ವಿಷಯಕ್ಕೆ ಹೋಗು

ಪುಟ:ಶತಕ ಸಂಪುಟ.pdf/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೮೬


ಕಾಳಿಂಗಸರ್ಪ ತನ್ನೊಳು ತಾನೆ ರೋಷವನು
ತಾಳಿ ಭೋರ್ಗರೆಯುತ್ತಲಡಿಗಡಿಗೆ ನಾಲಗೆಯ
ಸೂಳೆಸಿ ತೆಗೆತೆಗೆದು ಬಲುವೇಗದಿಂದ ಹರಿಹರಿದು ಬರುವ
ವೇಳೆಯೊಳು ತನ್ನ ಮನದೊಳಗೆ ನಿರ್ಭಿತಿಯಲಿ
ಭಾಳಲೋಚನ ನಿನ್ನ ದಿವ್ಯ ನಾಮಾಮೃತವ
ಪೇಳುವವ ಸದ್ಭಕ್ತ ನಿಜಲಿಂಗ ಭವಭಂಗ ಶರಣಜನವರದ ಜಯತು || ೯೪ ||
ಕೆಲರು ಬಲುಮರುಳೆಂದು ಧಿಕ್ಕರಿಸಿ ಹಳಿಯುತಿರೆ
ಕೆಲರು ಬಲುಸುಜ್ಞಾನಿಯೆಂದೆನುತ ಮೊಗಳುತಿರೆ
ಕೆಲರು ಮತಿಹೀನ ಪಾಪಾತ್ಮನೆಂದಾಡುತಿರೆ ಕೆಲರು ಪುಣ್ಯಾತ್ಮನೆನಲು
ಕೆಲರು ಲೆಕ್ಕಿಸದೆ ನಡೆಯೆಂದು ಧೋಟಿಸುತಿರಲು
ಕೆಲರು ಮನ್ನಣೆಯಿಂದ ಕರೆಯ ಕುಂದದೆ ಹಿಂಗ್ಗ
ದಲೆ ನಡೆವನವ ಭಕ್ತ ನಿಜಲಿಂಗ ಭವಭಂಗ ಶರಣಜನವರದ ಜಯತು ||೯೫
||

ಅರುವತ್ತುನಾಲ್ಕು ವಿದ್ಯೆಯಲ್ಲಿ ಪರಿಣತನಾಗಿ
ಧುರಧೀರ ಧರ್ಮಾತ್ ತ್ಯಾಗಿ ಭೋಗಿಯುಮೆನಿಸಿ
ನರಲೋಕದೊಳು ನರರ ನಡತೆಯಿಂದಲಿ ನಡೆಯುತಹುದೆನಿಸಿಕೊಂಡು ಬಳಿಕ
ಮೆರೆವ ಪಿಂಡಾಂಡದೊಳು ಸೂಕ್ಷ್ಮದಿಂದಡಗಿಪ್ಪ
ಪರಮಾತ್ಮನೊಳು ಮನವ ಸಂದು ಭವಕಡಲನು
ತರಿಸುವಂಗೆಣೆಯುಂಟೆ ನಿಜಲಿಂಗ ಭವಭಂಗ ಶರಣಜನವರದ ಜಯತು ||
೯೬ ||

ಬರಹ "ಲೀಲಾವತಿಯು ಶಿಲ್ಪಸಾಮುದ್ರಿಕವು
ಭರತಶಾಸ್ತ್ರವು ಸೂಪಶಾಸ್ತ್ರ ಮನ್ಮಥಶಾಸ್ತ್ರ
ಮೆರೆವ ಜ್ಯೋತಿಷಶಾಸ್ತ್ರ ಶಬ್ದ ತರ್ಕಾದಿಗಳು ಸಕಲ ಶಾಸ್ತ್ರಗಳನೆಲ್ಲ
ನಿರುತದಿಂ ಸಾಧನವ ಬಿಡದೆ ಮಾಡಿದಡೇನು
ಪರಂಜ್ಯೋತಿವಸ್ತುವನ್ನು ತನ್ನೊಳಗೆ ತಿಳಿದು ಸುಖ
ವಿರುವ ವಿದ್ಯಕ್ಕೆಣೆಯ ನಿಜಲಿಂಗ ಭವಭಂಗ ಶರಣಜನವರದ ಜಯತು|| ೯೭