ಕೆಲವಂ ಸಜ್ಜನ ಸಂಗದಿಂದಲಟಿಯಲ್ ಸರ್ವಜ್ಞನಪ್ಪಂತೆ ಕೇಳ್
ಪಲವುಂ ಪಳ್ಳ ಸಮುದ್ರವೈ ಹರಹರಾ ಶ್ರೀ ಚೆನ್ನಸೋಮೇಶ್ವರಾ - ೨
ಹಲವು ಹಳ್ಳಗಳು ಸೇರಿ ಸಮುದ್ರವಾದಂತೆ ಹಲವು ಮೂಲಗಳಿಂದ ದೊರೆತ
ಅನುಭವವನ್ನು ಸಂಗ್ರಹಿಸಿ ತಾನು ಸರ್ವಜ್ಞನಾಗಿದ್ದಾನಂತೆ. ಈ ಅನುಭವದ
ಆಣಿಮುತ್ತುಗಳೇ ಈ ಶತಕದ ಒಂದೊಂದು ವೃತ್ತಗಳಲ್ಲಿ ಮಾಲೆ ಮಾಲೆಯಾಗಿ
ಹೆಣಿಕೆಗೊಂಡಿವೆ.
ಸೋಮನಿಗೆ ಕವಿ - ವಿದ್ವಾಂಸ - ಕಾವ್ಯಗಳ ಬಗೆಗೆ ಎಲ್ಲಿಲ್ಲದ ಗೌರವ. ಅದನ್ನು
' ಕವಿಯೇ ಸರ್ವರೊಳುತ್ತಮಂ ', 'ಕವಿಯಾಸ್ಥಾನಕೆ ಭೂಷಣಂ', 'ಕವೀಶ್ವರ ಸಂಗೀತದಿ
ಜಾಣನಾಗೆ', 'ಕವೀಂದ್ರರ ಮಹಾದುರ್ಮಾರ್ಗಿಗಳ್, ಕಾವ್ಯದಚ್ಚರಿಯಂ ಗಾಂಪರು
ಜರಿಯಲ್ ಕುಂದಾಗದು', 'ಕವಿಗೆ ವಿದ್ಯಾಮಾತೆಯೇಂ ಬಂಜೆಯೇ', 'ಬುಧನೆ
ತರ್ಕದೊಳಂಜುವಂ ?' 'ಕವಿತಾ ವಿದ್ಯೆ ಸುವಿದ್ಯೆ' ಎಂಬಂಥ ಮಾತುಗಳಲ್ಲಿ
ವ್ಯಕ್ತಪಡಿಸಿದ್ದಾನೆ.
ಶಿವ ಮತ್ತು ಗುರುವಿನಲ್ಲಿ ಕವಿಗೆ ಅಪಾರವಾದ ಭಕ್ತಿ. ಅವರ ಶ್ರೇಷ್ಠತೆಯನ್ನು
ಈ ಕೆಳಗಿನ ಮಾತುಗಳಲ್ಲಿ ಕಟ್ಟಿಕೊಟ್ಟಿದ್ದಾನೆ:
" ಹರನಿಂದುರ್ವಿಗೆ ದೈವವೆ ?" "ಗುರುವಿಂದುನ್ನತ ದೈವವೆ ? " "ಶಿವನೇ
ದೇವರ್ಕಳ್ಗೆ ತಾನಾಸ್ಪದಂ " "ಶಿವನಂ ಬಿಟ್ಟವ ಶಿಷ್ಟನೆ ? " "ಮೃಡ ನೀನಲ್ಲದದಾವ
ಸಾಕುವ ಜಗಕ್ಕಂ " " ಶಿವಜ್ಞಾನವೆ ಯೋಗಿಗಳ್ಗೆ ನಯನಂ".
ಸಾಮಾನ್ಯ ಲೋಕನೀತಿಗೆ ಕೃತಿಯಲ್ಲಿ ಹೆಚ್ಚಿನ ಸ್ಥಾನ ಮೀಸಲಾಗಿದೆ. ಲೋಕದಲ್ಲಿ
ಯಾವುದು ಮಾನ್ಯ ಯಾವುದು ಅಮೂಲ್ಯ. ಯಾವುದು ಭೂಷಣ - ಎಂಬುದನ್ನು
ಅನೇಕ ಉದಾಹರಣೆಗಳ ಮೂಲಕ ತಿಳಿಸಲಾಗಿದೆ.
' ಸವಿವಣಲಿ ಇನಿಮಾವು, ಸರ್ವರಸದೊಳ್ ಶೃಂಗಾರ, ಸಂಬಾರದೊಳ್
ಲವಣ, ಭಾಷೆಗೆ ಬಾಲಭಾಷೆ, ಸಿರಿಯಲ್ಲಿ ಆರೋಗ್ಯ, ದೈವಂಗಳೊಳ್ ಶಿವ,
ಬಿಲ್ಲಾಳನೊಳ್ ಅಂಗಜ, ಜನ್ಮಂಗಳೊಳ್ ಮಾನವಜನ್ಮ ಶ್ರೇಷ್ಠ '.
" ಕವಿಯೇ ಸರ್ವರೊಳುತ್ತಮ; ಕನಕವೇ ಲೋಹಂಗಳೊಳ್ ಶ್ರೇಷ್ಠ;
ಜಾಹ್ನವಿಯೇ ತೀರ್ಥದೊಳುನ್ನತ; ರತುನದೊಳ್ ಸ್ತ್ರೀರತ್ನವೇ ವೆಗ್ಗಳ; ರವಿಯೇ
ಸರ್ವಗ್ರಹಂಗಳೊಳ್ ಬಲ್ಮೆ ".
" ರವಿಯಾಕಾಶಕೆ ಭೂಷಣ; ರಜನಿಗೆ ಚಂದ್ರ ಮಹಾಭೂಷಣ; ಕುವರ
ವಂಶಕೆ ಭೂಷಣ; ಸರಸಿಗೆ ಅಂಬೋಜಾತ ಭೂಷಣ; ಕವಿಯಾಸ್ಥಾನಕೆ ಭೂಷಣ ".
" ಹಿತವಂ ತೋರುವ ಆತ್ಮಬಂಧು; ಪೊರೆದಾಳ್ವಂ ತಂದೆ; ಪಾತಿವ್ರತಾ
XXV