ಪುಟ:ಶತಕ ಸಂಪುಟ.pdf/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ
೬೭


ಕೆಂಡಗಣ್ಣಿನ ಕೋಪದಂಡಲೆಯೊಳತಿ ಕ್ರೋಧ
ಗೊಂಡು ಹೂಂಕಾರದಲಿ ಡೆಂಡಣಿಸುತ ಸಹಾಯ
ಮಂಡಲಕೆ ಬಂದು ಬ್ರಹ್ಮಾಂಡ ಬಿರಿದೊಡೆವಂತೆ ಖಂಡೆಯವ ಝಳಪಿಸುತಲಿ
ಕೆಂಡ ಗಜರಾಕ್ಷಸನ ಕಂಡು ವೇಗದೊಳೈದಿ
ತುಂಡುಗಡಿದಾ ಶಿರವ ಕೊಂಡೊಯ್ದು ಮಲೆತವರ
ಗಂಡ ನಿನಗಿದಿರುಂಟೆ ನಿಜಲಿಂಗ ಭವಭಂಗ ಶರಣಜನವರದ ಜಯತು ‖ ೨೦


ವರಚಲುವ ಸದ್ಗುಣವನೊರೆದೊರೆದು ಬೋಧಿಸಲು
ಹರನೆ ನಿನಗಿಂದಾರು ಪಿರಿಯರಿಲ್ಲದರಿಂದೆ
ಕೊರಳೊಳಗೆ ಬಗೆಬಗೆಯ ಶಿರಮಾಲೆಗಳ ತಾಳ್ದೆ ಕರಿದೊಗಲಪೊರ್ದೆಯಭವ
ಉರಗನಾಭರಣವನು ಧರಿಸಿಕೊಂಡೆಲೆ ದೇವ
ಸಿರಿಯಿರಲು ಮರುಳಂತೆ ತಿರಿದುಂಡೆ ಸತಿಯನಾ
ದರೆ ಬೇಡಿದರಿಗಿತ್ತೆ ನಿಜಲಿಂಗ ಭವಭಂಗ ಶರಣಜನವರದ ಜಯತು ‖ ೨೧ ‖

ಕಡುಮೋಹದಿಂದೆ ಕೈವಿಡಿದು ರಕ್ಷಿಸಿಕೊಂಬ
ಒಡೆಯರೆಂಬುವರಿಲ್ಲ ಅಡಿಗಡಿಗೆ ಬಣ್ಣಿಸುವ
ಪಡೆದವರು ಮುನ್ನಿಲ್ಲದೊಡೆ ಶಿರವ ಕುಂತಳವು ತೊಡರಿ ನಿಡುಜಡೆಯಾದವು
ಉಡಿಗೆ ಪುಲಿಚರ್ಮ ಮೈಗಿಡಿವಿಡಿದ ಬೂದಿ ಕ
ಪ್ಪಡರಿತಿದನೇಂ ಪೇಳ್ವೆ ಬಿಡದೆ ಕರತಳದಲ್ಲಿ
ಪಿಡಿದೆ ಶಿರಪಾತ್ರೆಯನು ನಿಜಲಿಂಗ ಭವಭಂಗ ಶರಣಜನವರದ ಜಯತು ‖
೨೨ ‖
ಸಿರಿವಂತನೆನಲು ಭಿಕ್ಷವ ಬೇಡಿದೆಲೆ ದೇವ
ಸಿರಿಹೀನನೆನಲು ಮೂಲೋಕದೊಡೆಯನು ನೀನು
ಧರಣೀಶನೆನಲು ಬಲಿಸುತನ ದ್ವಾರವ ಕಾಯ್ದೆ ಬಡವನೆನಲಪ್ರತಿಮನು
ಹಿರಿಯನೆಂಬೆನೆ ಕಲ್ಲಲಿಡಿಸಿಕೊಂಡೆಲೆ ದೇವ
ಕಿರಿಯನೆಂದೆನಲು ದೇವಾಧಿದೇವೇಶ ನಿ