ಗಳ ರವದಿ ಚುಂಬನಂಗಳ ರವದಿಯಂಗುಲಂ
ರಳ ರವದಿ ಕಂಕಣಂಗಳ ರವದಿ ಕಾಲ್ಗೆಜ್ಜೆ
ಗಳ ರವದಿ ತಾಡನಂಗಳ ರವದಿ ಹಾರ ಹೀರಾವಳಿಯ ರವದಿಂದಲಿ
ಹೊಳೆ ಹೊಳೆವ ಶಕುನಿಮಂಚದ ರವದಿ ಜಾಣ್ವಾತು
ಗಳನಾಡುತಿರ್ಪ ರವದಿಂದೆ ಗಿರಿರಾಜಸುತೆ
ಯೊಳು ಸುರತಸವಿಗರೆವ ನಿಜಲಿಂಗ ಭವಭಂಗ ಶರಣಜನವರದ ಜಯತು.
ಅಂಗಜನ ಮುಂಗೈಯ್ಯ ಗಿಣಿಯೆ ಮುತ್ತಿನಮಣಿಯೆ
ತುಂಗಜವ್ವನೆಯೆ ಸದ್ಗುಣಶ್ರೇಣಿಯೆ ಫಣಿವೇಣಿ
ಭೃಂಗಕುಂತಳೆ ಚಂದ್ರಮುಖಿಯೆ ಹರಿಣಾಂಬಕಿಯೆ ಶೃಂಗಾರಿ ಹೊಂತಕಾರಿ
ಪೊಂಗಳಸಕುಚದ ಮೋಹನ್ನೆ ಮಾನಿನಿ ರನ್ನೆ
ಇಂಗಿತವ ಬಲ್ಲ ವೈಯಾರಿ ಮನಹಾರಿಯೆನು
ತಂಗನೆಯ ತಕ್ಕೈಪ ನಿಜಲಿಂಗ ಭವಭಂಗ ಶರಣಜನವರದ ಜಯತು.
ಇದು ಶಿವ - ಪಾರ್ವತಿಯರ ಸರಸ ಸಲ್ಲಾಪದ ಸುಂದರ ಚಿತ್ರಣ.
ಹೀಗೆ ನಿಜಲಿಂಗಶತಕ ಭಕ್ತಿ ಮತ್ತು ಶೃಂಗಾರ ರಸಗಳನ್ನು
ಸಮರಸಗೊಳಿಸಿಕೊಂಡು ಓದುಗರ ಮನ-ಹೃದಯಗಳನ್ನು ಸೂರೆಗೊಳ್ಳುತ್ತಬಂದಿದೆ.
ಕವಿಯು ಪಂಡಿತ-ಲೋಕಾನುಭವಿ-ಭಕ್ತ-ರಸಿಕ-ನೀತಿಜ್ಞ ಎಲ್ಲವೂ ಆಗಿ ತನ್ನ ಈ
ಸಮಷ್ಟಿ ವ್ಯಕ್ತಿತ್ವದ ಸಾರವನ್ನು ಈ ಶತಕದಲ್ಲಿ ಧಾರೆಯೆರೆದಿದ್ದಾನೆ. ಕೆಲವು ಪದ್ಯಗಳಲ್ಲಿ
ಪಾಂಡಿತ್ಯ ಪ್ರದರ್ಶನ ಕಂಡುಬಂದರೆ, ಹೆಚ್ಚಿನ ಪದ್ಯಗಳಲಿ ಸರಳ-ಸರಸ-ಸಜ್ಜನಿಕೆ
ತೋರುತ್ತದೆ. ಹೀಗಾಗಿ ಈ ಕೃತಿ ಪಂಡಿತ ಮತ್ತು ಪಾಮರ ಇಬ್ಬರಿಗೂ ಮಾನ್ಯವಾಗಿ
ಹೆಚ್ಚು ಜನಪ್ರಿಯತೆಯನ್ನು ಗಳಿಸಿದೆ.
ಪರಿಷ್ಕರಣೆ:
ಈ ಸಂಪುಟದಲ್ಲಿ ಅಳವಡಿಸಿದ ಶತಕಗಳನ್ನು ಈ ಹಿಂದೆ ಪ್ರಕಟವಾದ
ಮುದ್ರಿತ ಕೃತಿಗಳು ಮತ್ತು ಹೊಸದಾಗಿ ದೊರೆತ ಹಸ್ತಪ್ರತಿಗಳ ಆಧಾರದಿಂದ
ಪರಿಷ್ಕರಿಸಲಾಗಿದೆ. ರಕ್ಷಾಶತಕ-ಪಂಪಾಶತಕಗಳ ಪರಿಷ್ಕರಣಕ್ಕೆ ಪ್ರೊಶಿ. ಶಿ. ಬಸವನಾಳ
ಅವರು ಸಂಪಾದಿಸಿ, ಧಾರವಾಡದ ಲಿಂಗಾಯತ ವಿದ್ಯಾಭಿವೃದ್ಧಿಸಂಸ್ಥೆಯ ಮೂಲಕ
ಪ್ರಕಟಿಸಿದ 'ಮಹಾಕವಿ ಹಂಪೆಯ ಹರಿಹರದೇವ ವಿರಚಿತ ರಕ್ಷಾಶತಕ ಮತ್ತು
ಪಂಪಾಶತಕ' ಎಂಬ ಮುದ್ರಿತ ಕೃತಿಯ-೧೯೬೯ರಲ್ಲಿ ಪ್ರಕಟವಾದ-ಮೂರನೆಯ
ಆವೃತ್ತಿಯನ್ನು ಮತ್ತು ಕರ್ನಾಟಕ ವಿಶ್ವವಿದ್ಯಾಲಯ ಕನ್ನಡ ಅಧ್ಯಯನಪೀಠದ
xxxviii