ಪುಟ:ಶತಕ ಸಂಪುಟ.pdf/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಕ್ಷಾಶತಕ - ಪಂಪಾಶತಕ :

ಹರಿಹರನ ಆತ್ಮಕಥೆ ಮತ್ತು ವಿರೂಪಾಕ್ಷನ ಮೇಲಿನ ಆತನ ಉತ್ಕಟ
ಭಕ್ತಿಯನ್ನು ತಿಳಿಸುವ ಮಹತ್ವದ ಕೃತಿಗಳೆಂದರೆ ರಕ್ಷಾಶತಕ ಮತ್ತು ಪಂಪಾಶತಕ.
ಶತಕ ಸಾಹಿತ್ಯ ಕ್ಷೇತ್ರದಲ್ಲಿ ಅಷ್ಟೇ ಅಲ್ಲ, ಒಟ್ಟಾರೆ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ
ಇವುಗಳಿಗೆ ಒಂದು ವಿಶಿಷ್ಟ ಅಗ್ರಮಾನ್ಯ ಸ್ಥಾನ ಮೀಸಲಾಗಿದೆ. ಮಾನವ ಬದುಕಿನ
ಅತಿ ಮುಖ್ಯ ಮೌಲ್ಯಗಳನ್ನು ಸುಲಭ - ಸುಂದರವಾಗಿ ನಿರೂಪಿಸುವುದರಿಂದ ಇವು
ಜನಮಾನಸದಲ್ಲಿ ಅಚ್ಚಳಿಯದ ಮುದ್ರೆಯನ್ನು ಒತ್ತಿ, ತುಂಬ ಜನಪ್ರಿಯ ರಚನೆಗಳಾಗಿ
ಪ್ರಚಾರಪಡೆದಿವೆ.
' ರಕ್ಷಾಶತಕ ' ದಲ್ಲಿ ೧೦೧ ಅಕ್ಷರ ಸಮವೃತ್ತಗಳಿವೆ. ಎಲ್ಲವೂ ಖ್ಯಾತ
ಕರ್ನಾಟಕಗಳು. ಅವುಗಳಲ್ಲಿ ೧೭ ಸ್ರಗ್ಧರಾ ಮತ್ತು ೮೪ ಮಹಾಸ್ರಗ್ಧರಾ ವೃತ್ತಗಳು
ಸಮಾವೇಶಗೊಂಡಿವೆ. ಪ್ರತಿವೃತ್ತ ' ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ '
ಎಂದು ಮುಕ್ತಾಯಗೊಳ್ಳುತ್ತವೆ. ಮೊದಲ ವೃತ್ತದಲ್ಲಿ ವಿರೂಪಾಕ್ಷಸ್ತುತಿ ಇದೆ. ೧೦೦ನೆಯ
ವೃತ್ತದಲ್ಲಿ ಕೃತಿ ಪಠಣದ ಫಲಶ್ರುತಿಯನ್ನು ಹೇಳಲಾಗಿದೆ. ಎರಡರಿಂದ ೯೯ರ
ವರೆಗಿನ ವೃತ್ತಗಳಲ್ಲಿ ಆತ್ಮನ ಮಹಾಯಾತ್ರೆಯ ಕಥೆಯನ್ನು ನಿರೂಪಿಸಲಾಗಿದೆ.
ಆತ್ಮ ಇಲ್ಲಿ ಮುಖ್ಯವಾಗಿ ನಾಲ್ಕು ಪ್ರಶ್ನೆಗಳನ್ನು ಹಾಕಿಕೊಂಡು, ಅವುಗಳಿಗೆ
ಉತ್ತರವನ್ನು ಕಂಡುಕೊಳ್ಳುತ್ತಾನೆ : ತನ್ನ ನಿಜಸ್ವರೂಪವನ್ನು ಅರಿತುಕೊಂಡು
ಪರಮಾತ್ಮನಾಗಿ ಪರಿವರ್ತನೆ ಹೊಂದುತ್ತಾನೆ.
೧. ಹಿಂದೆ ನಾನು ಏನಾಗಿದ್ದೆ ?
೨. ಮನುಜ ಜನ್ಮ ನನಗೆ ಏಕಾಯಿತು ?
೩. ಸಂಸಾರ ದೋಷ, ಅರಿಷಡ್ವರ್ಗಗಳು ನನಗೆ ಎಲ್ಲಿಂದ ಬಂದವು?
೪. ಮುಂದೆ ನಾನು ಏನಾಗುತ್ತೇನೆ ?
ಈ ಒಂದೊಂದೇ ಪ್ರಶ್ನೆಗಳಿಗೆ ಹರಿಹರ ಈ ಕೃತಿಯಲ್ಲಿ ಉತ್ತರಿಸುತ್ತ, ಆತ್ಮನನ್ನು
ಅಜ್ಞಾನ ಕತ್ತಲೆಯಿಂದ ಅರಿವಿನ ಬೆಳಕಿನತ್ತ ಕರೆದುಕೊಂಡು ಸಾಗುತ್ತಾನೆ.
ಆತ್ಮ, ಹಿಂದೆ ಕಲ್ಲು - ಮಣ್ಣು, ಗಿಡ - ಗಂಟೆ, ಖಗ - ಮೃಗ ಮೊದಲಾದ ೮೪
ಲಕ್ಷ ಜೀವರಾಶಿಗಳಲ್ಲಿ ಹುಟ್ಟಿ - ಸತ್ತು, ಹೇಗೋ ಮಾನವ ಜನ್ಮಕ್ಕೆ ಬರುತ್ತದೆ. ಹುಟ್ಟುವ
ಪೂರ್ವದಲ್ಲಿಯೇ ತಾಯಿಯಗರ್ಭದಲ್ಲಿ ಮಾಂಸ ರಕ್ತ, ಮಲಮೂತ್ರ, ಜಠರಾಗ್ನಿಯಲ್ಲಿ
ಸಿಕ್ಕು ಹೊರಳುತ್ತ, ಹುಟ್ಟುವಾಗಲೇ ಸಾವಿನ ನೋವನ್ನು ಅನುಭವಿಸಿ ಹೊರಬರುತ್ತದೆ.
ಬಾಲ್ಯದಲ್ಲಿ ಅರಿವಿಲ್ಲದೆ ಎಲ್ಲೆಲ್ಲೊ ಹೊರಳುತ್ತದೆ. ಏನೇನನ್ನೋ ತಿನ್ನುತ್ತದೆ. ಯೌವ್ವನದಲ್ಲಿ
ಮನೋವಿಕಾರತೆಯಿಂದ, ಸ್ತ್ರೀಲೋಲುಪನಾಗಿ, ಇಂದ್ರಿಯ ಚಾಪಲ್ಯಕ್ಕೆ ಒಳಗಾಗಿ


xv