ಪಡೆದೊಡೆದು ನಿಡುಜಡೆಯ ನಿಜಲಿಂಗ ಭವಭಂಗ ಶರಣಜನವರದ ಜಯತು
‖ ೧೬ ‖
ಘುಳುಘುಳಿಪ ಜಳಧಿಯಿಂದೆಳದೆಳಸಿ ಬಲುವಿಷವು
ಸುಳುಸುಳನೆ ಪೊರಮಟ್ಟು ಛಿಳಿಛಿಳಿಲು ಛಿಳಿಲೆನುತ
ಚಳಚಳಕದುಗ್ರವೆಗ್ಗಳದಳೆದು ಪ್ರಳಯದಲಿ ದಳದುಳನೆ ಸುಡುತ ಬರಲು
ಕಳವಳಿಸಿ ಸಕಳರತಿ ಬಳಬಳಲಿ ಬಾಯಾರಿ
ಬೆಳುಗಳೆಯ ಧರಿಸಿದನೆ ೨ಕಳೆದುಳುಹುಯೆನಲು ಗಳ
ದೊಳು ತಳೆದ ೩ಸಿತಿಕಂಠ೩ ನಿಜಲಿಂಗ ಭವಭಂಗ ಶರಣಜನವರದ ಜಯತು
‖ ೧೭ ‖
ಆರ್ಭಟಿಸಿ ಕೆಂಗಿಡಿಯು ನೆಗೆದು ಛಿಟಿಛಿಟಿಲೆನುತ
ಕರ್ಬೊಗೆಯ ಸೂಸುತಲಿ ಸಿಮಿಸಿಮಿಲು ಸಿಮಿಲೆನುತ
ಪರ್ಬಿತಾಕಾಶಕ್ಕೆ ಪೇರುರಿಯು ಭುಗಿಭುಗಿಲು ಭುಗಿಲೆಂಬ ರವದಿಂದಲಿ
ಪೆರ್ಬೆ೦ಕಿ ಪಸರಿಸಿತು ಛಿಳಿಛಿಳಿಲು ಛಿಳಿಲೆನುತ
ಸರ್ಬಜನ ಬೆದಬೆದರಲಿಂತು ಪರಿಯಲಿ ಸುಟ್ಟು
ಕೊರ್ಬಿದಸುರರ ಪುರವ ನಿಜಲಿಂಗ ಭವಭಂಗ ಶರಣಜನವರದ ಜಯತು
‖ ೧೮ ‖
ಹೊಳೆಹೊಳೆವ ಕಾಲಂದುಗೆಯು ಘಲಿರುಘಲಿರೆನುತ
ತೊಳತೊಳಗಿ ತೋರ್ಪ ಗೆಜ್ಜೆಗಳು ಘಲಘಲಿಕೆನುತ
ಥಳಥಳಿಪ ಉಡಿಯ ಘಂಟೆಯ ನಾದ ಘಳಿಘಳಿಸಲು ೧ಘಳಿಲೆನುತ೧
ನುಡಿಯುತಿರಲು
ಝಳಝಳಿಪ ಭುಜಕೀರ್ತಿ ಝಣಝಣರು ಝಣರೆನುತ
ನಳನಳಿಸುತಂಧಕಾಸುರನ ಎದೆಯೊಳು ನಿಂದು
ನಲಿನಲಿದು ಕುಣಿಕುಣಿದ೨ ನಿಜಲಿಂಗ ಭವಭಂಗ ಶರಣಜನವರದ ಜಯತು
‖ ೧೯ ‖
ಪುಟ:ಶತಕ ಸಂಪುಟ.pdf/೧೦೬
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
೬೬
ಶತಕ ಸಂಪುಟ