ವಿಷಯಕ್ಕೆ ಹೋಗು

ಪುಟ:ಶತಕ ಸಂಪುಟ.pdf/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ತುಂಬಿಕೊಂಡು ಮಾನವನ ಸುಂದರ ಸುಸಂಸ್ಕೃತ ಬದುಕಿಗೆ ದಾರಿದೀಪವಾಗಿವೆ.
ಅಂಥ ಇನ್ನೂ ಕೆಲವು ನೀತಿಮುಕ್ತಕಗಳನ್ನು ಇಲ್ಲಿ ಹೀಗೆ ರಾಶಿಗೊಳಿಸಬಹುದು:
- ಕಾಪುರುಷರಿಗೆ ಸುಜನರಿಂಗಿತದ ತಿಳಿಯುಂಟೆ ?
- ಕೋಪಿಗಳ ಮನದೊಳಗೆ ಕರುಣಗುಣವಿರಲುಂಟೆ ?
- ಪಾಪಿ ಮನುಜರಿಗೆಲ್ಲ ಧರ್ಮ ವಾಸನೆಯುಂಟೆ ?
- ನಿಂದಕಗೆ ನೀತಿಯುಂಟೆ ? ಬಲ್ಲರ್ಗೆ ಭಯಯುಂಟೆ ?
- ಖೂಳರಿಗೆ ಸತ್ಯವುಂಟೆ ?
- ಧುರಧೀರನಾದವಗೆ ಮರಣದಂಜಿಕೆಯುಂಟೆ ?
- ವರಜಿತೇಂದ್ರಿಗೆ ಚದುರೆಯರ ಹಂಬಲಿರಲುಂಟೆ ?
- ಮೆರೆವ ತ್ಯಾಗಿಗೆ ಹಣದ ಪರವೆಯೆಂಬುದುಂಟೆ ?
- ಪರಮ ಸುಜ್ಞಾನಿಗಳಿಗತಿ ಗರ್ವವಿರಲುಂಟೆ ?
- ಧೃಡವಿಲ್ಲದ ಭಜನೆ ಸಿದ್ದಿಯಾಗುದುಂಟೆ ?
- ಕಡುಮಂದಮತಿಗೆ ಪೇಳಲು ಜ್ಞಾನಬರಲುಂಟೆ ?
- ನಡತೆಹೀನನ ಹೃದಯದೊಳು ಭಕ್ತಿಗುಣವುಂಟೆ ?
- ಬಡಮನದವಂಗೆ ಔದಾ‌ರ್ಯಬುದ್ದಿಗಳುಂಟೆ
- ಪಡೆದುದಲ್ಲದೆ ಹೆಚ್ಚು ಬರಲುಂಟೆ ?
- ಸಂಗೀತ ಸವಿಯು ಬಧಿರಂಗೆ ತೋರುವುದುಂಟೆ ?
- ಕಂಗುರುಡನಿಗೆ ಕನ್ನಡಿಯ ಹಂಬಲುಂಟೆ ?
- ಮರಣಕಾಲಕೆ ಪಿರಿದು ಅರಸುತನ ಬರಲೇನು ?
- ಪರಮರೋಗದೊಳು ಘೃತಪರಮಾನ್ನಬರಲೇನು ?
- ಹರಿಣಾಕ್ಷಿ ವೃದ್ಧನಾಗಿರುವಾಗ ಬರಲೇನು ?
- ಧರಣಿಯೊಳು ಬೆಳೆದ ಫಲವು ಉರಿದುಹಾರಿದ ಬಳಿಕ
ಭರದಿ ಮಳೆ ಬರಲೇನು ?
- ಪತಿಯ ನಿಂದಿಸುತಿಪ್ಪ ಸತಿಯಿದ್ದು ಫಲವೇನು ?
- ಅತಿಮಂದಮತಿಯಾದ ಸುತನಿದ್ದು ಫಲವೇನು ?
- ಚೋರ ನಿಂದಿಸಲಾಗಿ ಚಂದಿರಗೆ ಕುಂದೇನು ?
- ಬಲು ಲೋಭಿಗಳ ಬಳಿಯೆ ಧನವಿದ್ದು ಫಲವೇನು ?
- ಕಲಿಯಿಲ್ಲದವಗೆ ಚಂದ್ರಾಯುಧವು ಇದ್ದೇನು ?
- ಲಲಿತ ವೀಣೆಯ ಧ್ವನಿಯು ಕೋಣಂಗೆ ತಿಳಿಯುಂಟೆ ?

xxxvi