ಸರಿಯಿಲ್ಲದರ ಕೂಡ ವಾದಿಸುವವನತಿಮೂರ್ಖ
ಗುರುಹಿರಿಯರುಗಳ ವಾಕ್ಯವ ಮೀರುವವ ಮೂರ್ಖ
ಗುರುವ೫ಚನದಲ್ಲಿ ಹಮ್ಮನಾಡುವವ೫ಮೂರ್ಖ೬ಬಲು೬ಗಾಡಿಕಾರ್ತಿಯರೊಲವನು
ನೆರೆನಂಬಿ ನಿಜವೆಂದು ಮರುಳುಗೊಂಡವ ಮೂರ್ಖ
ಕರುಣನಿಧಿ ಭಕ್ತವತ್ಸಲ ನಿಮ್ಮ ನಾಮವನು
ಸ್ಮರಿಸದವ ೭ಘನ೭ಮೂರ್ಖ ನಿಜಲಿಂಗ ಭವಭಂಗ ಶರಣಜನವರದ ಜಯತು
‖೪೨‖
ಅಂತರಂಗ೧ವ ಕಪಟ೧ ಮನುಜಗುಸುರುವ ಮೂರ್ಖ
ಚಿಂತಾತುರನೊ೨ಳು ಸರಸವನಾಡುವವ ಮೂರ್ಖ
ಸಂತೆಯೊಳು ಶಾಸ್ತ್ರವನು ಹೇ೩ಳುವವ ಕಡುಮೂರ್ಖ ತನಗಿಂದ ಬಲ್ಲಿದರೊಳು
ಪಂತವನು ಕಟ್ಟಿಕೊಂಬುವನೀಗ ೪ಸಲೆ೪ ಮೂರ್ಖ
ಕಂತುಹರ ನಿಮ್ಮ ನಾಮವ ನುತಿಸ೫ದಿರ್ಪನ
ತ್ಯಂತವಾಗಿಹ೫ ಮೂರ್ಖ ನಿಜಲಿಂಗ ಭವಭಂಗ ಶರಣಜನವರದ ಜಯತು‖
೪೩‖
ಮನ್ನಣೆಯ ಕೊಡದ ಠಾವಿಗೆ ಹೋಗುವವ೬ ಮೂರ್ಖ
ಅನ್ಯರನು ಧಿಕ್ಕರಿಸಿಯಾಡಿ ೭ಕೊಂಬವ೭ ಮೂರ್ಖ
ಹೊನ್ನುಳ್ಳ ದೊರೆಗಳನು ನೋಡಿ ಮರುಗುವ ಮೂರ್ಖ
ತನ್ನೊಳೇನುವನರಿಯದೆ
ಉನ್ನತೋನ್ನತ ಪಂಡಿತರ ಹಳಿಯುವವ೬ ಮೂರ್ಖ
ಪನ್ನಂಗಭೂಷಣಾನ್ವಿತ ನಿನ್ನ ಚಾರಿತ್ರ
ವನ್ನು ಜರಿವ೮ವ ಮೂರ್ಖ ನಿಜಲಿಂಗ ಭವಭಂಗ ಶರಣಜನ೯ ವರದ ಜಯತು೯ ‖
೪೪ ‖
ಅನುವರಿಯದಾತಂಗೆ ದೈನ್ಯಬಡುವವ೬ ಮೂರ್ಖ
ತನುಜರಿಗೆ ವಿದ್ಯೆಯನು ಕಲಿಸದವನತಿ ಮೂರ್ಖ
ಪುಟ:ಶತಕ ಸಂಪುಟ.pdf/೧೧೩
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
೭೩