವರದ ಜಯತು ‖ ೨ ‖
ಅಮೃತೋದ್ಭವ ಮುಖ್ಯ ಮುನಿವಿನುತ ಸುಪ್ರೀತ
ಅಮೃತೋದ್ಭವಶೇಖರ ಭವಭಂಜಗಿರಿಚಾಪ
ಅಮೃತೋದ್ಭವನಯನಮಿತ್ರ ನಾರದ ಸ್ತೋತ್ರ ಅಮೃತಾಕರ ಧೂರ್ಜಟಿ
ಅಮೃತಾಖ್ಯಾಯ ಪಾರ್ವಪ್ರಿಯ ನುತಕಾಯ
ಅಮೃತಶರೀರ ಭವದೂರ ಸದ್ಗುಣಸಾರ
ಅಮೃತಚರಿತ್ರ ಘನ ನಿಜಲಿಂಗ ಭವಭಂಗ ಶರಣಜನವರದ ಜಯತು ‖ ೩ ‖

ಶಿವಚರಿತ ದಯಭರಿತ ಶಿವಗಾತ್ರ ಶಿಖಿನೇತ್ರ
ಶಿವಭೂಷ ಶಿವನಾಶ ಶಿವಪ್ರೀಯ ಶಿರಗೈಯ
ಶಿವನಾಮ ಸಲೆ ಭೀಮ ಶಿವಧರನೆ ಶಂಕರನೆ ಶಿವರಮಣ ಸ್ತೋತ್ರಚರಣ
ಶಿವಶಯನ ಸುತದಹನ ಶಿವಕಥನ ಪುರಮಥನ
ಶಿವಕಳೆಯ ಶಿವನಿಳಯ ಶಿವಶಿಕ್ಷ ಸುರರಕ್ಷ
ಶಿವ ದುರಿತಗಜಸಿಂಹ ನಿಜಲಿಂಗ ಭವಭಂಗ ಶರಣಜನವರದ ಜಯತು ‖ ೪