ಪುಟ:ಶತಕ ಸಂಪುಟ.pdf/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೮೧


ಪನ್ನಂಗಭೂಣನೆ ಪಾವನ್ನ ವಿಗ್ರಹನೆ
ನಿನ್ನ ನಾಮವ ಮರೆಯದಂತೆ ಸದ್ಗುಣವಿತ್ತು
ಎನ್ನ ಸಲಹುವುದಯ್ಯ ನಿಜಲಿಂಗ ಭವಭಂಗ ಶರಣಜನವರದ ಜಯತು || ೭೧
||


ಜನನಿ ಜಠರದಿ ತರಳನಿರಲು ಸಲಹುವರಾರು
ಅನುನಯದೊಳಲ್ಲಿಂದ ಹೊರಮಡಿಸುತಿಹರಾರು
ದಿನದಿನಕ್ಕೆ ಹೆಚ್ಚಾಗಿ ಬೆಳಸುತಿಪ್ಪರದಾರು ಬಳಿಕೋಂದು ನೆವದಿಂದಲಿ
ತನುವಿಂದೆ ಪ್ರಾಣವನ್ನು ಕಡೆಗೆ ತೋಲಗಿಪರಾರು
ಅನಲಾಕ್ಷ ನೀನಲ್ಲದಿನ್ನುಂಟೆ ಭಕ್ತಿಗುಣ
ವನು ಕೊಟ್ಟು ಸಲಹೆನ್ನ ನಿಜಲಿಂಗ ಭವಭಂಗ ಶರಣಜನವರದ ಜಯತು|| ೭೨ ||


ತೆಂಗಿನೊಳು ವಿಮಲೋದಕವ ಹಾಕಿಸಿದವರಾರು
ಭ್ಹ್ರಂಗವೈರಿಗೆ ಪರಿಮಳವನು ಕೊಟ್ಟವರಾರು
ಕಂಗೊಳಿಪ ನವಿಲಿಂಗೆ ಬಗೆಬಗೆಯ ಬಣ್ಣವನು ಬರೆದು ನಿರ್ಮಿಸಿದರಾರು
ರಂಗುಬಣ್ಣವನು ಪವಳಕೆ ಸಾರ್ಚಿದವರಾರು
ಮಂಗಳಾತ್ಮಕನೆ ನೀನಲ್ಲದಿನ್ನಾರುಂಟು
ಹಿಂಗದೆನ್ನನು ಸಲಹು ನಿಜಲಿಂಗ ಭವಭಂಗ ಶರಣಜನವರದ ಜಯತು | ೭೩
|


ಕುಸುಮವನು ಕಿವಿಗೆ ಸಾರ್ಚಿದಡೆ ಪರಿಮಳವಹುದೆ
ರಸದಾಳಿ ಕಬ್ಬ ನಾಸಿಕ ಹಸಿದು ಸೇವಿಸದೆ
ಕುಶಲ ವಿದ್ಯೆಯನೆಲ್ಲ ಬಾಯಿ ತಾ ನೋಡುವುದೆ ಹಸಿಹಸಿದು ಬಳಲುತಿರಲು
ಒಸೆದು ನಯನವು ಭೋಜನವನೂಡಿಕೊಂಬುವುದೆ
ಅಸಮಾಕ್ಷ ನೀನಲ್ಲದತಿ ದುರಿತವನು ಪರಿಹ
ರಿಸುವನ್ನರಿನ್ಯಾರು ನಿಜಲಿಂಗ ಭವಭಂಗ ಶರಣಜನವರದ ಜಯತು || ೭೪
||