ವಿಷಯಕ್ಕೆ ಹೋಗು

ಪುಟ:ಶತಕ ಸಂಪುಟ.pdf/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವೃಥಾ ಕೆಡದಿರ್, ನಿರಂತರಂ ಪೂಜಿಸು ಮಾನವ ಹಂಪೆಯಾಳ್ದನಂ "
ಎಂಬಲ್ಲಿ ಮಾನವಜನ್ಮ ಅಪೂರ್ವವಾದುದು, ಅದರ ಸಾರ್ಥಕತೆ ಇರುವುದು
ನಿರಂತರ ಹಂಪೆಯಾಳ್ದನನ್ನು ಪೂಜಿಸುವುದರಲ್ಲಿ ಎಂದು ತಿಳಿಸುತ್ತಾನೆ.
" ಹೆಂಡತಿ ಬಾರಳು, ಅರ್ಥವದು ಬಾರದು, ಪುತ್ರರೆ ಬಾರರು
ಇಷ್ಟರುಂ ಸಖೀಜನಂ ಜನನಿಯುಂ ಪಿತನುಂ ಬಾರರು
ತಂಡದ ಪಾಪಪುಣ್ಯಮಿವೆ ಬರ್ಪುವು "
ಎಂಬಲ್ಲಿ ಜೀವನಾಂತ್ಯದಲ್ಲಿ ಬರುವ ವಸ್ತುಗಳು - ಹೆಂಡತಿಮಕ್ಕಳು, ಬಂಧುಬಳಗವಲ್ಲ,
ಪಾಪ - ಪುಣ್ಯಗಳು ಮಾತ್ರ ಎಂದು ಹೇಳುತ್ತಾನೆ.
" ಘನಚೋದ್ಯಂ ನಿನ್ನ ಭಕ್ತಾವಳಿಯ ನಡೆವಳಿ-
ಇಲ್ಲಿ ಜಗಕ್ಕೆ ಪೂಜಿತರುಂ ಅಲ್ಲಿ ಪರಕ್ಕೆ ವಿಶೇಷ ಪೂಜ್ಯರು;
ಇಂತಿಲ್ಲಿಯುಂ ಅಲ್ಲಿಯುಂ ಮರೆವವರ್ "
" ಪುರಾತನರ್ ಪರಿದುದೆ ಗಂಗೆ; ನಿಂದೊಡದು ತೀರ್ಥ;
ಒಡರ್ಚಿತೆ ಕಾರ್ಯ; ಎಂದುದೆ ಹರವರಿ; ಇರ್ದುದೆ ಸಭೆ; ನಿರೀಕ್ಷಣೆಗೆಯ್ದುದೇ
ಲೋಕಪಾವನ "
ಅವರು - ' ದುರ್ವಿಷಯಂಗಳನೊಂದಿ ಬಾಳ್ದವರಲ್ಲ "; " ಕರ್ಮದ ಕೈಯೊಳೆ ಸತ್ತು
ಹೋದವರಲ್ಲ "
" ಕಾಲನ ಬಾಧೆಗೆ ಬಿದ್ದು ಮಡಿದವರಲ್ಲ ", " ಕಾಮ ಕ್ರೋಧ ಮಾಯೆಯ
ಬಾಯಿಗೆ ತುತ್ತಾದವರಲ್ಲ "
" ನೀತಿಯಂ ಬಿಸುಟು ನಡೆದವರಲ್ಲ " " ಮಹಾತ್ಯಾಗಿಗಳು, ಅನುಪಮಚರಿತರು,
ಘನದೀರರು " " ಅವರ ನಡೆ ಉರಿನಡೆವಂತೆ, ಭಾನುನಡೆವಂತೆ, ಸಿಡಿಲ್ ನಡೆವಂತೆ
ದೂಷಕರಿಗೆ "
ಇಂಥ ಮಹಾನುಭಾವರ ನಡೆ - ನುಡಿ ನಮಗೆ ಅದರ್ಶವಾಗಬೇಕು ಎಂದು
ಅರುಹುತ್ತಾನೆ.
ಅವರು ಒಲಿಸಿಕೊಂಡ ಶಿವನು ಸಾಮಾನ್ಯನಲ್ಲ. ಅವನು " ಅನುಪಮ
ದಾನಿ, ಅಪ್ರತಿಮದಾನಿ, ನಿರಂತರದಾನಿ, ಪೆಂಪಿನ ಘನದಾನಿ, ಕೌತುಕದ ದಾನಿ,
ಮಹೋನ್ನತದಾನಿ " ಆತ. " ಮದನವಿರೋಧಿ, ದುರಿತಾಂತಕ, ನವನಿಧಿ, ಪುಣ್ಯನಿಧಿ,
ಭಕ್ತರುತ್ಸವ ನಿಧಿ, ಭಾಗ್ಯನಿಧಿ, ಕೃಪಾನಿಧಿ, ಸಮಸ್ತಭಕ್ತ ಸಂಜೀವನ " - ಎಂದು ತಿಳಿಸುತ್ತಾನೆ.
" ಶರಣಂ ಸಂಸಾರಿಯೇ? ಮಾಣ್ ಪುಸಿ ಪುಸಿ !
ಶರಣಂ ಕಾಮಿಯೆ ? ಪೇಳಲೆಂತುಟು ?

xx