ವಿಶ್ವಾಸದ್ರೋಹಿಗಳು, ನೀತಿಹೀನರ ಸ್ವಭಾವ ಚಿತ್ರವನ್ನು ಕೊಡಲಾಗಿದೆ. ೯೬ ರಿಂದ
೯೮ ರವರೆಗಿನ ಪದ್ಯಗಳಲ್ಲಿ ಅರವತ್ನಾಲ್ಕು ವಿದ್ಯೆ, ಹಲವು ಶಾಸ್ತ್ರ, ಛಪ್ಪನ್ನ ಭಾಷೆಗಳ
ಕಲಿತರೇನು 'ಪರಮಾತ್ಮ ವಿದ್ಯೆ' ಗೆ ಅವು ಸಮನಲ್ಲ ಎಂದು ಹೇಳಲಾಗಿದೆ.
ಕೊನೆಯ ಎರಡು ಪದ್ಯಗಳಲ್ಲಿ ಮತ್ತೆ ಶಿವಸ್ತುತಿ ಮಾಡಿ, ಕವಿಯ ಇಷ್ಟದೈವ
ಇರುವ ಸ್ಥಳವನ್ನು 'ತುಂಗಭದ್ರತೀರದೊಳೆಸೆವ ಕದ್ರುಭವಪುರವಾಸ ನಿಜಲಿಂಗ "
ಎಂದು ತಿಳಿಸಿ, ಮುಗಿಸಲಾಗಿದೆ.
'ನಿಜಲಿಂಗಶತಕ' ಮುಖ್ಯವಾಗಿ ಭಕ್ತಿ - ಜ್ಞಾನ - ವೈರಾಗ್ಯ - ನೀತಿಯನ್ನು
ಬೋಧಿಸಲೆಂದೇ ರಚಿತವಾದ ಕೃತಿ. ಇಲ್ಲಿ ಶಿವಭಕ್ತಿಗೆ ಅಗ್ರಸ್ಥಾನ ಸಂದಿದೆ. ಕಾವ್ಯದ
ಪ್ರತಿಯೊಂದು ಪದ್ಯವೂ ಶಿವಭಕ್ತಿ ಸ್ಪರ್ಶವನ್ನು ಪಡೆದಿದೆ. ಇಡೀ ಕಾವ್ಯದ ತುಂಬ
ಶಿವಭಕ್ತಿಯ ಗಂಧ - ಗಾಳಿ ಸೂಸಿದೆ.
ಕವಿ ನಿಜಲಿಂಗಾರಾಧ್ಯ ಉತ್ಕಟ ಶಿವಭಕ್ತ. ಆತನ ಶಿವಭಕ್ತಿ ನಿಷ್ಠೆಗೆ
ಕೊನೆಮೊದಲೆಂಬುದಿಲ್ಲ. ಅದು ನಾನಾ ರೂಪದಲ್ಲಿ, ನಾನಾ ವಿಧ ಉಕ್ತಿಗಳಲ್ಲಿ
ವ್ಯಕ್ತವಾಗಿದೆ. " ನಿಜಲಿಂಗ ಭವಭಂಗ ಶರಣಜನ ವರದ ಜಯತು " ಎಂಬ
ನುಡಿಯಲ್ಲಿ ಹೆಜ್ಜೆ ಹೆಜ್ಜೆಗೆ ಉದ್ಘೋಷಗೊಂಡಿದೆ.
'ಹರ ನಿನಗಿಂದಾರು ಪಿರಿಯರಿಲ್ಲ' 'ಪಿಂಡಾಂಡ ಬ್ರಹ್ಮಾಂಡದೊಳು ತುಂಬಿ
ನಲಿನಲಿದು ನೀನೆ ನೀನಾಗಿಪ್ಪೆ ಜಗದೊಡೆಯ' 'ನಿಮ್ಮ ಸತ್ಕೃತಿಯ ಬಲ್ಲವರಾರು ?'
'ನಿಮ್ಮ ಕಟ್ಟಳೆಗೆ ಸರಿಯುಂಟೆ ?' 'ಸ್ವಯಂಜ್ಯೋತಿ ದೇವ ನೀನಹುದು' 'ದುರಿತಾದ್ರಿ
ಶಂಬ ನೀನಹುದು' 'ಶಿವ ನಿಮ್ಮ ಸ್ಮರಣೆಯ ಬಿಡಲುಂಟೆ ?' 'ನಿನ್ನ ನಿಂದಿಸುವವರು
ನರಕದೊಳು ಸೇರುವರು' 'ನಿಮ್ಮ ನಾಮವನು ಸ್ಮರಿಸದವ ಘನ ಮೂರ್ಖ' '
ನಿನ್ನ ಚಾರಿತ್ರವನ್ನು ಜರಿವವ ಮೂರ್ಖ' 'ನಿಮ್ಮ ಚರಣವ ನಂಬಿದವ ಜಾಣ' '
ಇಂದುಶೇಖರ ನಿಮ್ಮ ಪೂಜಿಪನು ಜಾಣ' 'ದೇವಾಧಿದೇವೇಶ ನಿಮ್ಮಿರವ
ಬಣ್ಣಿಸಲರಿದು'.
"ಶಿವ ನಿಮ್ಮ ಸ್ತುತಿಸಲು ರಗೇಂದ್ರನಂತಿರಬೇಕು
ಶಿವ ನಿಮ್ಮ ನೋಡುವರೆ ಸುರಪನಂತಿರಬೇಕು
ಶಿವ ನಿಮಗೆ ಪುಷ್ಪಾರ್ಚನೆಯ ಮಾಡುವರೆ ಕಾರ್ತಿವೀರ್ಯನಂತಿರಲುಬೇಕು
ಶಿವ ನಿಮ್ಮ ಪೂಜಿಸಲು ಬಾಣನಂತಿರಬೇಕು
ಶಿವ ಕತೆಯ ಕೇಳೆ ರಾವಣನಂತೆಯೆನಗೆಯಿಂ
ತಿವನೆಲ್ಲ ಕೊಡದಾದೆ ನಿಜಲಿಂಗ ಭವಭಂಗ ಶರಣಜನ ವರದ ಜಯತು "
" ನಿನ್ನ ನಾಮಾಮೃತವ ಹಾಯೆಂದು ಸವಿವಂತೆ
xxxiii