ವಿಷಯಕ್ಕೆ ಹೋಗು

ಪುಟ:ಶತಕ ಸಂಪುಟ.pdf/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೮೩


ತರಳತನದಿಂದರಲು ಬಳಿಕ ಮೌವನ ಬರಲು
ತರುಣಿ ಸುತರಾಗಲವರನು ಸಲಹಬೇಕೆನುತ
ಪರಿಪರಿಯ ಧಾವತಿಯ ನೆಗಳಿ ಬಳಬಳಲಿ ನಾನಾಯೋಚನೆಯನೆಸಗುತ
ಇರಲನಿತರೊಳು ಸತಿಯು ಸುತರು ಮರಣಂಗೈಯೆ
ಪರಮಶೋಕಾತುರದಿ ನೊಂದು ಚಿಂತಿಸುವ ಕರ
ಕರಿಯು ಪೇಳುವರಳವೆ ನಿಜಲಿಂಗ ಭವಭಂಗ ಶರಣಜನವರದ ಜಯತು || ೭೯ ||


ಬದುಕುಮನೆಮಾಡಿಕೊಂಡಿರ ಜರಾಂಗನೆಯು ತಾ
ನೊದಗಲಾಕ್ಷಣದಲ್ಲಿ ಪಂಚೇಂದ್ರಿಯಗಳು
ಹದಗೆಡಲು ಸತಿಸುತರು ಮುಡಿಪಾಪಿ ತಾ*ಸಾಯಲೊಲ್ಲನು ಯಂದು ಹಳಿಯು ತಿರಲು
ಇದು ಹೊರತು ಮರಣಾಲದೊಳೊಂದು ವ್ಯಾಧಿಯೊಳು
ಕುದಿಕುದಿದು ಪ್ರಾಣವನ್ನು ಬಿಡಬೇಕು ಸತ್ತುಹು
ಟ್ಟದ ಬಗೆಯ ಮಾಡುವುದು ನಿಜಲಿಂಗ ಭವಭೂಗ ಶರಣಜನವರದ ಜಯತು | ೮೦
||

ರೂಢಿಯೊಳಗೆಂತು ಜೀವಿಸಬೇಕು ಚಿತ್ತೈಸು
ಚಾಡಿಕೋರರು ಚೋರರುಗಳು ಸಿರಿವಂತರಡಿ
ನೋಡಿ ಬಳಲುವ ದುರಾಚಾರಿಗಳು ಪಾಪಿಗಳು ದುರ್ಜನರು ದಯಹೀನರು
ಕೂಡಿ ನಡೆವಲ್ಲಿ ಭೇದವನಿಕ್ಕುವರು ಪರರ್ಗೆ
ಕೇಡನೆಣಿಸುವರು ಕುಟಿಲರು ಕುಹಕಿಗಳು ಶಶಿಯ
ಸೂಡಿದನೆ ಸುಚರಿತ್ರ ನಿಜಲಿಂಗ ಭವಭಂಗ ಶರಣಜನವರದ ಜಯತು || ೮೧ |


ಒಡವೆಯಾಸೆಗೆ ಬಾಲಕರ ಕೊರಳ ಛೇದಿಪರು
ಬಿಡದೆ ಸವತಿಯ ಶಿಶುವ ಬಾವಿಯೊಳು ಕೆಡಹುವರು
ಕಡೆಗೆ ಧನಬರಲೆಂದು ಗರ್ಭಿಣಿಯ ಕೊಂಡೊಯ್ದು ಕಡಿಕಡಿದು ಕೊಲ್ಲುತಿಹರು
ಕಡುವಿಷವನಿಕ್ಕಿ ಮಲಮಕ್ಕಳನು ಕೊಲುತಿಹರು
ಕೊಡುವ ಧರ್ಮವ ಮಾಣಿಸುವರು ನಿಷ್ಕರುಣಿಗಳು
ನುಡಿದು ಪೇಳುವರಳವೆ ನಿಜಲಿಂಗ ಭವಭಂಗ ಶರಣಜನವರದ ಜಯತು || ೮೨