ಪುಟ:ಶತಕ ಸಂಪುಟ.pdf/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ
೬೩


ಈಶನೇ ಕರುಣಿ ಜಗದೀಶನೇ ರಜತಾದ್ರಿ
ವಾಸನೇ ಅಖಿಳಭೂತೇಶನೇ ತುಹಿನಗಿರಿ
ಜೇಶನೇ ಆಕಾಶಕೇಶನೇ ದೈತ್ಯಪುರನಾಶನೇ ನಿರ್ದೋಷನೇ
ಶೇಷನಂ ಧರಿಸಿದ ವಿಲಾಸನೇ ಸ್ಮರಭಸ್ಮ
ಭೂಷನೇ ಭಕ್ತರೋಲ್ಲಾಸನೇ ಶಂಭು ಸ
ರ್ವೇಶನೇ ಧವಳಾಂಗ ನಿಜಲಿಂಗ ಭವಭಂಗ ಶರಣಜನವರದ ಜಯತು‖ ೫ ‖

ನೋಡುತಿಪ್ಪುದರಿಂದೆ ಕೇಳುವನ ದೆಸೆಯಿಂದೆ
ರೂಢಿಯೊಳು ಮರಣವಾದಪನ ತಾತನ ಪಿತನ
ಪಾಡುಗೆಲಿಸಿದನ ತನುಭವನ ಬಾಣಕೆ ಸಿಲ್ಕದವನ ಜನಕನ ತನುಜನ
ಕೂಡೆ ಕಾಳಗವಿತ್ತು ಮಡಿದನೊಳು ಸ್ನೇಹವನು
ಮಾಡಿದಪನಯ್ಯನಿಂದರಳುವ ಸುಮಾರಿಯನು
ಸೂಡಿದನೆ ಸುಚರಿತ್ರ ನಿಜಲಿಂಗ ಭವಭಂಗ ಶರಣಜನವರದ ಜಯತು‖ ೬ ‖
ಧ್ವನಿಗೇಳುವದರ ನಾಮದನ ಜನಕನ ಸುತನ
ತನುಜನನುಜನ ಬೊಪ್ಪನಣುಗನೊಡೆಯನ ಸತಿಯ
ಘನಗರ್ವದಿಂದೆ ಸೆರೆವಿಡಿದನಗ್ರಜನೆನಿಪ ದಿಗ್ವೆಸರ ತಾಳಿದವನ
ಅನುಜೆಯರಸನ ಭಾವನಾತ್ಮಜನ ಸತಿಯಳ
ಯ್ಯನಪಿತನ ಜನಕನ ಜನಕನಯ್ಯನ
ಯ್ಯನ ತಾತಶಿರಪಾಣಿ ನಿಜಲಿಂಗ ಭವಭಂಗ ಶರಣಜನವರದ ಜಯತು‖ ೭


ಪ್ರಥಮರಾಶಿಯ ಪೆಸರ ವಾಹನಗೆ ಶಪಿಸಿದನ
ಸತಿಯ ರಮಣನ ಬಳಿಗೆ ಕುಟಿಲವೇಷದೊಳೈದಿ
ಹತಗೈದ ಸ್ನೇಹಿತನ ಪಡೆದಂಥ ಪೊಡವಿಪನ ಪಿರಿಯ ಸೊಸೆಯಳ ಮಾತೆಯ
ಸತತ ಧರಿಸಿದನ ಶತ್ರುವಿನಣ್ಣನೊಡೆಯನಿಗೆ
ಸುತನಾದನಗ್ರಜನ ಶರದಿಂದೆ ಕೆಡಪಿದನ
ಅತಿಶಯದ ಸ್ನೇಹಿತನೆ ನಿಜಲಿಂಗ ಭವಭಂಗ ಶರಣಜನವರದ ಜಯತು‖ ೮ ‖