ಪುಟ:ಶತಕ ಸಂಪುಟ.pdf/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ
೬೫

‖ ೧೨ ‖

ಮೂರು ಮೊಗವಿರುತಿಹನೆ ಪಂಚನೇತ್ರನೆ ದಿತಿಸು
ತಾರಾತಿಸಂಹರನೆ ಭಾವಜನ ಸ್ನೇಹಿತನೆ
ತಾರಾಧಿಪತಿಪಾಣಿ ತ್ರಿಶೂಲಮೌಳಿ ವೃಷಶಿರಪಾತ್ರ ಬ್ರಹ್ಮನಮನ
ಮೂರುಪುರರಕ್ಷಕನೆ ಬಲಿಸುತನ ದಹಿಸಿದನೆ
ಬಾರೆಂದು ವಿಕಳದಿಂ ಕರೆವ ಗಿರಿಜೆಯ ಬಳಿಗೆ
ಸಾರಿ ಬಿಗಿದಪ್ಪಿದನೆ ನಿಜಲಿಂಗ ಭವಭಂಗ ಶರಣಜನವರದ ಜಯತು ‖ ೧೩ ‖

ಅಂಗಜನ ಮುಂಗಯ್ಯ ಗಿಣಿಯೆ ಮುತ್ತಿನ ಮಣಿಯೆ
ತುಂಗಜವ್ವನೆಯೆ ಸದ್ಗುಣಶ್ರೇಣಿ ಫಣಿವೇಣಿ
ಭೃಂಗಕುಂತಳೆ ಚಂದ್ರಮುಖಿಯೆ ಹರಿಣಾಂಬಕಿಯೆ ಶೃಂಗಾರ ಹೊಂತಕಾರಿ
ಪೊಂಗಳಸಕುಚದ ಮೋಹನ್ನೆ ಮಾನಿನಿ ರನ್ನೆ
ಇಂಗಿತವ ಬಲ್ಲ ವೈಯ್ಯಾರಿ ಮನಹಾರಿಯೆನು
ತಂಗನೆಯ ತಕ್ಕೈಪ ನಿಜಲಿಂಗ ಭವಭಂಗ ಶರಣಜನವರದ ಜಯತು ‖ ೧೪ ‖
ಏತಕೆನ್ನೊಳು ಮುನಿಸು ಭೂತೇಶ ದಯಭರಿತ
ನೀತಿಸಾರವ ಬಲ್ಲ ಜಾತವಿರಹಿತ ಪ್ರಾಣ
ನಾಥ ಚಿತ್ತೈಸು ಕಾಮಾತುರವು ಹೆಚ್ಚಿರಲು ನಾ ತಾಳಲಾರೆನಭವ
ಪ್ರೀತಿಯಿಂದಲಿ ಮಕರಕೇತುವಿನ ತಂತ್ರದೊಳ
ಗೋತು ಕೂಡೆನಲದ್ರಿಜಾತೆಯಳ ಬಿಗಿಯಪ್ಪು
ತೀ ತೆರದೊಳಾಡುತಿಹ ನಿಜಲಿಂಗ ಭವಭಂಗ ಶರಣಜನವರದ ಜಯತು | ೧೫


ಘುಡುಘುಡಿಸುತಡಿಗಡಿಗೆ ಕಡುವಿಡಿದು ಜಡಿಜಡಿದು
ನುಡಿನುಡಿಯುತಡಿಗಡಿಗೆ ಗಡಗಡನೆ ದಡದಡಿಸು
ತಡಿಯಿಡುತ ತಡವಿಡದೆ ನಡೆನಡೆದು ಬಿಡಬಿಡದೆ ಒಡನೊಡನೆ ಜಡಗಡಣವ
ಪಿಡಿಪಿಡಿದು ಗಡಬಡಿಸಿ ಸಡೆಸಿಡಿದು ತಡೆಗಡಿದು
ಪಿಡಿಪಿಡಿದು ಕಡಿಕಡಿದು ದೃಢವೀರಭದ್ರನಂ