ಸ್ವಾನುಭಾವದೊಳೆನ್ನ ಮನವ ಇಲ್ಲಿಸಿ ನಿನ್ನ
ಧ್ಯಾನದೊಳಗಿರಿಸೆನ್ನ ನಿಜಲಿಂಗ ಭವಭಂಗ ಶರಣಜನವರದ ಜಯತು || ೬೭
|
ನಿತ್ಯವಾದುದನೆಲ್ಲ ಹಿಡಿಯಲೊಲ್ಲದು ಮನವು
ಮಿಥ್ಯವಾದುದನೆಲ್ಲ ಹಿಡಿಯುತಿಹುದೇ ಮನವು
ಸತ್ಯವಾಡುವರಡಗಿಕೊಂಡಿಹರಸತ್ಯಕ್ಕೆ ಕುಣಿಕುಣಿದು ಬರುತಲಿಹರು
ಮೃತ್ಯುಂಜಯನೆ ನಿನ್ನ ಮರೆಹೊಕ್ಕೆ ದುರ್ಮನವ
ಕತ್ತರಿಸಿ ಸನ್ಮಾರ್ಗದೊಳು ಬಿಡದೆ ನಡೆವ ಮನ
ವಿತ್ತು ಸಲಹುವುದನ್ನ ನಿಜಲಿಂಗ ಭವಭಂಗ ಶರಣಜನವರದ ಜಯತು|| ೬೮ ||
ಪರಸತಿಯ ಬಳಿಗೆಳೆಯುತಿದೆ ಕಾಮವೆಂಬುವುದು
ಪಿರಿದು ಬೈದಾಡಿಸುವುದೇ ಕ್ರೋಧವೆಂಬುವುದು
ನೆರೆ ಧರ್ಮಮಾಡಗೊಡದೀ ಲೋಭ ಮೋಹ ತಾ ಮಿಥ್ಯವನು'ಹರಿಯಗೊಡದು'
ಗುರುಹಿರಿಯರಿಗೆ ನಮಿಸಗೊಡದು ಮದವೆಂಬುವುದು
ಪರಮ ವೈರವ ಬೆಳೆಸುತಿದೆ ಮತ್ಸರಿಂತಿವನು
ಪರಿಹರಿಸಿ ಸಲಹೆನ್ನ ನಿಜಲಿಂಗ ಭವಭಂಗ ಶರಣಜನವರದ ಜಯತು|| ೬೯ ||
ಪರುಷ ಲೋಹವನು ತನ್ನಂತೆ ಮಾಡುವ ತೆರದಿ
ಕುರುಡಿ ಪರಹುಳವ ತನ್ನಂತೆ ಮಾಡುವ ತೆರದಿ
ಪರಿಮಳದಿ ಚಂದನವು ಕಾಮರವ ತನ್ನಂತೆ ಮಾಡಿಕೊಂಬುವ ತೆರದಲಿ
ಪರಮಾತ್ಮ ನಿನ್ನ ಭಕ್ತರಿಗೆ ಸ್ಥಿರಪದವೀವ
ಬಿರುದಂಕನೆಂದು ನಂಬಿದೆನು ಭವಪಾಶವನು
ಪರಿಹರಿಸಿ ಸಲಹೆನ್ನ ನಿಜಲಿಂಗ ಭವಭಂಗ ಶರಣಜನವರದ ಜಯತು|| ೭೦ ||
ಎನ್ನೊಳಪರಾಧವೇನಯ್ಯ ದೇವರ ದೇವ
ನಿನ್ನಿಂದ ನಡೆವುದನು ನಿನ್ನಿಂದ ನುಡಿವುದನು
ನಿನ್ನಿಂದ ಸಕಲ ಸುಖದುಃಖಗಳನನುಭವಿಸಿಕೊಂಡಿದ್ದ ಬಡವ ನಾನು
ಪುಟ:ಶತಕ ಸಂಪುಟ.pdf/೧೨೦
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
೮೦
ಶತಕ ಸಂಪುಟ