ನಿಟ್ಟಿಸುವರಡಿಗಡಿಗೆ ಮುದ್ದಿಸುತ ಮೊಲೆವಾಲ
ಕೊಟ್ಟು ರಕ್ಷಿಸುವಂತೆ ನೇಮಿಸಿದೆ ಶಿವ ನಿಮ್ಮ
ಕಟ್ಟಳೆಗೆ ಸರಿಯುಂಟೆ ನಿಜಲಿಂಗ ಭವಭಂಗ ಶರಣಜನವರದ ಜಯತು || ೫೨||
ಮಿಡಿಹಸುಳನಾಗಿರುತ ಬಳಿಕ ಗಾಗೋಯೆಂದು
ಹೊಡೆಮಗ್ಗಲಾಗಿ ಬಳಿಕಂಬೆಗಾಲಿಕ್ಕುತಲಿ
ನಡೆಗಲಿತು ಬೀಳುತೇಳುತ ನಗುತಲಳು, ತೊದಲ್ನುಡಿಯಿಂದ ಮಾತಾಡುತ
ಒಡನೆ ಸರಿಗೆಳೆಯರೊಳು ಬಾಲಕೇಳಿಯನೆಲ್ಲ
ಬೆಡಗಿನಿಂದಾಡುತಿಹರಿಂತು ನೇಮಿಸಿದ ಜಗ
ದೊಡೆಯ ನೀನಹುದಹುದು ನಿಜಲಿಂಗ ಭವಭಂಗ ಶರಣಜನವರದ ಜಯತು
||೫೩||
ವಿನಯದಿಂ ಬಾಲಕೇಳಿಯನಾಡುತಿರೆ ಬಳಿಕ
ಅನುನಯದಿ ಉಪನಯನಮಂ ಮಾಡಿ ಕುಲವಿದ್ಯೆ
ಯನು ಕಲಿಸಿ ವೈವಾಹವಾದ ಬಳಿಕಿನ್ನು ಯೌವನದೇವಿ ಬಂದೊದಗಲು
ತನಗಾರು ಸರಿಯಿಲ್ಲವೆನುತ ಪಶುಧನಧಾನ್ಯ
ವನು ತನ್ನದೆನ್ನದೆಂದೆನುತ ಗಳಿಸುವ ತಂತ್ರ
ವನು ಜಗಕೆ ನಿರ್ಮಿಸಿದ ನಿಜಲಿಂಗ ಭವಭಂಗ ಶರಣಜನವರದ ಜಯತು || ೫೪
||
ಪ್ರಾಯದಿಂದಿರೆ ಜರಾಂಗನೆಯು ಬಂದೆಡೆಗೊಳಲು
ಕಾಯ ಸತುಗೆಟ್ಟು ಪಂಚೇಂದ್ರಿಗಳು ಸವಿಗೆಡಲು
ಸಾಯಬೇಕಿನ್ನೆನುತ ನುಡಿಯುತಿರೆ ಮರಣಕಾಲಕೆ ರೋಗ ಪ್ರಾಪ್ತಿಯಾಗಿ
ವಾಯು ದೇಹವ ಬಿಟ್ಟು ತೊಲಗಿದಡೆ ಕಿಚ್ಚಿನೋಳ
ಗೋಯ್ಲಿಡಲು ರೂಪಳಿದು ಹೋಗುವುದು ಶಿವ ನಿಮ್ಮ
ಮಾಯವಾರಿಗೆ ತಿಳಿವು ನಿಜಲಿಂಗ ಭವಭಂಗ ಶರಣಜನವರದ ಜಯತು|| ೫೫ ||
ಕನ್ನಡಿಯು ಹೊಳೆವುತರಮನೆಯೊಳಗೆ ತಾನಿರ್ದು
ತನೊಳಗೆ ಮನೆಯನೆಲ್ಲವ ತೋರುವಂದದಲಿ
ಪುಟ:ಶತಕ ಸಂಪುಟ.pdf/೧೧೬
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
೭೬
ಶತಕ ಸಂಪುಟ