ಮಾರುತನು ನಡೆತಂದ ಸಮಯದಲ್ಲಿ ಧಾನ್ಯವನು
ತೂರಿಕೊಳಬೇಕು ಸಟೆಯಲ್ಲವೀ ವಾಕ್ಯವು ಶ
ರೀರದೊಳು ಪ್ರಾಣನಾಯಕನಿದ್ದ ಸಮಯದಲ್ಲಿ ಶಿವ ನಿಮ್ಮ ಹಾಡಿ ಹೊಗಳಿ
ಭೂರಿಪಾಪವನೆಲ್ಲ ಈಡಾಡಬೇಕೆಂದು
ಮಾರಾರಿ ನಿನ್ನ ಮರೆಹೊಕ್ಕೆ ಸಲಹುವುದನ್ನ
ಮೂರು ಕಣ್ಣುಳ್ಳವನೆ ನಿಜಲಿಂಗ ಭವಭಂಗ ಶರಣಜನವರದ ಜಯತು || ೭೫ ||
ಭವಭವದ ಚರಿತವನು ತಿಳಿ ತಿಳಿದು ನೋಡಿದರೆ
ಲವಲವಿಸುತೆನ್ನೆದೆಯು ಗದಗದಿಸಿ ನಡುಗುತಿದೆ
ಶಿವನೆ ಕೇಳಿನ್ನು ಮುಟ್ಟಿಸಬೇಡ ಭೂಮಿಯೊಳು ಬೇಡಿಕೊಂಬೆನು ನಿಮ್ಮನು
ಇವನು ಬಲುಮಂದಮತಿಯೆಂದೆನ್ನ ಜರಿಯ'ದಲೆ
ಅವಿರಳಾನಂದ ಜ್ಞಾನವನಿತ್ತು ಬಿಡದೆ ಸಲ
ಹುವುದೆನ್ನ ಕರುಣದಲಿ ನಿಜಲಿಂಗ ಭವಭಂಗ ಶರಣಜನವರದ ಜಯತು |೭೬ ||
ಮನುಮಥನ ಸಡೆಯಾಂತ್ಯದಲಿ ಮದನಾಂಬು
ಜನಕನಾತ್ನವ ತೊಲಗಿ ಜನನಿಯುದರದಿ ನಿಂದು
ಘನ ಹೇಸಿಕೆಯ ರಕ್ತಮಾಂಸಕಫಕ್ರಿಮಿಯೊಳಗೆ ದಿನದಿನಕೆ ಪಿಂಡಬೆಳೆದು
ಅನುವಿಲ್ಲದುಬ್ಬಸದಿ ಹುದುಗಿಕೊಂಡಿರಬೇಕು
ಜನನಕಾಲದಲಿ ಪೊರಮಡುವಾಗ ಬಲುಕಷ್ಟ
ವನು ಪೇಳಲಳವಲ್ಲ ನಿಜಲಿಂಗ ಭವಭಂಗ ಶರಣಜನವರದ ಜಯತು | ೭೭
||
ದೋಷವಾಸದ ಯೋನಿಯಿಂದ ಹುಟ್ಟಿದ ಬಳಿಕ
ಪಾಸಿನೊಳಗಿಹ ತಗಣಿ ಕೂರಿ ಚಿಕ್ಕಡ ಕಡಿಯ
ಲಾ ಸಂಕಟವದೊಂದು ಹೊಟ್ಟೆನೋಂದಳುತಿರಲು ಮೊಲೆವಾಲನೂಡುತಿಹರು
ಹೇಸಿಕೆಯ ತನ್ನ ಮಲಮೂತ್ರದೊಳು ತಾ ಹೊರಳಿ
ಘಾಸಿಯಾಗುತ ಪೇಳುವರೆ ನುಡಿಗಳಿಲ್ಲಲಾ
ಯಾಸವದನೇಂ ಪೇಳ್ವ ನಿಜಲಿಂಗ ಭವಭಂಗ ಶರಣಜನವರದ ಜಯತು|| ೭೮ ||
ಪುಟ:ಶತಕ ಸಂಪುಟ.pdf/೧೨೨
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
೮೨
ಶತಕ ಸಂಪುಟ