ಸುಂಕಾಪುರ - ನಿಜಲಿಂಗ ಶತಕ ಮತ್ತು ಸೋಮೇಶ್ವರ ಶತಕ. ಪ್ರಸ್ತಾವನೆ. ಪು. ೨೩,
೧೯೬೯)
"ಈ ಶತಕದಲ್ಲಿ ಸಂಸ್ಕೃತ ಸುಭಾಷಿತಗಳ ಛಾಯಾನುವಾದವಿದ್ದಂತೆ,
ಸ್ವತಂತ್ರವಾದ ಲೋಕಾನುಭವ, ಧರ್ಮವಿವೇಕ, ಮಾರ್ಮಿಕತೆ, ಕವಿತ್ವಶಕ್ತಿ ಇವು
ಮೆಚ್ಚುವಂತಿವೆ" (ರಂ. ಶ್ರೀ. ಮುಗಳಿ, ಕನ್ನಡ ಸಾಹಿತ್ಯ ಚರಿತ್ರೆ, ಪು.೧೮೨,
೧೯೭೧)
ವಿದ್ವಾಂಸರ ಈ ಅಭಿಪ್ರಾಯಗಳು ಅನುರೂಪವಾಗಿವೆ.
ಒಟ್ಟಿನಲ್ಲಿ ಸೋಮೇಶ್ವರ ಶತಕಕ್ಕೆ 'ನೀತಿಶತಕ'ಗಳ ಸಾಲಿನಲ್ಲಿ ಒಂದು ಉನ್ನತ
ಸ್ಥಾನ ಮೀಸಲಾಗಿದೆ.
ನಿಜಲಿಂಗಾರಾಧ್ಯ
ಈತನ ವಿಷಯವಾಗಿ ಯಾವುದೇ ಮಾಹಿತಿ ದೊರೆತಿಲ್ಲ. ಕವಿಚರಿತೆಕಾರರು
ಈತನನ್ನು ಪರಿಚಯಿಸುತ್ತ "ಈತ ನಿಜಲಿಂಗಶತಕವನ್ನು ಬರೆದಿದ್ದಾನೆ. ಇವನು
ವೀರಶೈವಕವಿ. ತುಂಗಭದ್ರಾತೀರದಲ್ಲಿರುವ ಖಾದ್ರಿಪುರದ ನಿಜಲಿಂಗೇಶ್ವರನ ಅಂಕಿತದಲ್ಲಿ
ಈ ಗ್ರಂಥವನ್ನು ಬರೆದಿರುವುದರಿಂದ ಬಹುಶಃ ಆ ಸ್ಥಳದವನಾಗಿರಬಹುದು.
ಇವನ ಕಾಲವು ಸು. ಕ್ರಿ.ಶ. ೧೮೦೦ ಆಗಿರಬಹುದೆಂದು ಊಹಿಸುತ್ತೇವೆ" ಎಂದು
ಹೇಳಿದ್ದಾರೆ(ಕ.ಕ.ಚ. ಭಾಗ - ೩, ಪು.೧೫೬: ೧೯೨೯).
ಡಾ. ಎಂ. ಎಸ್. ಸುಂಕಾಪುರ ಅವರು ನಿಜಲಿಂಗಶತಕದ ಕರ್ತೃವನ್ನು
ಕುರಿತು ಹೀಗೆ ಹೇಳುತ್ತಾರೆ: "ಈ ಶತಕವನ್ನು ರಚಿಸಿದ ಕವಿ ನಿಜಲಿಂಗಾರಾಧ್ಯನೆಂದು
ನಂಬಲಾಗಿದೆ. ಶತಕದಲ್ಲಿ ಕವಿ ತನ್ನ ನಾಮ ನಿರ್ದೇಶನವನ್ನು ಮಾಡಿಲ್ಲ. ಈ
ಶತಕದ ಕರ್ತೃ 'ನಿಜಲಿಂಗ'ನೆಂದು ಹೇಳುವುದು ನಾಡಿನ ಈ ಭಾಗದಲ್ಲಿ
ರೂಢಿಯಾಗಿದೆ. ಸಾಮಾನ್ಯವಾಗಿ ಕವಿಯ ಹೆಸರಿನಲ್ಲಿ ಶತಕವನ್ನು
ಸಂಬೋಧಿಸುವುದುಂಟು. ಹೀಗಾಗಿ ನಿಜಲಿಂಗಶತಕದ ಕರ್ತೃ ನಿಜಲಿಂಗನೆಂದು
ಜನತೆ ನಂಬುವುದು ಸಾಧ್ಯವಿದೆ. ಬಲವಾದ ಆಧಾರಗಳು ದೊರೆಯುವವರೆಗೆ
ಇದೇ ಹೆಸರನ್ನೇ ಹೇಳಬೇಕಾಗುತ್ತದೆ....ನಿಜಲಿಂಗಾರಾಧ್ಯನು ತುಂಗಭದ್ರಾತೀರದಲ್ಲಿರುವ
ಖಾದ್ರಿಪುರದವನೆಂದು ದಿ. ಆರ್. ನರಸಿಂಹಾಚಾರ್ಯರು ಹೇಳಿರುವುದು
ಸರಿಯಲ್ಲವೆಂದು ಹೇಳಬೇಕು. ಗಡಿಬಿಡಿಯಲ್ಲಿ 'ಕದ್ರುಭವಪುರ' ಎಂಬುದನ್ನು
'ಖಾದ್ರಿಪುರ' ಎಂದು ಓದಿಕೊಂಡರೋ ಏನೋ? ಇಲ್ಲವೆ ಅವರಿಗೆ ದೊರೆತ
ಹಸ್ತಪ್ರತಿಯಲ್ಲಿ ಹಾಗೇ ಬರೆದಿತ್ತೋ ಏನೋ? ಆದರೆ ನಮಗೆ ದೊರೆತ ಎಲ್ಲ
xxx