ಪುಟ:ಶತಕ ಸಂಪುಟ.pdf/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

- ಅರಗಿಳಿಗಳಂತೆ ಮರಕುಟಿಕ ಮಾತನಾಡುವುದೆ ?
- ವರ ಕೋಕಿಲನ ತೆರದಿ ಕಾಕ ಧ್ವನಿದೋರುವುದೆ ?
- ಕುರಿಗಳಿಗೆ ಕಬ್ಬಿನೊಳಿಹ ರಸವು ಬರಲುಂಟೆ ?
- ಶಿಲೆಯ ಮೇಲರವಿಂದವುದ್ಭವಿಸಿ ತೋರುವುದೆ ?
- ಜಲವ ಮರ್ದಿಸಲು ನವನೀತ ಪೊಣ್ಮುವುದೆ ?


" ಆವ ಮನೆಯೊಳಗಿಪ್ಪ ದೀವಿಗೆಯ ಬೆಳಗೊಂದೆ
ಆವ ಹಸುವನ್ನು ಕರೆಯೇ ಕ್ಷೀರರುಚಿ ಕರವೊಂದೆ
ಆವ ಕೃಷಿಯೊಳು ಬೆಳೆದ ತಿಲದೊಳಗೆ ಬಪ್ಪ ತೈಲವ ನೋಡೆ ಗುಣಮದೊಂದೆ
ಆವ ಕುಲದೊಳಗಿರಲು ಆವ ನಾಮದೊಳಿರಲು
ಆವ ರೂಪಾಗಿರಲು ಒಳಗಿರುವ ಸ್ವಯಂ ಜ್ಯೋತಿ
ದೇವ ನೀನಹುದಹುದು ನಿಜಲಿಂಗ ಭವಭಂಗ ಶರಣಜನ ವರದ ಜಯತು "


" ಮಾರುತನು ನಡೆತಂದ ಸಮಯದಲಿ ಧಾನ್ಯವನ್ನು ತೂರಿಕೊಳಬೇಕು;
ಶರೀರದೊಳು ಪ್ರಾಣನಾಯಕನಿದ್ದ ಸಮಯದಲಿ ಶಿವ ನಿಮ್ಮ ಹಾಡಿಹೊಗಳಿ
ಭೂರಿ ಪಾಪವನೆಲ್ಲ ಈಡಾಡಬೇಕು "


ನಿಜಲಿಂಗಾರಾಧ್ಯ ಹೇಗೆ ನೈತಿಕನೋ ಹಾಗೆ ರಸಿಕನೂ ಆಗಿದ್ದಾನೆ. ತನ್ನ
ಕಾವ್ಯ ನೀತಿಬೋಧೆಯ ಜೊತೆಗೆ ಲೋಕರಂಜನೆಯನ್ನೂ ಉಂಟು
ಮಾಡಬೇಕೆಂಬುದು ಆತನ ಬಯಕೆ. ಕಾವ್ಯದ ಗುರಿ ತಕ್ಷಣ ಆನಂದವನ್ನು
ನೀಡುವುದೂ, ಕಾಂತೆಯಂತೆ ಉಪದೇಶ ಮಾಡುವುದೂ ಆಗಿರಬೇಕೆಂಬುದು
ಆತನ ಆಸೆ. ಹೀಗಾಗಿ ಎರಡನ್ನೂ ಇಲ್ಲಿ ಸಾಧಿಸಲು ಪ್ರಯತ್ನಿಸಿ ಯಶಸ್ವಿಯಾಗಿದ್ದಾನೆ.
ಆತನ ರಸಿಕತೆಗೆ, ಶೃಂಗಾರರಸ ಪ್ರತಿಪಾದನೆಗೆ ಈ ಕೆಳಗಿನ ಉದಾಹರಣೆ ಸಾಕ್ಷಿಯಾಗಿವೆ:
ಕಡುಚೆಲುವೆ ಪಾರ್ವತಿಯ ತೊಡೆಯಡಿಯೊಳಿಂಬಿಟ್ಟು
ನಿಡುಗುರುಳ ನೇವರಿಸಿ ಕುಡಿಪುರ್ಬುಗಳ ತೀಡಿ
ಇಡಿಕಿರಿದ ನುಣ್ಗಲ್ಲವಿಡಿದು ಗುಣ್ಪಿಡುತ ಪೊಂಗೊಡಮೊಲೆಯೊಳುಗುರನಿಡುತ
ಮುಡಿಸಿ ಪೂಸರಸಗಳನು ಮುಡಿವಿಡಿದು ಚೆಂದುಟಿಯ
ಬಿಡದೆ ಚುಂಬನಗೈವುತಡಿಗಡಿಗೆ ಹಾಯೆನುತ
ಬೆಡಗಿನಿಂದೊಡವೆರೆದ ನಿಜಲಿಂಗ ಭವಭಂಗ ಶರಣಜನವರದ ಜಯತು.

xxxvii