ವಿಷಯಕ್ಕೆ ಹೋಗು

ಪುಟ:ಶತಕ ಸಂಪುಟ.pdf/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಶರಣಂ ತಾಂ ಕ್ರೋಧಿಯೇ? ಸಲ್ಲದು ತೆಗೆ.
ಶರಣಂ ಮರ್ತ್ಯನೆ? ಅಲ್ಲವೈ ಕೇಳ್ !
ಶರಣಂ ನಿರ್ಮಾಯನೆಂತುಂ; ಶರಣನತುಳ ನಿಷ್ಕಾಮಿಯೆಲ್ಲಂದದಿಂದಂ;
ಶರಣಂ ಶಾಂತಂ, ಸುಮರ್ತ್ಯಂ, ಶರಣನಮಮ ತಾನೆ ವಿರೂಪಾಕ್ಷಲಿಂಗಂ "
ಎಂದು ಶರಣನ ಲಕ್ಷಣಗಳನ್ನು ವರ್ಣಿಸುತ್ತಾನೆ.
ಇವರು ತೋರಿದ ಮತ್ತು ಮೆರೆದ ಭಕ್ತಿ ಅತ್ಯಂತ ಶ್ರೇಷ್ಠವಾದ ಜೀವನ
ಮೌಲ್ಯ ಎಂದು ಪ್ರತಿಪಾದಿಸುತ್ತಾನೆ. ಇದು ಬಸವಾದಿ ಶರಣರು ರೂಪಿಸದ
ಮೌಲ್ಯ ಹರಿಹರನಿಗೂ ಇದು ಅನುಕರಣೀಯ ಮತ್ತು ಆದರ್ಶ. ಹೀಗಾಗಿ
ಅವನು ಭಕ್ತಿ ಮೌಲ್ಯವನ್ನು ತನ್ನೆಲ್ಲ ಕೃತಿಗಳ ಜೀವದ್ರವ್ಯವಾಗಿ ಬಳಸಿಕೊಂಡಿದ್ದಾನೆ.
ಈ ಶತಕಗಳು ಅದಕ್ಕೆ ಜೀವಂತ ಸಾಕ್ಷಿ ಎನಿಸಿವೆ.

ಪುಲಿಗೆರೆಯ ಸೋಮ

" ಸೋಮೇಶ್ವರ ಶತಕ ' ದ ಕರ್ತೃ ಸೋಮ. ಮಲಿಗೆರೆಯ ಸೋಮೇಶ
ಈತನ ಇಷ್ಟದೈವ. ಕ್ರಿ.ಶ. ೧೩೦೦ ಈತನ ಕಾಲ. ಪುಲಿಗೆರೆ ಈತನ ಸ್ಥಳ. ಈ
ಸಂಗತಿಗಳು ಈ ಶತಕದ ೧,೩, ೧೦೧ ಮತ್ತು ೧೦೭ ನೆಯ ಪದ್ಯಗಳಿಂದಲೇ
ತಿಳಿದುಬರುತ್ತವೆ:
"....ನೀತಿಯೇ ಸಾಧನಂ ಸಕಲಲೋಕಕ್ಕೆಲ್ಲ ಬೇಕೆಂದು ಪೇಳಿದ ಸೋಮಂ....." ಪ.೩
".......ದೇವದೇವಂ ಪುಲಿಗರೆನಗರೀ ಶಾಸನಾಂಕ ಮೃಗಾಂಕಂ ಸೋಮೇಶಂ
ಸರ್ಪಭೂಷಂ ಸಲಹುಗೆ ಜಗಮಂ ಸರ್ವದಾ ಸುಪ್ರಸನ್ನಂ " -ಪ.೧.
".......ಪುಲಿಗೆರೆ ನಗರೀ ಶಾಸನಾಂಕಾ ಮಹೇಶಾ " -ಪ.೧೦೭.
"ಸ್ವಾಮೀ ನನ್ನಿಂದ ನೀನಿಂತೊರೆಯಿಸಿದೆ ಕೃಪಾದೃಷ್ಟಿಯಂ ಬೀರೆ ಲೋಕ
ಪ್ರೇಮಂ ತಾಳ್ದಿಂತು ನೀತಿ ಪ್ರಕಟನೆ ಪಡೆ ನಾಲ್ಸಾಸಿರಂ ನಾಲ್ಕುನೂರುಂ
ಈ ಮಾಯಾ ಪೂರ್ಣಕಲ್ಯಬ್ದದೆ ಗತಿಸಿ ವಿಕಾರ್ಯಬ್ದದಲ್ಲೀಶ್ವರಾನಿ
ನ್ನಾ ಮಹಾತ್ಮ್ಯಾಂಘ್ರಿಗಿತ್ತೆಂ ಪುಲಿಗೆರಿ ನಗರೀ ಶಾಸನಾಂಕಾ ಮಹೇಶಾ " -ಪ.೧೦೧
ಹೀಗಿದ್ದೂ ಈ ಶತಕದ ಕರ್ತೃವಿನ ಬಗೆಗೆ ಭಿನ್ನಾಭಿಪ್ರಾಯಗಳು ಹುಟ್ಟಿಕೊಂಡಿದ್ದು
ಅಚ್ಚರಿಯ ಸಂಗತಿ. ಕವಿಚರಿತೆಕಾರರು ಈ ಶತಕಕ್ಕೆ ಇರುವ 'ಸೋಮಾರಾಧ್ಯಶತಕ'
ಎಂಬ ಇನ್ನೊಂದು ಹೆಸರನ್ನು ಗಮನಿಸಿ ಇದರ ಕರ್ತೃ ಪಾಲ್ಕುರಿಕೆ ಸೋಮಾರಾಧ್ಯ;
ಈತನ ಕಾಲ ಕ್ರಿ.ಶ.೧೨೦೦ ಎಂದು ಊಹಿಸಿದ್ದರು.
ಎಂ.ಜಿ.ನಂಜುಂಡಾರಾಧ್ಯರು ತಮಗೆ ದೊರೆತ ಸೋಮೇಶ್ವರ ಶತಕದ ಒಂದು

xxi