ಪುಟ:ಶತಕ ಸಂಪುಟ.pdf/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೬೮

ಶತಕ ಸಂಪುಟ


ಮ್ಮಿರವ ಬಣ್ಣಿಸಲರಿದು ನಿಜಲಿಂಗ ಭವಭಂಗ ಶರಣಜನವರದ ಜಯತು
೨೩ ‖

ಪ್ರತಿರಹಿತನೆಂಬುವದು ಪುಸಿಯಲ್ಲವೈ ಸದಾ
ಗತಿಯಾಪ್ತಸಾರಂಗ ತುಹಿನಕರಮೌಳಿ ದುಃ
ಕೃತಿಭೂಷಣಾಂಬುಜೋದರಬಾಣ ಮೇರುಪರ್ವತಶರಾಸನಗಳಿವೆ ಕೋ
ಶತಪತ್ರಸಖಕೋಟಿತೇಜವಿಗ್ರಹನೆ ಮ
ನ್ಮಥನಾಶ ನಿನಗಿಲ್ಲದಿನ್ನೊರ್ವಗಿನಿತುಂಟೆ
ಚತುರಾಸ್ಯನುತಚರಣ ನಿಜಲಿಂಗ ಭವಭಂಗ ಶರಣಜನವರದ ಜಯತು‖೨೪


ಶಿವ ನಿಮ್ಮ ಸ್ತುತಿಸಲುರಗೇಂದ್ರನಂತಿರಬೇಕು
ಶಿವ ನಿಮ್ಮ ನೋಡುವರೆ ಸುರಪನಂತಿರಬೇಕು
ಶಿವ ನಿಮಗೆ ಪುಷ್ಪಾರ್ಚನೆಯ ಮಾಡುವರೆ ಕಾರ್ತಿವೀರ್ಯನಂತಿರಲುಬೇಕು
ಶಿವ ನಿಮ್ಮ ಪೂಜಿಸಲು ಬಾಣನಂತಿರಬೇಕು
ಶಿವಕತೆಯ ಕೇಳೆ ರಾವಣನಂತೆಯೆನಗೆಯಿಂ
ತಿವನೆಲ್ಲ ಕೊಡದಾದೆ ನಿಜಲಿಂಗ ಭವಭಂಗ ಶರಣಜನವರದ ಜಯತು‖ ೨೫


ಚಿತ್ತೈಸು ಶಂಕರನೆ ಮತ್ತೊರ್ವ ಸತಿಯಳನು
ಅತ್ಯಂತ ಪ್ರೇಮದಲಿ ಪೊತ್ತೆ ಸಿರದೆಡೆಯಲ್ಲಿ
ಮತ್ತೆ ನಾನಾಕೆಗಿಂದತ್ತತ್ತಲಾದೆನೆಂದೆನುತ ಪಾರ್ವತಿ ನುಡಿಯಲು
ಗೋತ್ರಾರಿಗತಿಭೋಗವಿತ್ತು ನಾಗಜಚರ್ಮ
ವಸ್ತ್ರನಾದಡೆ ಕಿರಿದೆ ಚಿತ್ತವಲ್ಲಭೆ ಕೇಳೆ
ನುತ್ತ ಸಂತೈಸಿದನು ನಿಜಲಿಂಗ ಭವಭಂಗ ಶರಣಜನವರದ ಜಯತು ‖ ೨೬ ‖
ಮದನಾರಿಯನು ತಿಳಿಯದೆ ವಿಚಾರಿಸದೆ ದಯಾ
ನಿಧಿಯೆಂದು ಫಣಿರಾಜನಧಿಕಹರುಷದೊಳಿರಲು
ಗದಗದಿಪ ಸೀತಾಳನದಿಯ ಸನ್ನಿಧಿಯೊಳಿರಲಿದಕೆ ಬಲುಸನ್ನಿಗೊಂಡು