ಜಲವ ಮರ್ದಿಸಲು* ನವನೀತ “ಪೊಣ್ಣುವುದೆ ಅಜಗಳದಲ್ಲಿ ಮೆರೆವುತಿಪ್ಪ
ಮೊಲೆಗಳನ್ನು ತೊರೆವಿಡಿಯೆ ಆತನಿವಾಲು ಹೊರಡುವುದೆ
ಕುಲರಹಿತ ನಿನ್ನ ಧ್ಯಾನವು ಮಂದಮತಿಯ ಮನ
ದಲ್ಲಿ ತಾ ನೆಲಸುವುದೆ ನಿಜಲಿಂಗ ಭವಭಂಗ ಶರಣಜನವರದ ಜಯತು|| ೯೦ ||
ನಡುಮಾರ್ಗದೊಳಗೊರ್ವ ನಡೆನಡೆದು ಹೋಗುತಿರೆ
ಬಿಡದೆ ಪೆರ್ಬುಲ್ಲಿ ಕಂಡು ಸಿಡಿಲು ಭೋರ್ಗರೆವಂತೆ
ಘುಡುಘುಡಿಸುತಾರ್ಭಟಿಸುತಡಿಗಡಿಗೆ ಮಲೆಯುತಲಿ ತಡವಿಡದೆ ಲಂಗಿಸುತಲಿ
ಕಡು ಭಯಂಕರದಿಂದ ನಡೆ ತರಲು ಭೀತಿಸದೆ
ಮೃಡ ನಿನ್ನ ನಾಮವನು ಬಿಡದೆ ಕೀರ್ತಿಸುತಿರಲು
ದೃಢಭಕ್ತನಹುದಹುದು ನಿಜಲಿಂಗ ಭವಭಂಗ ಶರಣಜನವರದ ಜಯತು || ೯೧
||
ಪೊದೆಪೊದೆಯ ತೃಣ ಬೆಳದ ಕಾಂತಾರದೊಳಗೊರ್ವ
ಒದವೊದಗಿ ನಡೆತರುವ ಸಮಯದೊಳಗಾ ತೃಣಕೆ
ಬೆದಬದನೆ ಕಿಚ್ಚೆದ್ದು ಸುಡುಸುಡುತ ಪೇರುರಿಯು ಧಗಧಗಿಸಿ ನಾಲೈಸೆಯನು
ಪದುಪದುಳದಿಂ ಮುಸಿಕಿಕೊಂಡು ಬರುತಿರಲದಕೆ
ಹೆದಹೆದರದಾತ್ಮದೊಳು ನಿನ್ನ ಧ್ಯಾನವ ಮಾಳ
ಸದುಭಕ್ತನಹುದು ನಿಜಲಿಂಗ ಭವಭಂಗ ಶರಣಜನವರದ ಜಯತು || ೯೨
||
ತುರುಗಿರ್ದ ಕತ್ತಲೆಯೊಳೊರ್ವ ನಡುದಾರಿಯಲಿ
ಬರುವ ತತ್ಸಮಯದಲಿ ಕಾಳರಕ್ಕಸಿ ತನ್ನ
ಕರದಲ್ಲಿ ಕೊಳ್ಳಿಯನು ಹಿಡಕೊಂಡು ದಾಡೆಯೊಳು ಶಿರಗಳನು ಕಚ್ಚಿಕೊಂಡು
ಗರಗರನೆ ಕಣ್ಣು ತಿರುವುತ ಬಂದು ನಿಲಲದರ
ಪರಿಯ ಕಾಣುತ ಭೀತಿಗೊಳದೆ ಮನದೊಳು ನಿನ್ನ
ಸ್ಮರಿಸುವವ ದೃಢಭಕ್ಕ ನಿಜಲಿಂಗ ಭವಭಂಗ ಶರಣಜನವರದ ಜಯತು|| ೯೩
||
ಪುಟ:ಶತಕ ಸಂಪುಟ.pdf/೧೨೬
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
೮೬
ಶತಕ ಸಂಪುಟ