ವಿಷಯಕ್ಕೆ ಹೋಗು

ಪುಟ:ಶತಕ ಸಂಪುಟ.pdf/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

" ನಿಮಗೆನ್ನಂ ಮಾರುಗೊಟ್ಟೆಂ ಪುರಹರ....................." ರಕ್ಷಾಶತಕ - ೭೮
" ಎನಗಾರ್ ದೈವಂ ವಿರೂಪಾಕ್ಷನೆ..............................." ಅದೇ - ೮೧
" ಎನ್ನಾನಂದಾಬ್ಧಿಯೆ ಎನ್ನನುಪಮ ಸುಧೆಯೆ..............." ಅದೇ - ೯೬
" ಬಿಡೆನೀಶಾ ನಿಮ್ಮ ಪಾದಾಬ್ಜಮನೆಲೆಲೆ ಬಿಡೆಂ ಸೀಳ್ದೊಡಂ ಪೋಳ್ದೊಡಂ........"

ಅದೇ - ೯೮

" ಕರ್ತಾರಂ ನೀನೇ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ......." ಅದೇ - ೯೯
" ಕರೆವುದೆಂದು ಕಾಲ್ವಿಡಿಸಿಕೊಳ್ವುದೆಂದು ದಯಾಕಟಾಕ್ಷದಿಂ ಪೊರೆವುದದೆಂದು...."

ಪಂಪಾಶತಕ-೫

" ನಡೆತಂದೆನ್ನಯ ಕಣ್ಗಳಲಿರು ವಿರೂಪಾಕ್ಷಾ ವಿರೂಪಾಕ್ಷ ನೀಂ......" ಅದೇ - ೭
" ನೋಡದ ಕಣ್ಗಳೇತಕೆ, ಸಲೆ ಕೇಳದ ಕರ್ಣಮದೇಕೆ, ಭಕ್ತಿಯಿಂ ಪಾಡದ ಬಾಯದೇಕೆ...."

ಅದೇ-೮

ಎಂಬಂಥ ಪದ್ಯಗಳಲ್ಲಿ ಭಕ್ತ್ಯೋನ್ಮಾದದ ಕಾವ್ಯಗಂಗೆ ರಭಸವಾಗಿ - ಓತಪ್ರೋತವಾಗಿ
ಹರಿದಿದೆ. ಅದಕ್ಕೆ ಅನುಗುಣವಾದ ಭಾಷೆ - ಅನುರೂಪವಾಗಿ ಬಳಕೆಗೊಂಡಿದೆ.
ಭಾವ ಮತ್ತು ಭಾಷೆ ಸಮರಸಗೊಂಡು ಪದ್ಯಕ್ಕೆ ಭಾವಗೀತೆಯ ಸತ್ವ ಪ್ರಾಪ್ತವಾಗಿದೆ.
ಪೊಗಳೆಂ ಮಿಕ್ಕಿನ ಚಕ್ರಪಾಣಿ ಸರಸಿಜೋದ್ಭೂತ ಸಂಕ್ರಂದನಾ
ದಿಗಳಂ ತಾನೆನೆ ಮರ್ತ್ಯ ಕೀಟಕರ ಮಾತಂತಿರ್ಕೆ ಮತ್ತಾವನಂ
ಬಗೆದಾರೆಂ ಬಿಡದಾ ಹರಂಗೆ ಶಶಿಭೂಷಂಗೀಶ್ವರಂಗೆಯ್ದೆ ನಾ
ಲಗೆಯಂ ಮಾಡೆದೆನೊಲ್ದು ಹಂಪೆಯ ವಿರೂಪಾಕ್ಷಂಗದೇನೆಂದಪೆಂ - ಪಂ.ಶ.೮೧
ಮನುಜರ ಮೇಲೆ ಸಾವವರ ಮೇಲೆ ಕನಿಷ್ಠರ ಮೇಲೆಯಕ್ಕಟಾ
ತನತನಗಿಂದ್ರ ಚಂದ್ರ ರವಿ ಕರ್ಣ ದಧೀಚಿ ಬಲೀಂದ್ರನೆಂದು ಮೇಣ್
ಅನವರತಂ ಪೊಗಳ್ದು ಕೆಡಬೇಡೆಲೆ ಮಾನವ ನೀನರ್ಹನಿಶಂ
ನೆನೆ ಪೊಗಳರ್ಚಿಸೆಮ್ಮ ಕಡುಸೊಂಪಿನ ಪೆಂಪಿನ ಹಂಪೆಯಾಳ್ದನಂ – ಪಂ.ಶ.೮೨
ಎಂಬ ಪದ್ಯಗಳಲ್ಲಿ ವ್ಯಕ್ತವಾದ ಅಭಿಪ್ರಾಯಗಳು ಹರಿಹರನ ಕಾವ್ಯದ ನೂತನ
ಧೋರಣೆಯನ್ನು ಸಾರಿದವು. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹೊಸದೊಂದು
ಕಾವ್ಯಮಾರ್ಗಕ್ಕೆ ನಾಂದಿ ಹಾಡಿದವು. ಮುಂದೆ ಬಂದ ಲಿಂಗಾಯತ ಕವಿಗಳಿಗೆಲ್ಲ
ಮಾರ್ಗಸೂಚಿಯಾಗಿ, ಅವರ ಸಾಹಿತ್ಯಕ್ಕೆ ಹೊಸ ದಿಕ್ಕು ದಿಶೆಯನ್ನು ತೋರಿಸಿಕೊಟ್ಟವು.
"ಮನುಜ ಜನ್ಮದೊಳುದ್ಭವಿಸಿರ್ದುದು ಅಪೂರ್ವಂ
"ಜನಿಯಿಸುತಿರ್ಪ ಕೋಟಿಜನನಂಗಳೊಳ್ ಉತ್ತಮೋತ್ತಮಂ ಮನುಜಭವಂ
ಇದಂ ಪಡೆದುಂ ಮರುಳಾಗಿ ಸತ್ತೊಡೆ, ಈ ಜನನವಿದೆಂದು ಬರ್ಪುದು?

xix