ವಿಷಯಕ್ಕೆ ಹೋಗು

ಪುಟ:ಶತಕ ಸಂಪುಟ.pdf/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೭೭




ಪನ್ನಂಗಭೂಷಣನೆ ನಿನ್ನೊಳಗೆ ಜಗವೆಲ್ಲವನು ತಾಳಿಕೊಂಡ ಬಳಿಕ
ಇನ್ನೇನು ಪೇಳ್ವ ಜಗದೊಳಗೆಲ್ಲ ನೀನಿರ್ದು
ನನ್ನಿಯಿಂದರಿವ ಜಾಣರಿಗೆ ರೂಪವ ತೋರ್ಪ
ಉನ್ನತೋನ್ನತ ಮಹಿಮ ನಿಜಲಿಂಗ ಭವಭಂಗ ಶರಣಜನವರದ ಜಯತು || ೫೬
||


ದಧಿಯ ಮಥನಿಸಲಾಗಿ ನವನೀತ ತೋರ್ಪಂತೆ
ಸುಧೆಗೋಲ ಮರ್ದಿಸಲು ಸಕ್ಕರೆಯು ಆದಂತೆ
ಮುದದಿಂದ ಚಂದನ'ವನರೆಯಲಾಕ್ಷಣದಲ್ಲಿ ಶ್ರೀಗಂಧ ಪೊಳ್ಳುವಂತೆ
ಅಧಿಕ ಜ್ಞಾನಾರೂಢರಾಗಿ ಇಟ್ಟಿಸುವ ಸದು
ಹೃದಯರಿಗೆ ತಾನು ತಾನಾಗಿ ಸವಿಗೊಡುವ ದಯ
ನಿಧಿಯೇ ನೀನಹುದಹುದು ನಿಜಲಿಂಗ ಭವಭಂಗ ಶರಣಜನವರದ ಜಯತು || ೫೭
||


ಮೊಲೆವಾಲ ಮೇಲೆ ಬಾಲಕರ ಮನವಿರುವಂತೆ
ಜಲಜಪರಿಮಳಕೆ ಷಟ್ಟದಿಯ ಮನವಿರುವಂತೆ
ಚಲುವ ಚಂದ್ರಮನ ಹಂಬಲು ಚಕೋರಂಗಿರುವ ತೆರನಂತೆ ಭಕ್ತಿಯಿಂದ
ಒಲಿದು 'ಶಿವ ನಿಮ್ಮ ಧ್ಯಾನವ ಮಾಳ ಸಜ್ಜನರ
ಹಲವು ದೋಷವನೆಲ್ಲ ಕಳೆದು ಮರಮರಳಿ ಭವ
ದಲಿ ಬಾರದೊಲು ಮಾತ್ರ ನಿಜಲಿಂಗ ಭವಭಂಗ ಶರಣಜನವರದ ಜಯತು | ೫೮
||


ಹಲವು ಜಲಕುಂಭದೊಳು ಭಾನುವಿನ ಪ್ರತಿಬಿಂಬ
ಹಲವಾಗಿ ತೋರುತಿರೆ ಗಗನದಲ್ಲಿಹ ಸೂರ್ಯ
ಸಲೆ ತೇಜದಿಂದೊರ್ವನಿರುವಂತೆ ಪದಿನಾಲ್ಕು ಲೋಕದೊಳಗರ್ತಿಯಿಂದ
ನೆಲೆಗೊಂಡು ಪಿಂಡಾಂಡಬ್ರಹ್ಮಾಂಡದೊಳು ತುಂಬಿ
ನಲಿನಲಿದು ನೀನೆ ನೀನಾಗಿಪೆ ಜಗದೊಡೆಯ
ಮಲಹರನೆ ನಿರುಪಮನೆ ನಿಜಲಿಂಗ ಭವಭಂಗ ಶರಣಜನವರದ ಜಯತು || ೫೯ ||