ವಿಷಯಕ್ಕೆ ಹೋಗು

ಪುಟ:ಶತಕ ಸಂಪುಟ.pdf/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

- ತನಗಿಂತ ಬಲ್ಲಿದರೊಳು ಪಂತವ ಕಟ್ಟಿಕೊಂಬವ ಮೂರ್ಖ
- ಮನ್ನಣೆಯ ಕೊಡದ ಠಾವಿಗೆ ಹೋಗುವವ ಮೂರ್ಖ
- ತನ್ನೊಳೇನುವನರಿಯದೆ ಉನ್ನತೋನ್ನತ ಪಂಡಿತರ ಹಳಿಯುವವ
ಮೂರ್ಖ
- ಜನನಿ ಜನಕರ ಬೈದು ಬಳಲಿಸುವವ ಬಲುಮೂರ್ಖ
- ಗಾಡಿಕಾರ್ತಿಯರೊಲವನು ನೆರೆನಂಬಿ ನಿಜವೆಂದು ಮರುಳುಗೊಂಡವ
ಮೂರ್ಖ
- ಸೃಷ್ಟಿಗೀಶ್ವರ ನಿಮ್ಮ ಸ್ತುತಿಗಳನು ಜಗದೊಳಗೆ ಬಿಟ್ಟವನು ಬಲುಮೂರ್ಖ
ಜಾಣ ಪದ್ಧತಿ ಹೀಗಿದೆ:
- ಲೋಕದೊಳವರವರ ತೆರದಿ ನಡೆವವ ಜಾಣ
- ಕಾಕು ಮನುಜರನು ಸರಿಗಟ್ಟಿಕೊಳದವ ಜಾಣ
- ಭೂಕಾಂತರಾಸ್ಥಾನದಿ ಜೋಕೆಯಿಂದೇಕಚಿತ್ತದಿ ನಡೆವವ ಜಾಣ
- ಮಂದಮತಿ ನಿಂದಿಸಲು ತಾಳಿಕೊಂಡವ ಜಾಣ
- ಒಂದೆ ಮನದಲಿ ಧ್ಯಾನವ ಮಾಡುವವ ಜಾಣ
- ಬಂದ ಬಲುಚಿಂತೆಯೊಳು ಧೈರ್ಯವಿಡಿದವ ಜಾಣ
- ಸತಿಯಳಿಗೆ ಸಲುಗೆಯನು ಕೊಡದವನು ಕಡುಜಾಣ
- ಚತುರನುಡಿ ಬಾರದಿರೆ ಸುಮ್ಮನಿರುವವ ಜಾಣ
- ಯೋಗ್ಯವಲ್ಲದ ನುಡಿಗಳ ಶ್ರುತಿಗೊಟ್ಟು ಕೇಳದವ ಜಾಣ
- ಕ್ಷುಧೆಯಿಲ್ಲದಾರೋಗಣೆಯ ಮಾಡದವ ಜಾಣ
- ಮೃದುನುಡಿಯನಾಡುತಹುದೆನಿಸಿಕೊಂಬವ ಜಾಣ
- ತನುಜರೊಳು ಕೋಪವನು ಹಿಡಿಯದವ ಜಾಣ
- ಮನೆಯ ಕದನವನು ಪರರೊಳು ಪೇಳದವ ಜಾಣ
- ಧನವಿರಲು ಧರ್ಮವನು ಗಳಿಸಿಕೊಂಬವ ಜಾಣ
- ದುರ್ಜನರು ಹಳಿವುತಿರಲು ಮನದೊಳಗೆ ಹಿಡಿದವ್ರತಗಳ ಬಿಡದವ ಜಾಣ
- ಇಂದುಶೇಖರ ನಿಮ್ಮ ಪೂಜಿಪನು ಕಡುಜಾಣ
ಹೀಗೆಯೇ ಲೋಕನೀತಿಯನ್ನು ಬೋಧಿಸುವ ನುಡಿಗಳು ಶತಕದ ತುಂಬೆಲ್ಲ
ಮಾಲೆಗಟ್ಟಿ ನಿಂತಿವೆ. ಕವಿಯ ಲೋಕಾನುಭವ, ಸಾಮಾಜಿಕ ಕಳಕಳಿ, ಬದುಕಿನ
ಸಾರ್ಥಕತೆಯ ಹಂಬಲ, ಲೌಕಿಕದಿಂದ ಪಾರಮಾರ್ಥಿಕತೆಯ ಎಡೆಗೆ ಸಾಗಬೇಕೆಂಬ
ಉತ್ಕಟೇಚ್ಛೆ, ಲೋಕಕಲ್ಯಾಣದ ಅಭೀಪ್ಸೆ - ಪ್ರತಿಯೊಂದು ನುಡಿಯಲ್ಲಿಯೂ

xxxv