ಪುಟ:ಶತಕ ಸಂಪುಟ.pdf/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೭೫

ಶತಕ ಸಂಪುಟ

ಜನನಿಜನಕರ ಬೈದು ಬಳಲಿಸುವಬಲುಮೂರ್ಖ ಮಾತುಹೊಗಾಡಿ ಬಳಿಕ
ನೆನೆನೆನೆದು ಕಡೆಯಲ್ಲಿ ಹುಡುಕಾಡುವವ ಮೂರ್ಖ
ಘನಕರುಣಿ ನಿಮ್ಮ ಧ್ಯಾನವ ಮಾಡದವ ಮೂರ್ಖ
ಮುನಿಜನರ ವಂದಿತನೆ ನಿಜಲಿಂಗ ಭವಭಂಗ ಶರಣಜನವರದ ಜಯತು ||
೪೫ ||

ಏಕಾಂತವಾಡುವಲ್ಲಿಗೆ ಹೋಗದವ ಜಾಣ
ಲೋಕದೊಳಗವರವರ ತೆರದಿ ನಡೆವವ ಜಾಣ
ಕಾಕುಮನುಜರನು ಸರಿಗಟ್ಟಿಕೊಳದವ ಜಾಣ ಭೂಕಾಂತರಾಸ್ಥಾನದಿ
ಜೋಕೆಯಿಂದೇಕಚಿತ್ತದಲ್ಲಿ ನಡೆವವ ಜಾಣ
ಲೋಕೇಶ ನಿಮ್ಮ ಚರಣವ ನಂಬಿದವ ಜಾಣ
ಲೋಕದೊಳು ಸಲೆಜಾಣ ನಿಜಲಿಂಗ ಭವಭಂಗ ಶರಣಜನವರದ ಜಯತು
|| ೪೬ ||


ಮಂದಮತಿ ನಿಂದಿಸಲು ತಾಳಿಕೊಂಡವ
ಒಂದೆ ಮನದಲಿ " ಧ್ಯಾನವನು ಮಾಡುವವ ಜಾಣ
ಬಂದ ಬಲುಚಿಂತೆಯೊಳು ಧೈರ್ಯವಿಡಿದವ ಜಾಣ ಹೀನರಿಂ ಕಲಹಂಗಳು
ಸಂದಿಸಲು ಶಾಂತಗುಣವನು ತಾಳಿದವ ಜಾಣ
ಇಂದುಶೇಖರ ನಿಮ್ಮ ಪೂಜಿಪನು ಕಡುಜಾಣ
ಅಂಧಕಾಸುರಹರನ ನಿಜಲಿಂಗ ಭವಭಂಗ ಶರಣಜನವರದ ಜಯತು || ೪೭
||


ಸತಿಯಳಿಗೆ ಸಲುಗೆಯನು ಕೊಡದವನು ಕಡುಜಾಣ
ಚತುರ ನುಡಿ ಬಾರದಿರೆ ಸುಮ್ಮನಿರುವವ ಜಾಣ
ಗತಿಯಿಲ್ಲದವಗೆ ಹೊಣೆಯಾಗದಿದ್ದವ ಜಾಣ ಯೋಗ್ಯವಲ್ಲದ ನುಡಿಗಳ
ಶ್ರುತಿಗೊಟ್ಟು ಕೇಳಲೊಲ್ಲದೆ ತೊಲಗುವವ ಜಾಣ
ಸಿತಿಕಂಠ ನಿನ್ನ ಚರಣಾಂಬುಜವ ನಂಬಿದವ
ಕ್ಶಿತಿಯೊಳಗೆ ಬಹುಜಾಣ ನಿಜಲಿಂಗ ಭವಭಂಗ ಶರಣಜನವರದ ಜಯತು