ಕಾಪುರುಷರಿಗೆ ಸುಜನರಿಂಗಿತವು ತಿಳಿಯುಂಟೆ
ಕೋಪಿಗಳ ಮನದೊಳಗೆ ಕರುಣಗುಣವಿರಲುಂಟೆ
ಪಾಪಿಮನುಜರಿಗೆಲ್ಲ ಧರ್ಮವಾಸನೆಯುಂಟೆ ನಿಂದಕಗೆ ನೀತಿಯುಂಟೆ
ಕೂಪದೊಳು ಹರಿಯುತಿಹ ಜಲವ ನೋಡಿದರುಂಟೆ
ಆ ಪರಮ ಮೂಢರಿಗೆ ಶಿವ ನಿಮ್ಮ ಸ್ಮರಣೆಯಾ
ಲಾಪದೊಳಗಿರಲುಂಟೆ ನಿಜಲಿಂಗ ಭವಭಂಗ ಶರಣಜನವರದ ಜಯತು‖ ೩೧
‖
ಧುರಧೀರನಾದವಗೆ ಮರಣದಂಜಿಕೆಯುಂಟೆ
ವರ ಜಿತೇಂದ್ರಿಗೆ ಚದುರೆಯರ ಹಂಬಲಿರಲುಂಟೆ
ಮೆರೆವ ತ್ಯಾಗಿಗೆ ಹಣದ ಪರವೆಯೆಂಬುವುದುಂಟೆ ಬಲ್ಲರ್ಗೆ ಭಯಗಳುಂಟೆ
ಪರಮ ಸುಜ್ಞಾನಿಗಳಿಗತಿಗರ್ವವಿರಲುಂಟೆ
ಧರಣಿಯೊಳು ಮೋಕ್ಷವನು ಬಯಸುವರು ಶಿವ ನಿಮ್ಮ
ಸ್ಮರಣೆಯನು ಬಿಡಲುಂಟೆ ನಿಜಲಿಂಗ ಭವಭಂಗ ಶರಣಜನವರದ ಜಯತು‖ ೩೨
‖
ಧೃಡವಿಲ್ಲದನ ಭಜನೆ ಸಿದ್ಧಿಯಾಗುವುದುಂಟೆ
ಕಡುಮಂದಮತಿಗೆ ಪೇಳಲು ಜ್ಞಾನ ಬರಲುಂಟೆ
ನಡತೆಹೀನನ ಹೃದಯದೊಳು ಭಕ್ತಿಗುಣವುಂಟೆ ಖೂಳರಿಗೆ ಸತ್ಯವುಂಟೆ
ಬಡಮನದವಂಗೆ ೧ಔದಾರ್ಯ೧ಬುದ್ದಿಗಳುಂಟೆ
ಪಡೆದುದಲ್ಲದೆ ಹೆಚ್ಚು ಬರಲುಂಟೆ ೨ನಿನ್ನೆ೨ನೆಯ
ದೊಡೆ ಸ್ಥಿರದ ಪದವುಂಟೆ ನಿಜಲಿಂಗ ಭವಭಂಗ ಶರಣಜನವರದ ಜಯತು‖೩೩
‖
ಜಗದಂಬಕನ ಕೂಡೆ ತಮವು ಸೆಣಸುವುದುಂಟೆ
ಖಗರಾಜನೊಡನೆ ದ್ವಯಜಿಹ್ವೆ ಗೆಲ್ಲುವುದುಂಟೆ
ಭುಗಿಲೆನಿಪ ವ್ಯಾಘ್ರನೊಳು ಮೇಷ ಜಯಿಸುವುದುಂಟೆ ಕುಲಿಶ ಗಿರಿಗಂಜಲುಂಟೆ
ಮೃಗರಾಜನೊಳು ಕಾದಿ ಕುಂಭಿ ಜೀವಿಸಲುಂಟೆ
ಪುಟ:ಶತಕ ಸಂಪುಟ.pdf/೧೧೦
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
೭೦
ಶತಕ ಸಂಪುಟ